Your cart is empty now.
'ಶತಮಾನಂಭವತಿ' ಅನ್ನೋದು ನೂರು ವರ್ಷ ಚೆನ್ನಾಗಿ ಬಾಳಲಿ ಎಂದು ಆಶೀರ್ವದಿಸುವ ಮಂತ್ರ. ಈ ಮಂತ್ರದ ಆಶಯವೇ ಕಾದಂಬರಿಯ ತಲೆಬರಹ, ಈ ಆಶಯದಂತೆ ರಘು ಅನ್ನುವ ಪ್ರಮುಖ ಪಾತ್ರದಾರಿ ಪರಿಶುದ್ಧ ಪ್ರೀತಿಗಾಗಿ ಹಪಾಹಪಿಸುತ್ತಾನೆ ಜೊತೆಗೆ ಆ ಪ್ರೀತಿಯನ್ನ ಗಳಿಸಿ ಜೀವನ ಪೂರ್ತಿ ಕಾಪಿಟ್ಟುಕೊಳ್ಳುವ ಉದ್ದೇಶವನ್ನು ಸಹ ಇಟ್ಟುಕೊಂಡಿರುತ್ತಾನೆ. ಅಷ್ಟೇ ಅಲ್ಲ ಅಂತಹ ಪ್ರೀತಿ ಪಡೆಯಲು ಪರಿಶುದ್ಧನಾಗೇ ಈತನು ಇರುತ್ತಾನೆ. ಮ್ಯಾಟ್ರಿಮೊನಿಯಲ್ ಅನ್ನೋದು ಮದುವೆ ಮಾಡಸಲಿಕ್ಕೆ ಇರುವ ಆನ್ ಲೈನ್ ವೆಬ್ ಸೈಟ್, ಈ ಆನ್ ಲೈನ್ ಪೇಜ್ ಗೆ ಮದುವೆಯಾಗುವ ಹುಡುಗಿಯ ತಲಾತ್ ಮಾಡಲು ನೋಂದಾಯಿಸಿಕೊಳ್ಳುವ ಕಥಾನಾಯಕ ರಘು ಪ್ರೊಫೈಲ್ ಮೂಲಕ ಪರಿಚಯ ಆಗುವ ಹುಡುಗಿ ಜೊತೆಯಲ್ಲಿ ಚಾಟ್ ಆರಂಭಿಸಿದ ನಂತರ ಅವಳೆಡೆಗೆ ಅನುರಾಗ ತೋರಿ ಆ ನಂತರ ಅವಳು ಸಿಗದೆ ಮೋಸಕ್ಕೆ ಒಳಗಾಗುತ್ತಾನಾ? ಅಥವಾ ಅವನಿಗೆ ಅವಳ ಪ್ರೀತಿ ಧಕ್ಕುತ್ತಾ? ಅನ್ನುವ ಹುಡುಕಾಟದಲ್ಲಿರುವ ನಮಗೆ, ಅದೇ ವಂಚನೆ ಮೋಸದ ಕಾರಣಗಳಿಂದ ಮತ್ತೆ ಹೇಗೆ ಅತ ಪ್ರೀತಿಯನ್ನ ಗಳಿಸುತ್ತಾನೆ ಅನ್ನುವ ಕಥಾ ಹೂರಣ ಇರುವ ಕಾದಂಬರಿ ಶತಮಾನಂಭವತಿ, ಕಾದಂಬರಿಯ ಅಂತ್ಯದಲ್ಲಿ ಹೇಳುವ ವಿಷಯವನ್ನ ನಮಗೆ ಗೊತ್ತಿಲ್ಲದಂತೆ ಮೊದಲಿಂದಲೂ ಬೆಸೆದುಕೊಂಡೆ ಬಂದಿರುತ್ತಾರೆ. ಅದೇ ಈ ಕಾದಂಬರಿಯ ಹೆಗ್ಗುರುತು. ಕಾದಂಬರಿಕಾರ ರಾಜಶೇಖರ್ ಮೂಲತಃ ಸಿನೆಮಾ ನಿರ್ದೇಶನ ಮಾಡಲು ಬಂದಾತ. ಆ ರಂಗದಲ್ಲಿ ಒಂದು ದಶಕಕ್ಕೂ ಹೆಚ್ಚು ಅವಧಿಯಲ್ಲಿ ಕೆಲಸ ಮಾಡಿ ಸದಭಿರುಚಿಯ ಹಾಗೂ ಹೊಸತನ ಇರುವ ಸಿನೆಮಾ ಕೊಡಬೇಕೆಂಬ ಸದಾ ಇಚ್ಚೆಯುಳ್ಳ ವ್ಯಕ್ತಿ, ವರ್ತಮಾನದ ಹದಿಹರೆಯದ ಪ್ರೀತಿ, ಪ್ರೇಮ ತಲ್ಲಣಗಳನ್ನ ಹೊಸತನದ ಹಚ್ಚಿಗೆ ಹಾಕಿ ಚೆಂದದ ರೂಪಗಳನ್ನ ಕೊಟ್ಟಿದ್ದಾರೆ. ಇದನ್ನ ಓದುತ್ತಿರುವಾಗಲೇ ಒಂದು ಸಿನೆಮಾ ನೋಡಿದ ಅನುಭವವಾಗುತ್ತದೆ, ಅಂದರೆ ಆ ರೀತಿಯಲ್ಲಿ ಕಾದಂಬರಿಕಾರರು ಸಾಹಿತ್ಯ ಕಟ್ಟಿಕೊಟ್ಟಿದ್ದಾರೆ. ಇದು ಅವರ ಚೊಚ್ಚಲ ಕೃತಿ, ಮುಂದೆ ಏನಾಗಬಹುದು ಅನ್ನುವ ಕುತೂಹಲಗಳ ನಡುವೆ ಕಾದಂಬರಿ ಓದಿಸಿಕೊಂಡು ಹೋಗುತ್ತದೆ. ಒಳ್ಳೆಯ ಬರಹಗಾರರಾಗುವ ಕುರುಹುಗಳನ್ನ ಈ ಪುಸ್ತಕದ ಮೂಲಕ ಮಿತ್ರರು ನೀಡಿದ್ದಾರೆ. ಓದುಗರು ಅರೆಕೊರೆಗಳನ್ನ ಮನ್ನಿಸಿ ಸ್ವೀಕರಿಸಿ ಪ್ರೋತ್ಸಾಹಿಸಲಿ ಅನ್ನುವ ಸದಾಶಯ. ರಾಜು ಸೂನಗಹಳ್ಳಿ ಬರಹಗಾರ, ಚಲನಚಿತ್ರ ನಿರ್ದೇಶಕ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.