ವಿಜ್ಞಾನ ಕಷ್ಟ ಎಂದು ಎಲ್ಲರೂ ಹೇಳುತ್ತಾರೆ. ಆದರೆ, ವಿಜ್ಞಾನ ನಮ್ಮ ಬದುಕನ್ನು ವ್ಯಾಪಕವಾಗಿ ಪ್ರಭಾವಿಸುವುದರಿಂದ, ಅಲ್ಲಿನ ಅನೇಕ ವಿಷಯಗಳನ್ನು ತಿಳಿದು ಕೊಂಡಿರುವುದು ಅನಿವಾರ್ಯವೇ ಆಗಿಬಿಟ್ಟಿದೆ. ಇಂದಿನ ಕಾಲದಲ್ಲಿ ಮಾಹಿತಿಯೇನೋ ಸುಲಭ ಲಭ್ಯ, ಆದರೆ ಆ ಮಾಹಿತಿಯನ್ನೆಲ್ಲ ಹುಡುಕಿಕೊಳ್ಳುವುದು, ಅರ್ಥಮಾಡಿ
ಕೊಳ್ಳುವುದು, ಅರಗಿಸಿಕೊಳ್ಳುವುದು ಹೇಗೆ? ಇದು ಅನೇಕರನ್ನು ಕಾಡುವ ಸಮಸ್ಯೆ. ಅತ್ಯಂತ ವಿಸ್ತಾರವಾಗಿ ಬೆಳೆದಿರುವ ವಿಜ್ಞಾನಲೋಕ ಜನಸಾಮಾನ್ಯರನ್ನು ಅತ್ಯಂತ ಸುಲಭವಾಗಿ ಗೊಂದಲಕ್ಕೆ ದೂಡಬಲ್ಲದು. ಅಂತರಜಾಲದಲ್ಲಿರುವ ಮಾಹಿತಿಯ ಸಾಗರ
ಸುಳ್ಳು-ಸತ್ಯಗಳನ್ನೆಲ್ಲ ಒಂದೇ ರೀತಿಯಾಗಿ ತೋರಿಸಿ ದಿಕ್ಕುತಪ್ಪಿಸಲೂ ಬಹುದು. ಇನ್ನು, ಸಂಶೋಧನಾ ಪ್ರಬಂಧಗಳನ್ನೇ ಓದುತ್ತೇವೆಂದು ಹೊರಟರೆ ಅವನ್ನೆಲ್ಲ ಓದಲು, ಅರ್ಥಮಾಡಿಕೊಳ್ಳಲು ಎಲ್ಲರಿಗೂ ಸಾಧ್ಯವೆ?
ಈ ಪರಿಸ್ಥಿತಿಯನ್ನು ಬದಲಿಸುವ ಉದ್ದೇಶದಿಂದ, ಹೊಸ ಸಂಶೋಧನೆಗಳು ಹಾಗೂ ಅವು ನಮ್ಮ ಮೇಲೆ ಬೀರಬಹುದಾದ ಪ್ರಭಾವದ ಸಾರವನ್ನು ಜನಸಾಮಾನ್ಯರಿಗೂ ಸರಳವಾಗಿ ಅರ್ಥಮಾಡಿಸುವ ಪ್ರಯತ್ನಗಳು ಇಂಗ್ಲಿಷಿನಲ್ಲಿ ನಡೆಯುತ್ತಿವೆ. ಆದರೆ ಕನ್ನಡದಲ್ಲಿ ಹಾಗೆ ಪಾಠ ಹೇಳಿಕೊಡುವ ಮೇಷ್ಟ್ರುಗಳು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ.
ಅಂಥದೊಂದು ಅಪರೂಪದ ಪ್ರಭೇದಕ್ಕೆ ಸೇರಿದ ಶರ್ಮಾ ಮೇಷ್ಟ್ರ ಬರಹಗಳು-ವಿಜ್ಞಾನದ
ಗಂಭೀರ ವಿಷಯಗಳನ್ನೇ ಒಳಗೊಂಡಿದ್ದರೂ ನಮಗಿಷ್ಟವಾಗುತ್ತವೆ. ಸುಲಭಕ್ಕೆ ಅರ್ಥವಾಗುತ್ತವೆ.
ಈ ಬರಹಗಳು ಹಬೆಯಾಡುವ ಬಿಸಿ ಇಡ್ಲಿ ಮತ್ತು ಸೊಗಸಾದ ಚಟ್ಟಿಯ ಜೋಡಿಯಂತೆ:
ಓದಲು ರುಚಿಯಷ್ಟೇ ಅಲ್ಲ, ಆರೋಗ್ಯಕ್ಕೂ ಒಳ್ಳೆಯದು!
ಟಿ. ಜಿ. ಶ್ರೀನಿಧಿ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.