Free Shipping Charge on Orders above ₹500. COD available

Shop Now

Ekaswamya Khareedi Bandavala Sale -22%
Rs. 180.00 Rs. 230.00
Vendor: BEETLE BOOK SHOP
Type: PRINTED BOOKS
Availability: 98 left in stock

ಲಂಡನ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಅಧ್ಯಾಪಕರಾಗಿರುವ ಅಶೋಕ್‌ ಕುಮಾರ್ ಅವರು ಖರೀದಿ ಬಂಡವಾಳದ ಪ್ರಾಬಲ್ಯದ ಬಗ್ಗೆ 'ಮನೋಪ್ಸನಿ ಕ್ಯಾಪಿಟಲ್' ಎಂಬ ಪುಸ್ತಕವನ್ನು ಬರೆದಿದ್ದಾರೆ. ಅದರ ವಿಸ್ತ್ರತ ಅನುವಾದವು ಸಹ ಕನ್ನಡದಲ್ಲಿ ಬರುತ್ತಲಿದೆ. ಸಾಮಾನ್ಯ ಓದುಗರಿಗಾಗಿ ಈ ಪುಸ್ತಕದ ಪರಿಚಯವನ್ನು ಸರಳವಾಗಿ ಚಿಕ್ಕದಾಗಿ ನಿರೂಪಿಸಬೇಕೆಂದು ನಿರ್ಧರಿಸಲಾಯಿತು. ಅದಕ್ಕನುಗುಣವಾಗಿ ಕಠಿಣ ಪಾರಿಭಾಷಿಕ ಪದಗಳನ್ನು, ದೀರ್ಘ ವಾಕ್ಯ ರಚನೆಗಳನ್ನು ನಿವಾರಿಸಿಕೊಂಡು ಓದುಗ ಸ್ನೇಹಿಯಾದ ಪುಟ್ಟ ನಿರೂಪಣೆಯೊಂದನ್ನು ಈ ಮೂಲಕ ನಿಮ್ಮ ಮುಂದೆ ಇರಿಸುತ್ತಿದ್ದೇವೆ.

ಜಗತ್ತಿನಾದ್ಯಂತ ಸಿದ್ಧ ಉಡುಪು ಮತ್ತು ಪಾದರಕ್ಷೆ ಉತ್ಪಾದನೆಯಲ್ಲಿ ಶ್ರಮಿಕರ ಶೋಷಣೆ ತೀವ್ರವಾಗಿ ನಡೆದಿದೆ ಈ ಕ್ಷೇತ್ರದಲ್ಲಿ ಆಗುತ್ತಿರುವ ವೇಗವಾದ ತಾಂತ್ರಿಕ ಮತ್ತು ಸಂಘಟನಾತ್ಮಕ ಬದಲಾವಣೆಗಳು ಇಲ್ಲಿ ಕಾರ್ಮಿಕರ ಬಿಡುಗಡೆಯ ಹೋರಾಟಕ್ಕಾಗಿ ಹೊಸ ಅವಕಾಶಗಳನ್ನು ತೆರೆಯುತ್ತಿದೆ ಎಂಬುದು ಈ ಪುಸ್ತಕದ ತಿರುಳು. ಎಲ್ಲ ರೀತಿಯ ಶೋಷಣೆಯನ್ನು ಕೊನೆಗಾಣಿಸಬೇಕೆಂಬ ಕನಸನ್ನು ಕಾಣುವ ತರುಣ ಮನಸ್ಸುಗಳು ಇಂತಹ ಅರ್ಥಶಾಸ್ತ್ರದ ಕೃತಿಗಳನ್ನು ಓದಿ ಮನನ ಮಾಡಿಕೊಳ್ಳಬೇಕಾಗಿದೆ. ಏಕೆಂದರೆ ಜ್ಞಾನವೇ ಬಿಡುಗಡೆಯ ದಾರಿ. ಜಾಗತಿಕ ಮಟ್ಟದಲ್ಲಿ ವಿಶೇಷವಾಗಿ ಭಾರತದಲ್ಲಿ ಸಹ ವರ್ಗ ಹೋರಾಟದ ಪ್ರಾಮುಖ್ಯತೆಯನ್ನು ಪಕ್ಕಕ್ಕೆ ಸರಿಸುವ ತಂತ್ರಗಳು ನಡೆಯುತ್ತಿರುವಾಗ ಬಂಡವಾಳದ ಶೋಷಣೆಯ ಆಯಾಮಗಳನ್ನು ಬಯಲಿಗೆಳೆಯುವ ಇಂತಹ ಪುಸ್ತಕಗಳು ಅತ್ಯಗತ್ಯ. ಕನ್ನಡದ ಓದುಗರು ಈ ಪುಸ್ತಕವನ್ನು ಸ್ವೀಕರಿಸಿ ಚರ್ಚಿಸಿದಲ್ಲಿ ಆಗ ನಮ್ಮ ಶ್ರಮ ಸಾರ್ಥಕವಾಗುತ್ತದೆ.

-
+

Guaranteed safe checkout

Ekaswamya Khareedi Bandavala
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading