Your cart is empty now.
ತುಂಬಾಡಿ ರಾಮಯ್ಯನವರ ಮಣೆಗಾರ ಪುಸ್ತಕವು ಹಲವು ರೀತಿಗಳಲ್ಲಿ ಈವೊತ್ತಿನ ಕನ್ನಡ ಬರಹಕ್ಕೆ ವಿಶೇಷ ಕೊಡುಗೆಯಾಗಿದೆ. ನಮ್ಮ ಅಕ್ಷರ ಮತ್ತು ವೈಚಾರಿಕ ಲೋಕಗಳಿಗೆ ಹೊರತಾಗಿದ್ದ ಅನುಭವ ಮತ್ತು ಸಾಂಸ್ಕೃತಿಕ ದ್ರವ್ಯಗಳನ್ನು ಆತ್ಮಚರಿತ್ರೆಯ ಪ್ರಕಾರಕ್ಕೆ ತಂದುಕೊಟ್ಟಿದೆ. ರಾಮಯ್ಯನವರು ತಮ್ಮ ಬದುಕಿನ ಅನುಭವಗಳನ್ನು ಅದರಲ್ಲೂ ಮುಖ್ಯವಾಗಿ ಎಳಮೆಯ ದಟ್ಟ ಅನುಭವನಗಳನ್ನು ತೆರೆದ ಮನದಿಂದ ಹಿಡಿದಿಟ್ಟಿದ್ದಾರೆ. ಶೋಷಣೆಯ ವಾತಾವರಣದಲ್ಲಿ ವೈಚಾರಿಕತೆಯ ಕಣ್ಣುಗಳಿಗೆ ಅಷ್ಟು ಸುಲಭವಾಗಿ ಕಾಣದ ಹೃದ್ಯ, ಮಾನವೀಯ ಸ೦ಬ೦ಧಗಳನ್ನು, ತರ್ಕವನ್ನು ಮೀರಿದ ಧಾರ್ಮಿಕ ನಿಗೂಢಗಳನ್ನು ಒಳಗೊಂಡಿರುವುದು ಅವರ ಬರಹಕ್ಕೆ ವಿಶೇಷವಾದ ಹರಹನ್ನು ತಂದುಕೊಟ್ಟಿದೆ.
ಕರ್ನಾಟಕದ ದಲಿತ ಸಂಘಟನೆಗಳ ಆರಂಭದ ಘಟ್ಟಗಳನ್ನು ವೈಯಕ್ತಿಕ ದರ್ದಿನ ಮೂಲಕ ಹಿಡಿದಿಟ್ಟಿದ್ದಾರೆ. ಓದುಗರು, ಬರಹಗಾರರು, ಬುದ್ಧಿಜೀವಿಗಳು, ಸಮಾಜ ಚಿಂತಕರು, ರಾಜಕೀಯದವರು, ಧರ್ಮಿಷ್ಠರು, ಪಾಪಿಗಳು ಎಲ್ಲರೂ ಗಮನಿಸಬೇಕಾದ ಹಲ ಮಗ್ಗುಲಿನ ಪುಸ್ತಕವಿದು.
-ಡಾ. ಎಚ್ ಎಸ್ ಶಿವಪ್ರಕಾಶ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.