NAAVU MOORKHA MAANAVARALLAVE? - Beetle Book Shop

ನಾವು ಮೂರ್ಖ ಮಾನವರಲ್ಲವೇ? | Naavu Moorkha Maanavarallave?

Rs. 162.00
Sale price  Rs. 162.00 Regular price  Rs. 180.00
Skip to product information
NAAVU MOORKHA MAANAVARALLAVE? - Beetle Book Shop

ನಾವು ಮೂರ್ಖ ಮಾನವರಲ್ಲವೇ? | Naavu Moorkha Maanavarallave?

Rs. 162.00
Sale price  Rs. 162.00 Regular price  Rs. 180.00

Vendor : BEETLE BOOK SHOP

ಆ ಕ್ಷಣದ ಸತ್ಯಗಳಿವು. ಥಟ್ಟನೆ ಹೊಳೆದದ್ದನ್ನು ಹೊಳಪಾಗಿಸಲು ಹೋಗದೇ ಹೊಳೆದಂತೆ ಬರೆದಂಥ ಟಿಪ್ಪಣಿಗಳು. ಇಲ್ಲಿ ದಿನನಿತ್ಯದ ಸಂಭ್ರಮ, ಉಲ್ಲಾಸ, ದುಗುಡ, ಆತಂಕ, ಉಪದೇಶ, ಪ್ರಶ್ನೆ, ಬೆರಗು ಎಲ್ಲವೂ ಇದೆ. ಪಳಗಿದ ಲೇಖಕನ ಕೈಗೆ ಸಿಕ್ಕರೆ ಈ ಟಿಪ್ಪಣಿಗಳು ಕತೆಯೋ ಕವಿತೆಯೋ ಆಗುತ್ತದ್ದಿವು. ಸಾವು, ಬದುಕು, ವೇದಾಂತ, ತಮಾಷೆ, ಏಕಾಂತ, ವಿಷಾದ-ಎಲ್ಲವನ್ನೂ ವಿನಯ್‌ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ದಾಖಲಿಸಿದ್ದಾರೆ.
ಬದುಕಿಗೆ ಭಾಷ್ಯ ಬರೆಯುವ ಆಸೆ ನಮ್ಮೆಲ್ಲರಿಗೂ ಇರುತ್ತದೆ. ಬದುಕನ್ನು ಹಿಡಿಯುವುದಕ್ಕೆ ಸುದೀರ್ಘ ಬರಹ ಬೇಕೇ ಅಥವಾ ಪುಟ್ಟ ಪುಟ್ಟ ಪ್ರಸಂಗಗಳಲ್ಲಿ ದಿನನಿತ್ಯದ ತವಕ ತಲ್ಲಣಗಳನ್ನು ಹಿಡಿದಿಡಬಹುದೇ ಎಂಬ ಉತ್ತರವಿಲ್ಲದ ಪ್ರಶ್ನೆಯನ್ನು ಮುಂದಿಟ್ಟುಕೊಂಡೇ ಈ ಬರಹಗಳನ್ನು ಓದಬೇಕು.
ನನಗೆ ಇಷ್ಟವಾದದ್ದು ವಿನಯ್‌ ಅವರ ಬರಹದ ವಿಸ್ತಾರ ಮತ್ತು ವಿನಯ. ಅವರದು ಉಪದೇಶದ ಧಾಟಿ ಅಲ್ಲ, ಅರಿತುಕೊಳ್ಳುವ ಹಾದಿ. ತನಗೆ ಅನ್ನಿಸದ್ದಿನ್ನು ಓದುಗರ ಮುಂದಿಟ್ಟು ವಿಧೇಯ ವಿದ್ಯಾರ್ಥಿಯಂತೆ ಕೈ ಕಟ್ಟಿ ನಿಲ್ಲುವ ಅವರ ಸಜ್ಜನಿಕೆ ಮತ್ತು ಸರಳತೆ ಈ ಬರಹಗಳಲ್ಲೂ ಕಾಣಿಸುತ್ತದೆ.
ಇವು ನಿಮ್ಮಲ್ಲೂ ಅನೇಕ ನೆನಪುಗಳನ್ನು ಉಕ್ಕಿಸಬಹುದು. ನಿಮ್ಮನ್ನೂ ಆಲೋಚನೆಗೆ ಹಚ್ಚಬಹುದು. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ವಿಚಿತ್ರವಾದ ನಡವಳಿಕೆಗಳನ್ನು ಮತ್ತೊಮ್ಮೆ ನೋಡಿಕೊಂಡು ತಮಾಷೆ ಮಾಡಿಕೊಳ್ಳುವ ಸದ್ಗುಣವನ್ನು ಕರುಣಿಸಬಹುದು. ಅಷ್ಟರ ಮಟ್ಟಿಗೆ ಇವು ಸಾರ್ಥಕ.

-ಜೋಗಿ

Additional Information

Description

Shipping Policy
Shipping Policy

Our shipping policy is designed to ensure fast and reliable delivery services for all our customers. We strive to provide efficient shipping solutions that meet your needs and guarantee timely delivery of your orders. Rest assured that we have established clear shipping terms and conditions to make your shopping experience seamless and hassle-free.

Delivery Terms

Our delivery terms are simple and transparent, outlining everything you need to know about our shipping process. We offer various delivery options to cater to your preferences and requirements. From standard shipping to expedited delivery, we have you covered. We are committed to delivering your orders promptly and with the utmost care.

Shipping Information

For detailed shipping information, please refer to our shipping page, where you can find all the necessary details about our delivery services. This includes shipping rates, estimated delivery times, and any other pertinent information. We aim to provide you with up-to-date shipping information to help you track your orders and ensure a smooth delivery process.

You may also like