Free Shipping Charge on Orders above ₹300

Shop Now

Endhoo Mugiyada Yudda Sale -10%
Rs. 180.00Rs. 200.00
Vendor: Beetle Book Shop
Type: Printed book
Availability: 10 left in stock

ಪ್ರಿಯ ಕೊಪ್ಪ,

ನಿಮ್ಮ ನಕ್ಸಲ್ ಸರಣಿ ಓದಿ ನಿಜಕ್ಕೂ ಸಂತಸಪಟ್ಟದ್ದೇನೆ. ಇದು ಹಳೆಯ ತಲೆಮಾರಿನವರಿಗೆ ಎಡಪಂಥೀಯ ವಿಚಾರಗಳು, ಅದರಲ್ಲೂ ನಕ್ಸಲೀಯರು ಆಯ್ದ ಮಾರ್ಗದ ಕುರಿತು ಮರುಚಿಂತಿಸುವಂತೆ ಮಾಡಿದರೆ, ಹೊಸ ತಲೆಮಾರಿನವರಿಗೆ ಈಗಿರುವ ಕ್ಲೀಶಾಮಯ ರಾಜಕೀಯ ಸಿದ್ಧಾಂತಗಳನ್ನು ಹೊರತುಪಡಿಸಿ ಹೊರಹೊಮ್ಮಿಸಬೇಕಾದ ಚಿಂತನಾ ಮಾದರಿಗಳನ್ನು ರೂಪಿಸುವಂತೆ ಪ್ರೇರೇಪಿಸುವಂತಿತ್ತು. ಆ ದೃಷ್ಟಿಯಿಂದ ಇದು ಅತ್ಯಂತ ಪ್ರಯೋಜನಕಾರಿಯಾದ ಮಾಲೆಯಾಗಿತ್ತು.

