ಸುತ್ತಮುತ್ತಲಿನ ಹಳ್ಳಿಗಳ ಮತ್ತು ಬೆಟ್ಟದ ಹೊರವಲಯಗಳ ಹುಡುಗರು ಮತ್ತು ಹುಡುಗಿಯರು ಶಾಲೆಗೆ ಹೋಗುವಾಗ ಪ್ರತಿದಿನ ನನ್ನ ಮುಂದೆ ಹಾದು ಹೋಗುತ್ತಾರೆ. ಅವರಲ್ಲಿ ಹಲವರಿಗೆ ಶಾಲೆಗೆ ಹೋಗುವುದು ಬಹುದೂರದ
ನಡಿಗೆಯಾಗಿರುತ್ತದೆ.
ಸಾಹಸಿ ಮಕ್ಕಳು, ತುಂಟ ಮಕ್ಕಳು, ಜವಾಬ್ದಾರಿಯುತ ಮಕ್ಕಳು ಭಾರತದ ಮಕ್ಕಳ ಕುರಿತಾದ ಈ ಕಥಾಸಂಗ್ರಹದಲ್ಲಿ ಎಲ್ಲ ವಿಧದ ಮಕ್ಕಳಿದ್ದಾರೆ. ಭಾರತದ ನೆಚ್ಚಿನ ಮಕ್ಕಳ ಸಾಹಿತಿಗಳಲ್ಲಿ ಒಬ್ಬರಾಗಿರುವ ರಸ್ಕಿನ್ ಬಾಂಡ್ ಅವರು ತಮ್ಮ ಸಣ್ಣಕತೆ, ಕಿರುಕಾದಂಬರಿ ಮತ್ತು ಕಾದಂಬರಿಗಳಲ್ಲಿ ಮರೆಯಲಾಗದ ಬಾಲನಾಯಕರನ್ನು ಸೃಷ್ಟಿಸಿದ್ದಾರೆ. ಬಿನ್ಯಾ ಮತ್ತು ರಸ್ಬಿಯವರಿಂದ ಹಿಡಿದು ನಾಲ್ಕು ಗರಿಗಳವರೆಗೆ ಈ ಪಾತ್ರಗಳು ಹಲವು ವರ್ಷಗಳಿಂದ ಓದುಗರನ್ನು ಮುದಗೊಳಿಸಿವೆ.
-
ರಸ್ಕಿನ್ ಬಾಂಡ್ ಅವರು ಈ ಸಂಕಲನದಲ್ಲಿ ಕೆಲವು ಮರೆಯಲಾಗದ ಮಕ್ಕಳನ್ನು ಮತ್ತು ಬಾಲ್ಯದ ಸಂತಸವನ್ನು, ಸೋಜಿಗವನ್ನು, ಹೃದಯದ ನೋವನ್ನು ಮತ್ತು ಮುಕ್ತತೆಯನ್ನು ಜೊತೆಗೂಡಿಸಿ ಅದನ್ನು ಮತ್ತೊಮ್ಮೆ ಜೀವಂತಗೊಳಿಸಿದ್ದಾರೆ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.