ಇದೊಂದು ವಿಶೇಷವಾದ ಪುಸ್ತಕ
ನೀವು ಓದಬೇಕು, ಬೇರೆಯವರಿಗೂ ಹಂಚಬೇಕು.
ಕರ್ನಾಟಕದಲ್ಲಿ ಸುಮಾರು 200 ಕೊ ಹೆಚ್ಚು ವಿಧವಾ ವಿವಾಹಕ್ಕೆ ಕಾರಣವಾದ ಆಂದೋಲನದ ಕಥೆ ಇದು.
ಬೆನ್ನುಡಿಯಲ್ಲಿ ಹೀಗಿದೆ-
Short in length, Strong in statement.
ಈ ಕೃತಿ ಪುಟ್ಟದು, ಆದರೆ ದೊಡ್ಡ ಪರಿಣಾಮ ಬೀರುವಂತಹದ್ದು. ನಮ್ಮ ರಾಜ್ಯದ ಒಳಗೆ ವಿಧವೆಯರ ವಿವಾಹ ಒಂದು ಆಂದೋಲನವಾಗಿ ರೂಪು ತಳೆದದ್ದರ ಮಹತ್ವದ ದಾಖಲೆ ಇದು. ಶಾಲೆಯ ಮೆಟ್ಟಿಲು ಹತ್ತುವ ಮುಂಚೆಯೇ ವಿಧವೆಯರಾದ, ಗರ್ಭದಲ್ಲಿರುವಾಗಲೇ ಇನ್ನೊಬ್ಬರಿಗೆ ಹೆಂಡತಿ ಎಂದು ನಿಗದಿಯಾದ ಸಮಾಜದಲ್ಲಿ ಅದನ್ನು ಧಿಕ್ಕರಿಸಿ ನಡೆದವರ ಕಥನ ಇದು.
ಎಷ್ಟೊಂದು ಹಣತೆ ಬೆಳಗಲು ಮೊದಲು ಹಚ್ಚಬೇಕಾದದ್ದು ಒಂದು ಹಣತೆಯನ್ನು ಮಾತ್ರ. ಅಂತೆಯೇ ಅಕದಾಸ ಭಟ್ಟರು ಮೊದಲ ಹೆಜ್ಜೆ ಇಟ್ಟು ತಾವೇ ವಿಧವಾ ವಿವಾಹವಾಗಿ ಆರಂಭಿಸಿದ ಆಂದೋಲನ ನೂರಾರು ವಿಧವೆಯರ ಮರು ವಿವಾಹಕ್ಕೆ ಮುನ್ನುಡಿ ಬರೆಯಿತು. ಸಮಾಜದ, ಮಠಗಳ ಕಟ್ಟು ಕಟ್ಟಳೆಗಳನ್ನು ಎದುರಿಸಿ ಗೆದ್ದಿತು.
ಇದು ಬದುಕಿನಲ್ಲಿ ಸೋತವರು ಗೆದ್ದ ಕಥನ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.