Your cart is empty now.
"ಎಲ್ಲ ಸುಖ ಸಂಸಾರಗಳ ಸುಖವೂ ಒಂದೇ ರೀತಿಯದು, ದುಃಖ ಪಡುವ ಪ್ರತಿ ಸಂಸಾರದ ದುಃಖವೂ ಬೇರೆಬೇರೆ ರೀತಿಯದು.''
ಕಾಲ, ದೇಶ, ಭಾಷೆಗಳ ಅಂತರವನ್ನು ಮೀರಿ ಜನಪ್ರೀತಿಯನ್ನು ಗಳಿಸಿರುವ ಮನುಷ್ಯರು ಕಟ್ಟಿಕೊಂಡಿರುವ ಸಂಸಾರದ ಕಥನ
- ಅನ್ನಾ ಕರೆನಿನಾ.
ಅವಳತ್ತ ನೋಡದಿರಲು ಪ್ರಯತ್ನಪಟ್ಟಿ-ಸೂರ್ಯನನ್ನು ಕಣ್ಣೆತ್ತಿ ನೋಡದಿರುವ ಹಾಗೆ. ಆದರೂ ಅವಳು ಅಲ್ಲೇ ಇದ್ದಾಳೆಂದು ತಿಳಿಯುತಿತ್ತು-ಸೂರ್ಯನನ್ನು ನೋಡದಿದ್ದರೂ ಸೂರ್ಯ ಇರುವುದು ತಿಳಿಯುವ ಹಾಗೆ. (ಭಾಗ 1, 9)
ಪ್ರೀತಿ ಪ್ರೇಮಗಳ ಪರಮಾಪ್ತ ಕಥೆ
- ಅನ್ನಾ ಕರೆನಿನಾ.
'ಎಷ್ಟು ಮನುಷ್ಯರು, ಎಷ್ಟು ಮನಸುಗಳು, ಎಷ್ಟು ಹೃದಯಗಳು ಇವೆಯೋ ಅಷ್ಟು ಥರದ ಪ್ರೀತಿ ನಮ್ಮ ಪ್ರವೃತ್ತಿಗಳು ತಂದೊಡ್ಡುವ ನೈತಿಕ, ಮಾನಸಿಕ, ಸಾಮಾಜಿಕ ಪ್ರಶ್ನೆಗಳನ್ನು ಆಪ್ತವಾಗಿ ಪರಿಶೀಲಿಸುವ ಕಥೆ
- ಅನ್ನಾ ಕರೆನಿನಾ.
'ಸುತ್ತಲಿನ ಜನ ಪ್ರತಿಯೊಬ್ಬರೂ ಅದೇ ಥರ ಬದುಕುತ್ತಿರುವಾಗ ಅದಕ್ಕೆ ಹೊಂದಿಕೊಂಡು ಜಡವಾಗಿ ಬದುಕುವುದು ಸಲೀಸಾಗುತ್ತದೆ.' (ಭಾಗ 7, 13)
ಜಡಗೊಂಡ ಬದುಕಿನ ವಿರುದ್ಧ ಬಂಡೆದ್ದ ಹೆಣ್ಣಿನ ಕಥೆ
- ಅನ್ನಾ ಕರೆನಿನಾ.
ಮನೆಯ ಮುಂದಿನ ಕೈತೋಟದಲ್ಲಿ ಮರಗಳಿಂದ ಒಂದೇ ಸದು ತೊಟ್ಟಿಕ್ಕುತ್ತಿರುವ ಹನಿಗಳ ಸದ್ದನ್ನು ಆಲಿಸಿದ ಆಕಾಶಗಂಗೆಯ ಸೀಳಿನಲ್ಲಿ ಕಾಣುತಿದ್ದ ಪರಿಚಿತವಾದ ನಕ್ಷತ್ರ ತ್ರಿಕೋನವನ್ನು ನೋಡಿದ ಜೋರಾಗಿ ಮಿಂಚಿದಾಗ ಆಕಾಶಗಂಗೆ ಮಾತ್ರವಲ್ಲ ಉಜ್ವಲ ನಕ್ಷತ್ರಗಳೂ ಮಾಯವಾಗಿ, ಮಿಂಚು ಮರೆಯಾಗುತ್ತಿದ್ದ ಹಾಗೆ ಮತ್ತೆ ಆದದೇ ಜಾಗದಲ್ಲಿ ಕಾಣಿಸುತಿದ್ದವು-ಯಾವುದೋ ಅದೃಶ್ಯ ಹಸ್ತವೊಂದು ತಪ್ಪಾಗದ ಹಾಗೆ ನಕ್ಷತ್ರಗಳನ್ನು ಅಲ್ಲಲ್ಲೇ ಇರಿಸುತ್ತಿತ್ತು ಅನ್ನುವ ಹಾಗೆ. (ಭಾಗ 8, 19)
ಮನುಷ್ಯ ಬದುಕಿಗೆ ಅರ್ಥ, ಗತಿ, ವಿನ್ಯಾಸವನ್ನು ಒದಗಿಸುವ ಶಕ್ತಿಯೊಂದು ಇದೆಯೇ ಎಂಬ ಗಹನವಾದ ಪ್ರಶ್ನೆಯನ್ನು ಸರಳವಾದ ಕಥೆಯ ಮೂಲಕ ಮನಸಿನಲ್ಲಿ ಮೂಡಿಸುವ ಕಥೆ
- ಅನ್ನಾ ಕರೆನಿನಾ.
ಜಗತ್ತಿನ ಶ್ರೇಷ್ಠ ಕಾದಂಬರಿಗಳಲ್ಲೊಂದು ಕೌಂಟ್ ಲಿಯೊ ಟಾಲ್ಸ್ಟಾಯ್ ಅವರ - ಅನ್ನಾ ಕರೆನಿನಾ (1878)
• We deliver the books you order at beetlebookshop within 3-4 working days via india speed post .
Return of any defective / damage item should be done within 7 days from the date of the receipt of the shipment to our working office.