Free Shipping Above ₹500 | COD available

Parasika Deshakaladalli Bharata Sale -10%
Rs. 674.00Rs. 749.00
Vendor: BEETLE BOOK SHOP
Type: PRINTED BOOKS
Availability: 10 left in stock
ರಿಚರ್ಡ್ ಮ್ಯಾಕ್ಸ್ವೆಲ್ ಈಟನ್ । ಅನುವಾದ : ಓ ಎಲ್ ನಾಗಭೂಷಣಸ್ವಾಮಿ

ಭಾರತ ಮತ್ತು ದಕ್ಷಿಣ ಏಶಿಯದ ಬಗ್ಗೆ ಐದಾರು ದಶಕಗಳ ಅಧ್ಯಯನ ಮಾಡಿರುವ ಮಹತ್ವದ ಚರಿತ್ರೆಕಾರ ಈಟನ್
ಹನ್ನೊಂದರಿಂದ ಹದಿನೆಂಟನೆಯ ಶತಮಾನದವರೆಗಿನ ದಕ್ಷಿಣ ಏಶಿಯದ ಚರಿತ್ರೆಯನ್ನು ೨೦೨೦ರಲ್ಲಿ ಪ್ರಕಟವಾದ ಈ ಪುಸ್ತಕದಲ್ಲಿ ನಿರೂಪಿಸಿದ್ದಾರೆ.
ಸುಮಾರು ಎಂಟು ಶತಮಾನಗಳ ಕಾಲ ನಡೆದ ಸಂಸ್ಕೃತ ಮತ್ತು ಪರ್ಶಿಯನ್ ಜಗದ್ವಲಯಗಳ ಕೊಡುಕೊಳುಗೆಗಳತ್ತ ಈ ಪುಸ್ತಕ ನಮ್ಮ ಗಮನ ಸೆಳೆಯುತ್ತದೆ. ಹದಿನೆಂಟನೆಯ ಶತಮಾನದಲ್ಲಿ ಯೂರೋಪಿಯನ್ನರು ಬರುವವರೆಗೆ ಭಾರತದ ನಾಗರಿಕತೆ ಜಡವಾಗಿತ್ತು, ಭಾರತಕ್ಕೆ, ಹೊರಗಿನ ಜಗತ್ತಿನ ಚರಿತ್ರೆಯ ಸಂಪರ್ಕವಿರಲಿಲ್ಲ ಭಾರತವು ತನ್ನಷ್ಟಕ್ಕೇ ಬೆಳವಣಿಗೆ ಹೊಂದಿದ ಹಿಂದೂ ಸಂಸ್ಕೃತಿ ಮತ್ತು ನಾಗರಿಕತೆ ಹಾಗೂ ಮಧ್ಯಯುಗವೆಂದು ಕರೆಯಲಾಗುವ ಅವಧಿಯು ಮುಸ್ಲಿಂ ಯುಗ, ಅಥವಾ ಕತ್ತಲ ಯುಗವೆಂಬ ಸಿದ್ಧಮಾದರಿಯ ಚಿಂತನೆಗಳನ್ನು ಈ ಪುಸ್ತಕ ಪ್ರಶ್ನಿಸುತ್ತದೆ.
ಹದಿನಾರನೆಯ ಶತಮಾನದಲ್ಲಿ ಸ್ಪೇನ್ ಅಮೆರಿಕ ಖಂಡದಲ್ಲಿ ತನ್ನ ಸಮ್ರಾಜ್ಯವನ್ನು ಸ್ಥಾಪಿಸಿ,. ಸ್ಥಳೀಯ ಧರ್ಮಗಳನ್ನು ಸಮಾಜ
ವ್ಯವಸ್ಥೆಗಳನ್ನು ನಾಶಮಾಡಿ, ಕ್ರಿಶ್ಚಿಯನ್ ಮತಾಂತರ ಕಾರ್ಯಸೂಚಿಯನ್ನು ಜಾರಿಗೊಳಿಸಿತು. ಈ ಅವಧಿಯನ್ನು ಅಮೆರಿಕ ಖಂಡದ ಮೇಲೆ ‘ಕ್ರಿಶ್ಚಿಯನ್ ದಿಗ್ವಿಜಯ’ ಎಂದು ಚರಿತ್ರೆಕಾರರು ವರ್ಣಿಸುವುದಿಲ್ಲ. ಅಂಥ ಘಟನೆಗಳು ನಡೆದ ಅವಧಿಯನ್ನು ಕುರಿತು ಭಾರತದ ಮೇಲೆ ಮುಸ್ಲಿಂ ದಿಗ್ವಿಜಯವೆಂಬ ನಿರೂಪಣೆ ಬಲಗೊಳ್ಳಲು ಕಾರಣವೇನೆಂಬ ಪರಿಶೀಲನೆ ಇಲ್ಲಿದೆ.
ಬೌದ್ಧ ಧರ್ಮದ ಕಣ್ಮರೆ, ಸಿಖ್ ಧರ್ಮ ಉದಯ, ರಜಪೂರ ಸಮುದಾಯ ರೂಪುಗೊಂಡದ್ದು, ಜಗತ್ತಿನ ಅತಿ ದೊಡ್ಡ ಮುಸ್ಲಿಂ ಸಮಾಜದ ಬೆಳವಣಿಗೆ.. ವಿಶಾಲವಾದ ಅರಣ್ಯಗಳು ವ್ಯವಸಾಯ ಭೂಮಿಯಾಗಿ ಬದಲಾದದ್ದು, ಬುಡಕಟ್ಟು ಜನರು ವಿವಿಧ ಜಾತಿಗಳಾಗಿ ಹಿಂದೂ ಸಮಾಜವ್ಯವಸ್ಥೆಯಲ್ಲಿ ಒಂದಾದದ್ದು, ವಸ್ತ್ರಗಳ ಉತ್ಪಾದನೆ ಮತ್ತು ರಫ್ತಿನ ಕಾರಣಗಳಿಂದ ಭಾರತವು ಜಗತ್ತಿನ ಕೈಗಾರಿಕಾ ಶಕ್ತಿಕೇಂದ್ರವಾದದ್ದು ಇಂಥ ಸಾಂಸ್ಕೃತಿಕ, ಸಾಮಾಜಿಕ ಬದಲಾವಣೆಗಳ ಯುಗದ ಕಥನ ಈ ಪುಸ್ತಕದಲ್ಲಿದೆ.
ಈ ಪುಸ್ತಕವು ದಕ್ಷಿಣ ಏಶಿಯ ಪ್ರದೇಶಕ್ಕೂ ಪರ್ಶಿಯನ್ ಸಂಸ್ಕೃತಿ ಮತ್ತು ಇಸ್ಲಾಂಗಳಿದ್ದ ಇರಾನ್ ಪ್ರಸ್ತಭೂಮಿಗೂ ಇದ್ದ ಗಹನವಾದ ಸಂರ್ಪಕ, ಸಂಬಂಧಗಳನ್ನು ಪರಿಶೀಲಿಸುತ್ತದೆ. ಧರ್ಮ, ಜಾತಿ, ಭೌಗೋಳಿಕ ಗಡಿಗಳಿಲ್ಲದೆ ವಿಶ್ವಾತ್ಮಕ ಭಾಷೆಗಳಾಗಿ ಬೆಳೆದ ಸಂಸ್ಕೃತ ಮತ್ತು ಪರ್ಶಿಯನ್ ಜಗದ್ವಲಯಗಳ ಕೊಡುಕೊಳೆಯೆಂಬ ಕೋನದಿಂದ ಭಾರತದ ಮಧ್ಯಯುಗದ ಅವಧಿಯ ಚರಿತ್ರೆ, ಸಮಾಜಗಳ ನಿರೂಪಣೆಯನ್ನು ಈಟನ್ ಅವರ ಈ ಕೃತಿ ನಮಗೆ ನೀಡುತ್ತದೆ. ಭಾರತದ ಚರಿತ್ರೆಯ ಬಗ್ಗೆ ಹೊಸ ನೋಟವನ್ನು ಒದಗಿಸುತ್ತದೆ

Guaranteed safe checkout

Parasika Deshakaladalli Bharata
- +

• We deliver the books you order at beetlebookshop within 3-4 working days via india speed post .

Return of any defective / damage item should be done within 7 days from the date of the receipt of the shipment to our working office.