Your cart is empty now.
ಕನ್ನಡ ಭಾಷೆಗೆ ಪಕ್ಕಾ ನಾಟಿ ರಸಭರಿತ ಸಂಗೀತವಿದೆ ಎಂದು ತೋರಿಸಿದ್ದು ಮಹದೇವರ ದೈವಿಕ ಬರವಣಿಗೆ ಅವರು 'ಸಂಬಂಜ ದೊಡ್ಡದು' ಅಂದರು. ಅದನ್ನ ದಯಾನಂದ 'ರಿಲೇಷನ್ನು' ಎನ್ನುತ್ತಾ ಸಮಕಾಲೀನ 'ಸೌಂಡು' ಎಬ್ಬಿಸಲೆತ್ನಿಸ್ತಾನ. ಅಂದಿನ ಮಾಹಿತಿ ಕ್ರಾಂತಿಯುಗದಲ್ಲಿ ಪ್ರಾಂಜಲ ಮನಸ್ಸಿನ ಕನ್ನಡ ಬರವಣಿಗೆಗಳು ಕಮ್ಮಿ. ಫೇಸ್ಟುಕ್ ಇತ್ಯಾದಿಗಳಲ್ಲಿ ಎಲ್ಲು ಏನೇನೋ ಬರಕೊಂಡು, ಓದುಗನಿಗೆ ನೀಟಾಗಿ ಕನ್ನಡ ಲಿಪಿಗಳಲ್ಲಿ ಟೈಪಿಂಗ್ ಆದದ್ದೆಲ್ಲ ಮಹಾನ್ ಸಾಹಿತ್ಯ ಸೃಷ್ಟಿ ಇರಬಹುದೇನೋ ಎಂಬ ಭ್ರಮೆ ಹುಟ್ಟಿಬಿಡುತ್ತದೆ.
ಸಾಹಿತ್ಯವು ಸಂಡೇ ಬಜಾರ್ ಆದಾಗ ಕನ್ನಡವನ್ನು ಕಾದು ಓದುವವರ ಮನಸ್ಸು ಮಾಡಿ ಆಗ್ತದೆ ಜೊತೆಗೆ ಕನ್ನಡದಲ್ಲಿ ಬರುತ್ತಿರುವ ಕತೆ ಕವನ ಇತ್ಯಾದಿಗಳನ್ನೆಲ್ಲ ಮುಲಾಜಿಲ್ಲದೇ ಮೆಚ್ಚಿ ವಿಮರ್ಶಿಸುವ ಕಾಲ ಕನ್ನಡದ ಇಂದಿನ ಸಂದರ್ಭದಿಂದ ಎಗರಿಬಿದ್ದು ಆಚೆಗೆಲ್ಲೋ ಹೊರಟೇ ಹೋಗಿದೆಯೇನೋ. 'ನೀವು ಒಳ್ಳೇ ಕತೆ ಬರೀರಿ. ನಾವು ಓದೇ ಓದ್ದೀವಿ' ಅಂತ ಎಲ್ಲು ಅಂತಾರೆ. ಆದರೂ ಯಾರೂ ಓದಲ್ಲ. ಒಬ್ಬ ಸಾಹಿತಿಯ ಹೊಳಹುಗಳನ್ನು ಇನ್ನೊಬ್ಬ ಸಾಹಿತಿ ಮೆಚ್ಚಿಕೊಳ್ಳುತ್ತಿರುವ ಉದಾಹರಣೆಗಳೂ ಕಮ್ಮಿ 'ಸಾಹಿತಿ ಸಾಹಿತಿಗಳಿಗೆ ಬ್ಯಾಡವಾದ್ದು ಓದುಗನಿಗೇಕೆ ಬೇಕು ಮಾದೇಸ್ವರಾ!!' ಎಂಬಂತಾಗಿದೆ. ಅಂಥದ್ದರಲ್ಲಿ ಟಿ.ಕೆ.ದಯಾನಂದನ ಕತೆಗಳು ಮುಲಾಜಿಲ್ಲದೆ ಮೆಟ್ಟಿ ಓದಬಹುದಾದ ರಚನೆಗಳು ಅಂತ ಕೈ ತೋರಿಸಿ ಹೇಳಬಹುದು.
ಇವನ 'ತಲೆಯಪ್ಪ ದೇವರು' ಕತೆಯಿಂದ ಹಿಡಿದು 'ಹುಲಿಮೊಗರು' ಕತೆಯ ತನಕ ಎಲ್ಲ ಕತೆಗಳಿಗೂ ಒಂದೇ ಬೈಹತ್ತಿನಲ್ಲಿ ಓದಿಸಿಕೊಳ್ಳುವ ತಾಕತ್ತಿದೆ. ನಂತರದ ಕೆಲವು ಕತೆಗಳಲ್ಲಿ ಎಂತದೋ ಯು ಟರ್ನ್ ಹೊಡೀತಿದ್ದಾನ ಟರ್ನ್ ಹೊಡೆದು ಎಲ್ಲಾಗೋದ ಗೊತ್ತಾಗಲಿಲ್ಲ. ಜೊತೆಗೆ ಕೆಲವು ಕತೆಗಳಲ್ಲಿ 'ಎರಡೆರಡು' ಆಯಾಮಗಳನ್ನು ಕೂರಿಸಲು ಯತ್ನಿಸುವಾಗ ಕತೆಯೊಳಗೊಂದು ಕತೆ ಹುಟ್ಟಿ, 'ಅಪ್ಪನ ಜೊತೆ ಮಗರಾಯ ಫ್ರೀ' ಎಂಬಂತೆ ಬೋನಸ್ ಕೊಡುವ ಡಬ್ಬಲ್ ಕತೆಗಳಾಗಿದೆಯೇನೋ ಅನ್ನಿಸ್ತದೆ ಹಾಗೆಯೇ ವಿಷಯವನ್ನು ವಿಶಿಷ್ಟವಾಗಿ ಹೇಳಿಯೇ ತೀರುತ್ತೇನೆಂದು ತೀರಾ ಉದ್ದದ ವಾಕ್ಯರಚನೆ ಕೆಲವೆಡೆ ಪ್ರಯೋಗಿಸುವುದು ದಯಾನಂದನ ದಾದಾಗಿರಿ ಹಾಗೂ ಅವನದೇ ಆದ ತುಂಬ ಉದ್ದದ 'ಶಾರ್ಟ್ ಕಟ್' ಅಮ! ಇವೊಂದೆರೆಡು ಪಾಯಿಂಟುಗಳಲ್ಲಿ ಓದುಗನಿಗೆ ತುಸು ತಲ್ಲೀನತೆ ಕಮ್ಮಿ ಆಗಬಹುದೇನೋ ಅನ್ನಿಸಿತು. ಬಿಟ್ಟರೆ ಅಪರಂಪಾರ ಕನ್ನಡತನ, ಕನ್ನಡ ಹಿನ್ನೆಲೆ ಹೊಂದಿರುವ ಅಸಾಧಾರಣ 'ಶೋಧನಾಶೀಲತೆ' ಇರುವ 'ಮೆಟೀರಿಯಲ್ಲು' ಇಡೀ ಕಥಾ ಸಂಕಲನದಲ್ಲಿದೆ.
`ಕೈಲೊಂದು ಮೊಣ್ಣೆ, ಲಾಟೀನು, ಕಂಬಳಿ ಹೊದ್ದು, ಮೊಬೈಲು ಬೆಳಕಿನ ಟಾರ್ಚ್ ಹಿಡಿದ ದೊಂಬರಾಟದ ಸ್ಪೆಷಲಿಸ್ಸಿನವನಂತೆ ಕಾಣುವ ದಯಾನಂದ ಯಾವುದೋ ಕತ್ತಲಿನೂರಿಗೂ, ಬೆಳಕಿನೂರಿಗೂ ಒಮ್ಮೊಟ್ಟಿಗೇ 'ವಿಸಿಟ್ ಹಾಕಲು' ವತ್ತಾರೆಯೇ ಊರು ಬಿಟ್ಟವನಂತೆ ಕಾಣುತ್ತಾನೆ.. ಅವನ ಪಯಣಕ್ಕೆ ಅವನವೇ ದಿಕ್ಕು, ರೆಕ್ಕೆ, ಸೊಕ್ಕು ಮತ್ತು ಬಿಕ್ಕುಗಳಿವೆ. ಆತ 'ಹಿಂಗೇ ಹೋಯ್ತಾ ಇದ್ರೆ, ಭವಿಷ್ಯದಲ್ಲಿ ಕನ್ನಡಕ್ಕೊಂದು ಹೊಸ ಊರನ್ನೇ ಮಡುಕಿಕೊಟ್ಟಾನು. ಅವನನ್ನು ಓದುವಾಗ 'ಅವನ ಪಾಡಿಗೆ ಅವನನ್ನು ಬಿಡಬೇಕು' ಎಂದು ಸಹಜವಾಗಿ ಅನ್ನಿಸ್ತದೆ ತಂಟೆಗೆ ಹೋಗಬಾರದೆಂತಲೂ ಅನ್ನಿಸ್ತದೆ. ಅದು ಅವನ ಸ್ಪೆಷಾಲಿಟಿ. ಜಯವಾಗಲಿ ಕಥಾಸಂಗ್ರಹಕ್ಕೆ
- ಯೋಗರಾಜ್ ಭಟ್
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.