ಕೃಷ್ಣ ಕೃತಿಯಲ್ಲಿ ಬರೆಯುತ್ತಾರೆ: ಮೃದಂಗ ತಯಾರಿಕೆಯಲ್ಲಿ ಪರಾಂಡುವಿನ ಸಾಟಿಯಿಲ್ಲದ ನೈಪುಣ್ಯದ ಕುರಿತು
ಲೆಕ್ಕವಿಲ್ಲದಷ್ಟು ಕಥೆಗಳಿವೆ. ಅವರ ಮಗ ಸೆಲ್ವರಾಜ ಹೇಳಿದ, ಗಾಢವಾದ ಒಳನೋಟ ಹೊಂದಿದ ಒಂದು ಚಿತ್ರಣದೊಂದಿಗೆ ಶುರು ಮಾಡುವೆ: 'ಆತ ಒಬ್ಬೊಬ್ಬ ಗಾಯಕನನ್ನು ಪ್ರತಿನಿಧಿಸಲು ಒಂದೊಂದು ರಾಗವನ್ನು ತನ್ನೊಳಗೆ ಇಟ್ಟುಕೊಂಡಿದ್ದ.' ಅಂದರೆ ಪಾಂಡು ತಾನು ಸಂಬಂಧವಿಟ್ಟುಕೊಂಡಿದ್ದ ಪ್ರತೀ ಸಂಗೀತಗಾರರ ಗಾಯನ ಅಥವಾ ವಾದನದ ಕೃತಿಯೊಂದನ್ನು ನೆನಪಿಟ್ಟುಕೊಂಡಿದ್ದರು. ಈ ಸಂಗೀತಾತ್ಮಕ ನೆನಪಿನಿಂದ ಅವರು ಕಲಾವಿದರ ಶಾರೀರದ ವ್ಯಾಪ್ತಿ, ಅವರ ಸಂಗೀತದ ವಿಸ್ತಾರ ಮತ್ತು ಶ್ರುತಿ. ಇವುಗಳನ್ನು ಚೆನ್ನಾಗಿ ಗ್ರಹಿಸಿ ಅಂತರ್ಗತಗೊಳಿಸಿಕೊಂಡಿದ್ದರು. 'ತಂಬೂರಾವನ್ನು ಸುಮ್ಮನೆ ಮೀಟಿದರೂ ಸಾಕು. ಆತನ ಮೃದಂಗವು ಪಕ್ಕಾ ಶ್ರುತಿಯಲ್ಲಿರುತ್ತಿತ್ತು' ಎಂದರು ಸೆಲ್ವರಾಜ್. ಪಾಂಡುವಿಗೆ ಕಿವಿ ಅಷ್ಟು ಸರಿಯಾಗಿ ಕೇಳಿಸುತ್ತಿರಲಿಲ್ಲ ಎನ್ನುವುದರ ಹಿನ್ನೆಲೆಯಲ್ಲಿ ಈ ಅಂಶವು ಇನ್ನಷ್ಟು ಬೆಕ್ಕಸಬೆರಗಾಗುವಂತೆ ಮಾಡುತ್ತದೆ. ತಾನು ಕೇಳದಿದ್ದಾಗ ಕೂಡ ಸಂಗೀತ ಸಂಯೋಜನೆ ಮಾಡಿದ ಬೀಥೋವನ್ ಹಾಗೆ. ಪಾಂಡು ತಾನು ಮನಸ್ಸಿನಲ್ಲಿ ಜತನ ಮಾಡಿಟ್ಟುಕೊಂಡಿದ್ದ ಸಂಗೀತಕ್ಕೆ ಲಕ್ಷ್ಯ ಗೊಡುವ ಮೂಲಕ ಮೃದಂಗಗಳನ್ನು ತಯಾರು ಮಾಡಿದರು.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.