Your cart is empty now.
ನೀರಿಗೆ ನಿರ್ಮಲ ಅನ್ನುವ ಅರ್ಥವೂ ಇದೆ. ಎಲ್ಲವನ್ನೂ ಶುದ್ಧ ಮಾಡುವುದು ನೀರು, 'ಶುದ್ಧ ಮಾಡುವಿಕೆ' ಈ ಕಾದಂಬರಿಯ ಮೂಲದ್ರವ್ಯ ಕೂಡ. ಹಾಗಾದರೆ ಶುಚಿಯಾಗಬೇಕಾಗಿರುವುದೇನು? ಮನೆಯೋ, ಮುಂದಿರವೋ ಅಥವಾ ಮನವೋ? ಎಂಬ ಬಹುಕಾಲದ ಪ್ರಶ್ನೆಯಲ್ಲಿ ಪುನರುದ್ಧವಿಸಿದೆ. ಹೀಗೆ, ಸಾರ್ವಕಾಲಿಕ ವೆನಿಸುವ ಸಂಗತಿಯೊಂದನ್ನು ತಪ್ಪದೇ ಅನುಭವದ ಜರಡಿಯಲ್ಲಿ ಸಾಣಿಸಿ ನೋಡುವ ಮೊಗಸಾಲೆಯವರ ವಿಶಿಷ್ಟ ಕಥನ ಶೈಲಿಗೆ "ನೀರು" ಸಾಕ್ಷಿಯಂತಿದೆ.
ನದಿಯೊಂದರ ನೀರ ಹರಿವಿನೊಂದಿಗೆ ಸಾಗುವ ಅಸಂಖ್ಯ ಜೀವ ಜಂತುಗಳು, ಕಸ ಕಡ್ಡಿ ಕಷಗಳು, ಮಾನವ ನಿರ್ಮಿತ ಹಡಗು ಪಾಯಿಗಳಂತೆ; ಮನುಷ್ಯ ಸಂಬಂಧಗಳ ನಡುವಿನ ಸಂಘರ್ಷ,
ಸೋಲು ಗೆಲುವಿನ ಮೇಲಿಳಿತ, ಜಾತಿ ಜತನದ ರಾಜಕೀಯ ಈ
ಕಾದಂಬರಿಯುದ್ದಕ್ಕೂ ಹರಿದಿದೆ. ಅಣ್ಣ ತನ್ನುಂದಿರ ನಡುವೆ ಹಂಚಿ ಹೋದ ಭೂಮಿ ಹಾಗೂ ಆದರೊಂದಿಗೆ ಪಾಲಾದ ನೀರಿನ
ಒಡೆತನ ಹೇಗೆ ಮನಸ್ಸುಗಳನ್ನು ಒಡೆಯುವುದರಲ್ಲಿ ಸಫಲವಾಗುತ್ತದೆ. ಹೆಣ್ಮನವನ್ನು ನಲುಗಿಸುತ್ತದೆ; ಅಲ್ಲೇ ಹುಟ್ಟಿದ ದ್ವೇಷ ಅಸೂಯೆಯ ಸೆಲೆ ಅದು ಹೇಗೆ ಮನುಷ್ಯನ ವೃತ್ತಿ ಪ್ರವೃತ್ತಿಗೂ ಆದರಿಸಿಕೊಳ್ಳುತ್ತದೆ ಎಂಬುದನ್ನು ಈ ಕಾದಂಬರಿ ಹಂತ ಹಂತವಾಗಿ ಕಾಣಿಸುತ್ತಾ ಹೋಗುತ್ತದೆ. ಸಣ್ಣ ಊರೊಂದರ ಜನಜೀವನ, ಸಾಂಸ್ಕೃತಿಕ ಆಚರಣೆ ಇತ್ಯಾದಿಗಳ ದಟ್ಟ ವಿವರಗಳ ಜೊತೆಗೆ ಕಾಲಾಂತರದಲ್ಲಿ ಅವುಗಳಲ್ಲಾಗುವ ಪಲ್ಲಟದನ್ನೂ ಮನೋಜ್ಞವಾಗಿ ಈ ಕೃತಿ ಹಿಡಿದು ಕೊಡುತ್ತದೆ.
ಪಾತ್ರಗಳ ಮನೋಖನನ ಹಾಗೂ ಯಾರು ಸರಿ, ಯಾರು ತಪ್ಪೆಂಬ ಮಾಪನದ ನಿರಾಕರಣೆಗಳೆರಡೂ ಇಲ್ಲಿ ಏಕಕಾಲಕ್ಕೆ ಸಂಭವಿಸುತ್ತದೆ. ಆ ಮುಖೇನ, ಪ್ರತಿ ಪಾತ್ರವೂ ವ್ಯವಸ್ಥೆ ಹಾಗೂ ಕಾಲದ ಬಲಿಪಶುಗಳು ಎಂಬ ಸಂದೇಶವೂ ಪ್ರತಿಫಲಿಸುತ್ತದೆ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.