Mithya Sukha ( Novel ) - Beetle Book Shop

Mithya Sukha ( Novel )

Rs. 292.00
Sale price  Rs. 292.00 Regular price  Rs. 365.00
Skip to product information
Mithya Sukha ( Novel ) - Beetle Book Shop

Mithya Sukha ( Novel )

Rs. 292.00
Sale price  Rs. 292.00 Regular price  Rs. 365.00

Vendor : BEETLE BOOK SHOP

ನಮ್ಮೊಡನೆ ಜೈವಿಕವಾಗಿ ಹೆಣೆದುಕೊಂಡಿರದ ಆದರೆ ನಾವು ಅನಿವಾರ್ಯವಾಗಿ ಕಟ್ಟಿಕೊಂಡ ಬದುಕಿನ ದೈನಿಕ ಲಯಗಳಲ್ಲಿ ಏನನ್ನೊ ಹುಡುಕುವುದು; ಅನೂಹ್ಯವಾದ, ಅತೀತವಾದ ಹಾಗೆಯೇ ಅಗಮ್ಯವಾದ ಮತ್ತಾವುದೋ ಸೆಳೆತಕ್ಕೆ ಈ ದೈನಿಕ ಲಯಗಳ ನಡುವೆ ಸಿಲುಕುವುದು; ಈ ಎರಡು ತುಯ್ತಗಳ ನಡುವೆ ಸಾಗುವ ಕಥನವಿದು. ಈ ಸೆಳೆತ ಕಾಣದುದರ ಎಡೆಗಿನ ತುಯ್ತವೋ ಅಥವಾ ಕಳೆದ ಅನುಭವವೊಂದರ ಮರುಕಳಿಕೆಯೋ ಎಂಬ ದ್ವಂದ್ವ ಕಾಣುತ್ತದೆ.

ದೈನಿಕ ಲಯಗಳ ನಿರೂಪಣೆಯಲ್ಲಿ ನಿರೂಪಕರು ಹೊರಗೆ ನಿಂತು ನೋಡುವ, ಮತ್ತು ಒಳಹೊಕ್ಕು ವಿವರಿಸುವುದನ್ನು ಎಚ್ಚರದಿಂದ ನಿವಾರಿಸಿಕೊಳ್ಳುವ ನೆಲೆಯನ್ನು ಅನುಸರಿಸುತ್ತಾರೆ. ಆದರೆ ಈ ದೈನಿಕ ಲಯಗಳ ನಡುವೆ ತಲೆಯೆತ್ತುವ ದೂರದ ಕರೆಯು ಪದಗಳಲ್ಲಿ, ಕವಿತೆಗಳಲ್ಲಿ, ನಾದದಲ್ಲಿ ಮೈಮುರಿದೇಳುತ್ತಿರುತ್ತದೆ. ಈ ಸೆಳೆತದ ಉತ್ಕಟತೆಗಳು ಒಂದು ಕಡೆ. ಆ ದೂರದ ಕರೆಯು ವಾಸ್ತವವಾಗಿ ಮೈದಳೆಯುವಾಗಿನ ಅನುಭವದಲ್ಲಿ ದಿಟ ಸಟೆಗಳ ನಡುವಣ ಗಡಿಗೆರೆಗಳು ಅಳಿಸಿ ಹೋಗುವುದು ಇನ್ನೊಂದು ಕಡೆ. ಈ ಎರಡು ತುದಿಗಳ ನಡುವಣ ಶೋಧವೇ ಈ ಕಾದಂಬರಿಯ ಗುರಿ ಎಂದು ತಿಳಿದಿರುವೆ.

ಅನುಭವ ಕಥನದ ನುಡಿಗಟ್ಟಿಗೂ ಅನುಭವ ಮಂಥನದ ನುಡಿಗಟ್ಟಿಗೂ ಇಲ್ಲಿ ಅಪಾರ ವ್ಯತ್ಯಾಸವಿದೆ. ಅನುಭವ ಕಥನದಲ್ಲಿ ಲೋಕದ ಬಿಂಬವಾಗಲು ನುಡಿಯು ಹವಣಿಸುತ್ತದೆ. ಆದರೆ ಅನುಭವ ಮಂಥನದಲ್ಲಿ ನುಡಿಯು ಮೈದಳೆಯುವ ಮೂಲಕವೇ ಅನುಭವವು ಆಕಾರ ಪಡೆಯುತ್ತದೆ. ಇದೇ ಕಾರಣದಿಂದ ಈ ಎರಡನೆಯ ನೆಲೆಯ ನಿರೂಪಣೆಯು ತೀವ್ರಗೊಂಡಾಗ ಕವಿತೆಗಳಾಗಿ ಮಾರ್ಪಡುವುದನ್ನು ಕಾಣುತ್ತೇವೆ.

ಅನುಭವ ಶೋಧದ ಹೊಸ ಮಾದರಿಯನ್ನು ಈ ಕಾದಂಬರಿಯಲ್ಲಿ ಭಾಷಿಕವಾಗಿ ಶೋಧಿಸಿರುವ ಕಾವ್ಯಾ ಕಡಮೆಯವರನ್ನು ಅಭಿನಂದಿಸಲೇಬೇಕು.

ಕೆ. ವಿ. ನಾರಾಯಣ

Additional Information

Description

Shipping Policy
Shipping Policy

Our shipping policy is designed to ensure fast and reliable delivery services for all our customers. We strive to provide efficient shipping solutions that meet your needs and guarantee timely delivery of your orders. Rest assured that we have established clear shipping terms and conditions to make your shopping experience seamless and hassle-free.

Delivery Terms

Our delivery terms are simple and transparent, outlining everything you need to know about our shipping process. We offer various delivery options to cater to your preferences and requirements. From standard shipping to expedited delivery, we have you covered. We are committed to delivering your orders promptly and with the utmost care.

Shipping Information

For detailed shipping information, please refer to our shipping page, where you can find all the necessary details about our delivery services. This includes shipping rates, estimated delivery times, and any other pertinent information. We aim to provide you with up-to-date shipping information to help you track your orders and ensure a smooth delivery process.

You may also like