Free Shipping Charge on Orders above ₹300

Shop Now

Katari Anchina Nadige ( Contemporary Parodies ) Sale -10%
Rs. 180.00Rs. 200.00
Vendor: BEETLE BOOK SHOP
Type: PRINTED BOOKS
Availability: 10 left in stock

ಚಂದ್ರಪ್ರಭ ಕಠಾರಿಯವರ ಪ್ರಸ್ತುತ ಪುಸ್ತಕ 'ಕಠಾರಿ ಅಂಚಿನ ನಡಿಗೆ', ಅವರು ಸಾಂದರ್ಭಿಕವಾಗಿ ಬರೆದ 34 ಅಂಕಣ ಬರೆಹಗಳ ಸಂಕಲನ. ನೇರ ಮತ್ತು ಖಚಿತ ಮಾತುಗಳಿಗೆ ಹೆಸರಾಗಿರುವ ಅವರು ಈ ಪುಸ್ತಕದಲ್ಲಿ ವ್ಯಂಗ್ಯ ಮತ್ತು ವಿಡಂಬನೆಗಳು ಕೂಡಾ ಎಷ್ಟು ಪರಿಣಾಮಕಾರಿಯಾಗಬಲ್ಲವು ಎಂಬುದನ್ನು ಓದುಗರಿಗೆ ಮನದಟ್ಟು ಮಾಡಿಕೊಟ್ಟಿದ್ದಾರೆ.

ಹೀಗೆ ಬರೆಯಲು ಬೇಕಾದ ಧೈರ್ಯ ಅವರಲ್ಲಿರುವುದು ವಿಶೇಷವೇ ಸರಿ. ಅನೇಕರು ಗುಟ್ಟಾಗಿ ಮಾತಾಡಲೂ ಹೆದರುವ ವಿಷಯಗಳ ಬಗ್ಗೆ ಕಠಾರಿಯವರು ಇಲ್ಲಿ ಯಾವ ಸಂಕೋಚವೂ ಇಲ್ಲದೆ ಬರೆದಿದ್ದಾರೆ.

ಕಠಾರಿಯವರ ಹರಿತವಾದ ವ್ಯಂಗ್ಯ-ವಿಡಂಬನೆಗಳು ವರ್ತಮಾನದ ಹಲವು ಘಟನೆಗಳ ಸುತ್ತ ಬೆಳೆದಿವೆ. ಕೋಮುವಾದ, ದ್ವೇಷ ಭಾಷಣ, ಧಾರ್ಮಿಕ ಅವಾಂತರಗಳು, ಬಡವರ ಮನೆಯ ಮೇಲೆ ಮಾತ್ರ ಹರಿಯುವ ಬುಲ್ಲೋಜರುಗಳು, ಭ್ರಷ್ಟಾಚಾರದ ಹೆಚ್ಚಳ, ಪಠ್ಯ ಪುಸ್ತಕ ರಚನೆಯ ಬಿಕ್ಕಟ್ಟುಗಳು, ಮಾಧ್ಯಮಗಳ ದಯನೀಯ ಸ್ಥಿತಿ, ದಿಢೀರನೆ ಹುಟ್ಟಿ ಮಾಯವಾದ ಉರಿಗೌಡ- ನಂಜೇಗೌಡರು, ವಾಟ್ಸಪ್ ವಿಶ್ವವಿದ್ಯಾಲಯದ ಪದವೀಧರರ ಜ್ಞಾನ ಮೀಮಾಂಸೆ, ಸುಳ್ಳುಗಳ ವಿಜೃಂಭಣೆ, ನಕಲಿ ನಾಯಕರ ಕಿತಾಪತಿಗಳು, ಸಮಾಜವನ್ನು ಹಿಂದಕ್ಕೆ ತಳ್ಳುತ್ತಿರುವ ಮೌಡ್ಯಗಳು, ರಾಜಕಾರಣಿಗಳ ಹಾಸ್ಯಾಸ್ಪದ ಹೇಳಿಕೆಗಳು, ಟ್ರೋಲ್ ಗಿರಾಕಿಗಳ ಕಷ್ಟಗಳೇ ಮೊದಲಾದ ಹಲವು ಸಂಗತಿಗಳು ಇಲ್ಲಿ ಕಠಾರಿಯವರ ಮಾತಿನೇಟಿಗೆ ಗುರಿಯಾಗಿವೆ.

ಕನ್ನಡದಲ್ಲಿ ಪೂರ್ಣಚಂದ್ರ ತೇಜಸ್ವಿ, ಲಂಕೇಶ್ ಮೊದಲಾದವರು ವ್ಯಂಗ್ಯವನ್ನು ಪರಿಣಾಮಕಾರಿಯಾಗಿ ಬಳಸಿದ್ದುಂಟು. ಚಾಪ್ಲಿನ್ ಈ ವಿಷಯದಲ್ಲಿ ಅದ್ಭುತವನ್ನೇ ಸಾಧಿಸಿದ. ನಮ್ಮ ಸಾಮಾನ್ಯ ಗ್ರಹಿಕೆಗಳಲ್ಲಿಯ ವಿರೋಧಾಭಾಸಗಳನ್ನು ಅವರು ದಿಟ್ಟವಾಗಿ ಬಯಲಿಗೆಳೆದಿದ್ದರು. ಲಂಕೇಶರು ಬಳಸಿದ 'ಬಂ' ಮತ್ತು 'ಗುಂ' ಪದಗಳು ಒಂದು ಕಾಲಕ್ಕೆ ರಾಜ್ಯದ ರಾಜಕಾರಣವನ್ನೇ ಅಲ್ಲಾಡಿಸಿದ್ದವು. ಈ ಪರಂಪರೆಯನ್ನು ತನ್ನದೇ ರೀತಿಯಲ್ಲಿ ಮುಂದುವರೆಸಿರುವ ಚಂದ್ರಪ್ರಭ ಕಠಾರಿಯವರು ವರ್ತಮಾನ ಕಾಲದಲ್ಲಿ ಪ್ರಚಲಿತದಲ್ಲಿರುವ ಅನೇಕ ಪದಗಳನ್ನು ಈ ಪುಸ್ತಕದಲ್ಲಿ ಬಳಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇವು ಭಾಷಾಭ್ಯಾಸಿಗಳ ಪ್ರಯೋಜನಕ್ಕೂ ಬರಬಹುದು.

ಕಠಾರಿಯವರ ವ್ಯಂಗ್ಯ ಮತ್ತು ವಿಡಂಬನೆಗಳು ವಾಸ್ತವದ ವೈರುದ್ಧಗಳನ್ನು ದಿಟ್ಟವಾಗಿ ತೆರೆದಿಡುತ್ತವೆ. ಇವುಗಳ ಓದು ಸಮಾಜದ ಹಲವು ಬೆಳವಣಿಗೆಗಳ ಬಗ್ಗೆ ಮಾತಾಡಲು ಮತ್ತು ಚರ್ಚಿಸಲು ಪ್ರಚೋದನೆ ನೀಡುತ್ತದೆ. ಮಾನವನ ಮೂರ್ಖತನಗಳ ಬಗ್ಗೆ ಲೇಖಕರು ಬರೆಯದೇ ಹೋದರೆ ಮತ್ಯಾರು ಬರೆಯಬೇಕು?

-ಪುರುಷೋತ್ತಮ ಬಿಳಿಮಲೆ

Guaranteed safe checkout

Katari Anchina Nadige ( Contemporary Parodies )
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading