ಬಿ.ಟಿ. ಜಾಹ್ನವಿ ಅವರು ತಮ್ಮ ಕಳೆದುಕೊಂಡವಳು ಮತ್ತು ಇತರ ಕಥೆಗಳು ಸಂಕಲನದ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸಿದವರು.
ಈ ಸಂಕಲನದ ವ್ಯಭಿಚಾರ','ವಿಮುಖ'ದಂತಹ ಕತೆಗಳನ್ನು ಓದಿದ ಹಲವರು ಬೆಚ್ಚಿಬಿದ್ದರೆ, ಕೆಲವರು ಅವುಗಳಲ್ಲಿ ಪ್ರಕಟವಾದ ಪ್ರಾಮಾಣಿಕತೆಗೆ ತಲೆಬಾಗಿದ್ದೂ ನಿಜ.
ಈ ಸಂಕಲನದ ಪ್ರತಿಯೊಂದು ಕತೆಯೊಳಗೂ, ಒಂದೊಂದು ಬಗೆಯ ಹುಡುಕಾಟವಿದೆ, ಈ ಹುಡುಕಾಟ ಜೀವಂತಿಕೆಯ ಲಕ್ಷಣವಾದಂತೆ ಬೆಳವಣಿಗೆಯ ಲಕ್ಷಣವೂ ತಮ್ಮ ಹುಡುಕಾಟದ ಫಲವಾಗಿ ಪರಿಹಾರವನ್ನು ಕೆಲವರು ಕತೆಯ ಕೊನೆಯಲ್ಲಿ ಕಂಡುಕೊಂಡರೆ, ಇನ್ನು ಕೆಲವರು ಕಾಣಲಾಗದೆ ಹತಾಶರಾಗುವುದಿದೆ. ಇನ್ನೊಬ್ಬರ ಉತ್ತರದ ಹುಡುಕಾಟಕ್ಕೆ ನಿಮಿತ್ತವಾಗುವವರು ಕೆಲವರಾದರೆ, ಇನ್ನೊಬ್ಬರಿಂದ ಉತ್ತರ ಕಂಡುಕೊಳ್ಳುವವರು ಕೆಲವರು.
ಜಾಹ್ನವಿಯವರ ಕತೆಗಳನ್ನು ಓದುವಾಗ ನಮ್ಮ ಗಮನಸೆಳೆಯುವ ಅಂಶಗಳು ಹಲವು. ಅವರು ಕಥನಕ್ಕೆ ಎತ್ತಿಕೊಳ್ಳುವ ವಿಷಯದಲ್ಲಿ ತೋರುವ ದಿಟ್ಟತನ, ಅದರ ನಿರ್ವಹಣೆಯಲ್ಲಿ ಇರಿಸಿಕೊಳ್ಳುವ ಪ್ರಾಮಾಣಿಕತೆ ಮತ್ತು ಅವುಗಳನ್ನು ಕಥನವಾಗಿಸುವಲ್ಲಿ ಉಳಿಸಿಕೊಳ್ಳುವ ತನ್ಮಯತೆ - ಇವು ಓದುಗರನ್ನು ತಟ್ಟುತ್ತವೆ. ಭಾಷೆಯ ಸಾಂಪ್ರದಾಯಿಕ ನಿಯಮಗಳನ್ನು ನಿಸ್ಸಂಕೋಚವಾಗಿ ಗುಡಿಸಿ ಮೂಲೆಗಟ್ಟಿ, ವಾಕ್ಯವನ್ನು ಮುರಿದು ಕಟ್ಟುವ ಅವರ ಭಾಷಾಪ್ರಯೋಗವೂ ವಿಶಿಷ್ಟ.
ಇವರ ಕತೆಗಳು ಒಂದು ಗುಂಪಿನ ಕಥನಗಳಲ್ಲ; ಹಳವಂಡಗಳಲ್ಲ. ಇವು ಎಲ್ಲ ವಯೋಮಾನ, ವರ್ಗ, ವರ್ಣ, ಲಿಂಗದ ವ್ಯಕ್ತಿಗಳ ಸೋಗಲಾಡಿತನ, ಇಬ್ಬಂದಿ ನಿಲುವು, ಅಂತಃಶಕ್ತಿ, ನಿರ್ವಿಯತ ಮತ್ತು ಹೊಸ ಛಳಕುಗಳನ್ನು ಗುರುತಿಸಿ ತೋರಿಸುವಲ್ಲಿ ಆಸಕ್ತವಾಗಿವೆ. ಅಂತೆಯೇ ನಮ್ಮೊಳಗನ್ನು ತುಂಬುತ್ತವೆ.
ಬಿ.ಟಿ. ಜಾಹ್ನವಿಯವರು ಇನ್ನಿಷ್ಟು ಬರೆಯಲಿ ಎಂದು ಆಶಿಸುವೆ.
- ಸಬಿಹಾ ಭೂಮಿಗೌಡ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.