Your cart is empty now.
ಬ್ರಿಟಿಷರ ವಿರುದ್ಧ ಸಾರಿದ್ದ ಸಮರದಲ್ಲಿ ಭಾರತ ಗೆದ್ದು ಸ್ವತಂತ್ರ ದೇಶವಾಯಿತು. ಯಶಸ್ವೀ ಸ್ವಾತಂತ್ರ್ಯ ಸಮರದ ಮುಂಚೂಣಿಯಲ್ಲಿದ್ದ ಮಹಾತ್ಮ ಗಾಂಧಿಯವರಿಗೆ ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಹುಟ್ಟಿಕೊಂಡ ಮತೀಯ ರಾಜಕೀಯದ ವಿರುದ್ಧ ಸೆಣಸಿ ಗೆಲ್ಲಲಾಗಲಿಲ್ಲ ಮಾತ್ರವಲ್ಲ, ಅದು ಅವರ ಜೀವವನ್ನೇ ಬಲಿ ತೆಗೆದುಕೊಂಡಿತು. ಈ ಪುಸ್ತಕದಲ್ಲಿ ಮಹಾತ್ಮ ಗಾಂಧಿಯ ಕೊಲೆಗೆ ಕಾರಣವಾದ ಮತೀಯ ರಾಜಕೀಯ ಭಾರತದಲ್ಲಿ ಹುಟ್ಟಿ ಬೆಳೆದ ಕತೆ ಇದೆ. ಆ ರಾಜಕೀಯ ಮಹಾತ್ಮ ಗಾಂಧಿಯನ್ನು ಕೆಡವಲು ಹೂಡಿದ ಸಂಚಿನ ಸೂಕ್ಷ್ಮ ವಿವರಣೆ ಇದೆ. ಆ ರಾಜಕೀಯವನ್ನು ಹುಟ್ಟು ಹಾಕಿ, ನೀರೆರೆದು ಪೋಷಿಸಿ, ಹೆಮ್ಮರವನ್ನಾಗಿ ಮಾಡಿದ ಪ್ರಮುಖ ವ್ಯಕ್ತಿಗಳ ವ್ಯಕ್ತಿತ್ವದ ಅನಾವರಣವಿದೆ. ಪುಸ್ತಕದ ಕೇಂದ್ರದಲ್ಲಿರುವುದು ಅಂತಿಮವಾಗಿ ಮಹಾತ್ಮ ಗಾಂಧಿಯ ಎದೆಗೆ ಗುಂಡಿಟ್ಟ ನಾಥುರಾಮ್ ಗೋಡ್ಲೆಯ ಕತೆಯಾದರೂ, ಇಲ್ಲಿ ಗೋಡ್ಲೆ ಎಂಬ ವ್ಯಕ್ತಿಗಿಂತ ಹೆಚ್ಚಾಗಿ ಕಾಣಿಸುವುದು ಆತನನ್ನು ಕೊಲೆಗಡುಕನನ್ನಾಗಿ ಮಾಡಿದ ಮತೀಯ ರಾಜಕೀಯದ ಒಳಸುಳಿಗಳು. ಪತ್ರಕರ್ತ ಧೀರೇಂದ್ರ ಝಾ ಅವರು ಗಾಂಧಿಯ ಕೊಲೆಗಡುಕರ ಕುರಿತ ದಾಖಲೆಗಳನ್ನು ಜಾಲಾಡಿ, ಆ ಕಾಲದ ಕೊಂಡಿಗಳಾಗಿ ಉಳಿದಿರುವ ಸಂಬಂಧ ಪಟ್ಟ ವ್ಯಕ್ತಿಗಳನ್ನು ಮಾತನಾಡಿಸಿ, ಲಭ್ಯ ವಿವರಗಳನ್ನು ಆಳವಾಗಿ ಪರಿಶೋಧಿಸಿ ಓರ್ವ ವೃತ್ತಿಪರ ಸಂಶೋಧಕನಂತೆ ವಿಶ್ಲೇಷಣೆ ನಡೆಸಿ ಈ ಪುಸ್ತಕವನ್ನು ಬರೆದಿದ್ದಾರೆ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.