Your cart is empty now.
ವಯಸ್ಸಾಗುವುದು ಎಂಬ ಅನುದಿನದ ಪ್ರಕ್ರಿಯೆಯೇ ಸೃಷ್ಟಿಯ ಒಂದು ಸೋಜಿಗ. ಸಾವಿನ ಹಾದಿಯಲ್ಲಿ ಬರುವ ಒಂದು ಹಂತವಾದ ಕಾರಣಕ್ಕೋ ಏನೋ ವಯಸ್ಸಾಗುವುದೆಂದರೆ ನಿಡುಸುಯ್ಯುವವರೇ ಹೆಚ್ಚು. ಹಾಗಂತ ವಯಸ್ಸಾಗುವುದೇನು ನಿಲ್ಲುತ್ತದೆಯೇ? ಖಂಡಿತ ಇಲ್ಲ! ಮುಪ್ಪು, ವೃದ್ಧಾಪ್ಯ, ವಾನಪ್ರಸ್ಥಾಶ್ರಮಗಳೆಂದು ಹಲವು ಹೆಸರುಗಳಲ್ಲಿ ಕರೆಯಲಾಗುವ ಈ ಹಂತವು ಬರುವ ಸಮಯದಲ್ಲಿ ಬಂದೇ ಬರುತ್ತದೆ. ವರ್ಷಗಳಲ್ಲಿ ಆಯಸ್ಸನ್ನು ಅಳೆಯುವ ನಮಗೆ, ನಿಮಿಷಗಳಲ್ಲಿ ಸೋರಿಹೋಗುವ ಆಯಸ್ಸೇಕೆ ಅಷ್ಟಾಗಿ ಗಮನಕ್ಕೆ ಬರುವುದಿಲ್ಲ? ವೃದ್ಧಾಪ್ಯದಲ್ಲೂ ಚಂದದ ಬದುಕು ಸಾಧ್ಯವಿಲ್ಲವೇ? ವೃತ್ತಿಬದುಕಿನಲ್ಲಿ ನಿವೃತ್ತಿಗೆ ತಯಾರಾದಂತೆ, ಬದುಕಿನಲ್ಲಿ ವೃದ್ಧಾಪ್ಯಕ್ಕೆ ತಯಾರಾದರೆ ತಪ್ಪೇನಿದೆ? ಹೀಗೆ ಹಲವು ಪ್ರಶ್ನೆ-ತಲಾಶೆಗಳ ಚುಂಗು ಹಿಡಿಯುತ್ತಾ ಹೊರಟ ನನಗೆ ದಕ್ಕುತ್ತಾ ಹೋದ ಸಂಗತಿಗಳು ಸಾಕಷ್ಟು. ಈ ವಿಷಯದ ಬಗ್ಗೆ ಪುಸ್ತಕವೊಂದನ್ನು ಬರೆಯಲು ನನಗೇನು ಮಹಾವಯಸ್ಸು ಎಂಬ ಪ್ರಶ್ನೆಯು ಕಾಡಿದ್ದೇನೋ ಹೌದು. ಆದರೆ ಬರಹಗಾರನೊಬ್ಬ ತನ್ನನ್ನು ಬಲವಾಗಿ ಕಾಡಿದ ಸಂಗತಿಗಳ, ಕತೆಗಳ ಬಗ್ಗೆ ತನ್ನ ಓದುಗರೊಂದಿಗೆ ಹೇಳಿಕೊಳ್ಳದೆ ಹೆಚ್ಚು ಕಾಲ ಇರಲಾರ. ಇವೆಲ್ಲದರ ಫಲವೇ ಈ ಪುಸ್ತಕ. "ಮುಸ್ಸಂಜೆ ಮಾತು" ಬದುಕಿನ ಮುಸ್ಸಂಜೆಯ ಕತೆಗಳನ್ನು ನಿಮಗಾಗಿ ತೆರೆದಿಟ್ಟಿರುವ ಒಂದು ಕಿರುಹೊತ್ತಗೆ. ಒಂದಲ್ಲ ಒಂದು ಹಂತದಲ್ಲಿ ಬದುಕಿನ ಮುಸ್ಸಂಜೆಯನ್ನು ನೋಡಲಿರುವ ಪ್ರತಿಯೊಬ್ಬರೂ ಒಮ್ಮೆ ಓದಬೇಕಾದ ಪುಸ್ತಕವಿದು ಎಂದು ವಿನಯದಿಂದ ಹೇಳಬಲ್ಲೆ! - ಪ್ರಸಾದ್ ನಾಯ್ಕ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.