ಶ್ರೀಮಂತ ಕುಟುಂಬದಲ್ಲಿ ಜನಿಸಿದ ವಿದ್ಯಾವಂತ ಹುಡುಗಿ ಮಾನದಾ, ತಾನು ವೇಶ್ಯೆಯಾಗಿ ಬದಲಾದ ಸನ್ನಿವೇಶವನ್ನು ಮನಮುಟ್ಟುವಂತೆ ವಿವರಿಸಿದ್ದಾರೆ. ತನ್ನ ಜೀವನದಲ್ಲಿನ ಈ ಬದಲಾವಣೆಗೆ ಕಾರಣ, ಸನ್ನಿವೇಶ, ಸುತ್ತಮುತ್ತಲಿನ ವಾತಾವರಣ, ರಾಜಕೀಯ-ಸಾಮಾಜಿಕ ಸ್ಥಿತಿಗತಿ, ಸ್ವಾತಂತ್ರ್ಯ ಹೋರಾಟ, ಪ್ರತಿಷ್ಠಿತ ವ್ಯಕ್ತಿಗಳ ಮುಖವಾಡ, ಹಲವರ ಬೂಟಾಟಿಕೆ.... ಎಲ್ಲವನ್ನೂ ಅವರು ಪ್ರಾಮಾಣಿಕವಾಗಿ ಹೇಳಿಕೊಂಡಿದ್ದಾರೆ.
ವೇಶ್ಯೆಯೊಬ್ಬಳು ತನ್ನ ಬದುಕನ್ನು ಹೀಗೂ ತೆರೆದುಕೊಳ್ಳಬಹುದು, ಮಾದರಿಯಾಗಬಹುದು ಎನ್ನುವುದಕ್ಕೆ ಮಾನದಾ ಉತ್ತಮ ಉದಾಹರಣೆ.
ವೇಶ್ಯಾಲೋಕದ ಅನೇಕ ರಹಸ್ಯಗಳನ್ನು ಜನರ ಮುಂದಿಡುವುದರ ಜೊತೆಯಲ್ಲಿ, ಒಬ್ಬಳು ವೇಶ್ಯೆಯಾಗುವುದರಲ್ಲಿ ಪುರುಷರ ಹಾಗೂ ಸಮಾಜದ ಪಾತ್ರವೇನು ಎನ್ನುವುದನ್ನೂ ಮಾನದಾ ಅದ್ಭುತವಾಗಿ ಬಿಂಬಿಸಿದ್ದಾರೆ; ಅಶ್ಲೀಲತೆಯ ಸೋಂಕು ತಗುಲದಂತೆ.
(ಮನೆಮಂದಿಯೆಲ್ಲರೂ ಓದಬಹುದು)
ಒಂದು ಅಪರೂಪದ ಕಾದಂಬರಿ ಓದಿದ ಅನುಭವ ನಿಮಗೆ ಆಗುವುದರಲ್ಲಿ ಸಂಶಯವಿಲ್ಲ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.