ಭಾರತದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯ್ ಪಟೇಲ್ ಫೆಬ್ರವರಿ 27, 1948 ರಲ್ಲಿ ಪ್ರಧಾನ ಮಂತ್ರಿ ನೆಹರೂರವರಿಗೆ ಬರೆದ ಪತ್ರದಲ್ಲಿ ಹೇಳುತ್ತಾರೆ: "ಸಾವರ್ಕರ್ ನೇತೃತ್ವದ ಹಿಂದೂ ಮಹಾಸಭಾದ ಮತಾಂಧರ ಗುಂಪೊಂದು ಪಿತೂರಿಯನ್ನು ಮಾಡುತ್ತದೆ ಮತ್ತು ಅದನ್ನು ಆಗುವಂತೆ ನೋಡಿಕೊಳ್ಳುತ್ತದೆ". ಮಹಾತ್ಮಾ ಗಾಂಧಿಯವರ ಹತ್ಯೆಯ ಕುರಿತು ಪಟೇಲರು ಬರೆದ ಪತ್ರ ಅದಾಗಿತ್ತು.
ಇವತ್ತಿನ ಹಿಂದುತ್ವ ಅನುಯಾಯಿಗಳು ಅದೇ ಸಾವರ್ಕರರನ್ನು ಒಬ್ಬ ಸ್ವಾತಂತ್ರ್ಯ ಹೋರಾಟಗಾರನೆಂದು ವೈಭವೀಕರಿಸಲು ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ.
ಪ್ರಜಾಸತ್ತಾತ್ಮಕ - ಜಾತ್ಯತೀತ ಭಾರತವನ್ನು ರಚಿಸಿ ಸರಿಸುಮಾರು ಒಂದು ಶತಮಾನವೇ ಕಳೆದುಹೋಗುತ್ತಿರುವಾಗ...ಅವರೊಬ್ಬ ಮಹಾನ್ ಕ್ರಾಂತಿಕಾರಿ, ಅದಮ್ಯ ಸ್ವಾತಂತ್ರ್ಯ ಹೋರಾಟಗಾರ, ಮಹೋನ್ನತ ವಿಚಾರವಾದಿ ಇತ್ಯಾದಿ ಇತ್ಯಾದಿ ಎಂದು ಅವರನ್ನು ಗುತ್ತಿಗೆ ಪಡೆದವರಂತೆ ಸ್ತುತಿಸುತ್ತಿದ್ದಾರೆ. ಆದರೆ ಸಾವರ್ಕರ್ ಅವರ ಬರಹಗಳು ಮತ್ತು ಕಾರ್ಯಾಚರಣೆಗಳನ್ನು ಗಮನಿಸಿದರೆ ಈ ಎಲ್ಲಾ ಸಮರ್ಥನೆಗಳು ಸುಳ್ಳು ಎಂದು ಸಾಬೀತಾಗುತ್ತವೆ.
ಭಾರತದ ಸ್ವಾತಂತ್ರ್ಯ ಚಳುವಳಿಯ ಇತಿಹಾಸವು ತೆರೆದುಕೊಂಡಂತೆ ಲಭ್ಯವಾದ ಕೆಲವು ಚಾರಿತ್ರಿಕ ವಾಸ್ತವಾಂಶಗಳನ್ನು ಮಂಡಿಸುವ ಸಲುವಾಗಿ ನಡೆಸಿದ ಪ್ರಾಮಾಣಿಕ ಹಂಬಲದ ಫಲವೇ ಈ ಪುಸ್ತಕ.
ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ನೀಡುವ ಹಾಗೂ ವಂಚನೆಯಲ್ಲಿ ತೊಡಗಿರುವ ಹಿಂದುತ್ವ ಬಂಟರನ್ನು ಈ ದಾಖಲೆಗಳು ನಿಜಕ್ಕೂ ಧೈರ್ಯಗೆಡಿಸುತ್ತವೆ. ಮಾಹಿತಿ ಇಲ್ಲದ ಮುಖಂಡರು ಮತ್ತು ಈ 'ವೀರ' ಸಾವರ್ಕರರನ್ನು ವೈಭವೀಕರಿಸುವ ಜನರು ಈ ನಿಜಾಂಶಗಳು ಮತ್ತು ಸುಳ್ಳು ಪುರಾಣಗಳ ನಡುವಿನ ವ್ಯತ್ಯಾಸಗಳನ್ನು ಅರಿತುಕೊಳ್ಳುತ್ತಾರೆ ಎಂಬ ಭರವಸೆ ಇದೆ ಎನ್ನುತ್ತಾರೆ ಭಾರತದಲ್ಲಿ ರಾಷ್ಟ್ರೀಯವಾದದ ಉದಯ ಮತ್ತು ಬೆಳವಣಿಗೆಯ ಬಗ್ಗೆ ಮೂಲಭೂತ ಸಂಶೋಧನೆಗಳಲ್ಲಿ ತೊಡಗಿರುವ ಈ ಲೇಖಕರು.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.