ಹಲವೊಮ್ಮೆ ಕೊಂಚ ನಿಲುವುಗಳನ್ನು ಬದಲಾಯಿಸಬಹುದಿತ್ತೇನೋ ಅನ್ನಿಸುವಂತಿದ್ದರೂ, ಒಟ್ಟಾರೆಯಾಗಿ ನೀವು ತೋರಿರುವ ಸಂಯಮ, ಕ್ಷೇತ್ರ ಕಾರ್ಯ, ಮತ್ತು ಓದನ್ನು ಒಂದು ಸನ್ನಿವೇಶದಲ್ಲಿ ಕಟ್ಟಿಕೊಡುವಲ್ಲಿ ವಹಿಸಿರುವ ಕಾಳಜಿ ಸ್ತುತ್ಯರ್ಹವಾಗಿವೆ. ನಮ್ಮಲ್ಲಿ ಪುರೋಗಾಮಿ ಪತ್ರಕರ್ತರಾಗಲಿ, ಚರ್ವಿತಚರ್ವಣ ಎಡಪಂಥೀಯ ಚಳವಳಿಗಳ ನೇತಾರರುಗಳಾಗಲಿ ಗಮನಿಸಬೇಕಾದ ಒಂದು ಸಂಗತಿಯೆಂದರೆ, ದೇಶದ ವಿಭಿನ್ನ ನೆಲೆಯ ಎರಡು ಯುವಶಕ್ತಿಗಳು ಫ್ಯಾಸಿಸ್ಟ್ ಶಕ್ತಿಗಳಿಗೆ ಬಲಿಯಾಗುತ್ತಿದ್ದಾರೆ ಮತ್ತು ಆ ನಿಟ್ಟಿನಲ್ಲಿ ತಕ್ಷಣವೇ ಪ್ರಕ್ರಿಯೆಗಳನ್ನು ಕೈಗೆತ್ತಿಕೊಳ್ಳಬೇಕಾದ ಅಗತ್ಯವಿದೆ ಎಂಬುದು. ದೇಶದ ನಗರವಾಸಿ ವಿದ್ಯಾವಂತ (ಹಾಗೂ ನೌಕರಿ ಹಿಡಿದು ಜೀವನದ ಚಿಂತೆ ಇಲ್ಲದ) ಯುವಕರು ಬಂಡವಾಳಶಾಹಿ ಜಗತ್ತು ನಿರ್ಮಿಸಿರುವ (ಹಾಗೂ ಪೋಷಿಸುತ್ತಿರುವ) ಹುಸಿ ಪ್ರಜಾಸತ್ತೆಯ ಚಳವಳಿಗೆ ಬಲಿಯಾಗಿ ನಿಜವಾದ ಪ್ರತಿಭಟನೆ ಎಲ್ಲಿ, ಯಾಕಾಗಿ ಮಾಡಬೇಕು ಎಂದು ತಿಳಿಯದೆ ದಿಕ್ಕು ತಪ್ಪುತ್ತಿರುವುದು (ಅಣ್ಣಾ ಹಜಾರೆ, ಕೇಜಿವಾಲ್ ಇದಕ್ಕೆ ನಿಮಿತ್ತ ಮಾತ್ರ ಅಜೀಂಪ್ರೇಮ್‌ಜಿ, ಅಂಬಾನಿ, ಮತ್ತು ಟೈಮ್ಸ್ ಆಫ್ ಇಂಡಿಯಾ ಮತ್ತಿತರ ದೇಶಿ ಬಂಡವಾಳಿಗರು ಇದರ ನಿಜವಾದ ರೂವಾರಿಗಳು ಹಾಗೂ ಹಣ ಮತ್ತು ಪ್ರಚಾರವನ್ನು ಒದಗಿಸುತ್ತಿರುವವರು. ಮಾತ್ರವಲ್ಲ, ಬಲಪಂಥೀಯರನ್ನು ನರೇಂದ್ರ ಮೋದಿಯ ಮೂಲಕ ಅಧಿಕಾರಕ್ಕೆ ತರುವ ಗುಪ್ತ ಕಾರ್ಯಸೂಚಿಯನ್ನು ಹೊಂದಿರುವವರು.) ಇನ್ನೊಂದೆಡೆ ಗ್ರಾಮೀಣ ಪ್ರದೇಶದಲ್ಲಿರುತ್ತ ವಿದ್ಯೆ-ಉದ್ಯೋಗವಿಲ್ಲದೆ ಹತಾಶರಾಗಿ ಸಂಘ ಪರಿವಾರ, ಭಾಷಾ ಮೂಲಭೂತವಾದ, ಭೂಗತರು ನಡೆಸುವ ಆಟೋ-ಚಾಲಕರ ಇತ್ಯಾದಿ ಸಂಘಟನೆಯಲ್ಲಿ ಗುರುತಿಸಿಕೊಂಡು ಹೊಟ್ಟೆ ಹೊರೆಯುತ್ತಿರುವವರು. ಈ ಎರಡೂ (ನಗರ-ಗ್ರಾಮೀಣ) ಯುವಶಕ್ತಿಗೆ ನಿಜವಾದ ಬದಲಾವಣೆ ತರಲು ಸಾಧ್ಯವಿರುವುದು. ಈ ಕಥನ ಅಂಥ ವಿಚಾರಗಳನ್ನು ಬಿತ್ತಬಲ್ಲದು ಎಂದು ನಂಬಿದ್ದೇನೆ.

ಇಂದು ದಕ್ಷತೆ, ಪ್ರಾಮಾಣಿಕತೆ, ಬದ್ಧತೆ ಮತ್ತು ಶುದ್ಧತೆ ( ಈ ಶಬ್ದಕ್ಕೆ ನೂರೆಂಟು ಸಮಸ್ಯೆಗಳಿದ್ದರೂ ಅದನ್ನೇ ಬಳಸಲು ಬಯಸುವೆ.) ಉಳಿಸಿಕೊಳ್ಳುವುದೇ ನಿಜವಾಗಿಯೂ ಒಬ್ಬ ಬುದ್ಧಿಜೀವಿ ಮಾಡಬಹುದಾದ ಕೆಲಸವೆಂದು ನನಗೆ ಇತ್ತೀಚೆಗೆ ಬಲವಾಗಿ ಅನ್ನಿಸುತ್ತಿದೆ.

- ನಿಮ್ಮ

ಕೇಶವ ಮಳಗಿ, ಬೆಂಗಳೂರು,

Guaranteed safe checkout

Endhoo Mugiyada Yudda
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading