Free Shipping Charge on Orders above ₹300

Shop Now

Makkaligagi Ramayana Sale -10%
Rs. 198.00Rs. 220.00
Vendor: BEETLE BOOK SHOP
Type: PRINTED BOOKS
Availability: 10 left in stock

ಶ್ರೀಯುತ ವಂದಗದ್ದೆ ಗಣೇಶ್ ರವರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿದ್ದರೂ ಮುಖ್ಯವಾಗಿ ಸಣ್ಣ ಕಥೆಗಳು ಅವರ ಮುಖ್ಯವಾದ ಅಭಿವ್ಯಕ್ತಿ ಮಾಧ್ಯಮ. ತಾವು ರಚಿಸಿದ ಬಹಳಷ್ಟು ಕಥೆಗಳನ್ನು ಈಗಾಗಲೇ ಅನೇಕ ಕಥಾಸಂಕಲನಗಳ ಮೂಲಕ ಹೊರತಂದು ಪ್ರಕಟಿಸಿದ್ದಾರೆ.

ಅನೇಕ ವರ್ಷಗಳ ಕಾಲ ಕಾಲೇಜಿನಲ್ಲಿ ಪಾಠಪ್ರವಚನಗಳಲ್ಲಿ ತೊಡಗಿಕೊಂಡಿದ್ದರಿಂದ ಯುವಮನಸ್ಸುಗಳ ನಾಡಿಮಿಡಿತವನ್ನು ಚೆನ್ನಾಗಿ ಅರಿತಿರುವ ಶ್ರೀಯುತರು ಓದುವ ಮಕ್ಕಳಿಗೆ ಇಷ್ಟವಾಗುವಂತಹ ಕಥೆಗಳ, ಅದರಲ್ಲೂ ಪುರಾಣ ಇತಿಹಾಸಗಳ ಮೂಲಕ ತಮ್ಮ ವಿಚಾರಲಹರಿಯನ್ನು ಹರಿಯಬಿಟ್ಟಿದ್ದಾರೆ. ಶ್ರೀಯುತ ಗಣೇಶ್‌ರವರು ಮೊದಲಿನಿಂದಲೂ ಸಾಹಿತ್ಯಾಸಕ್ತರಾಗಿದ್ದರೂ, ತಮ್ಮ ನಿವೃತ್ತಿಯ ನಂತರವಷ್ಟೇ ಬರೆಯಲು ತೊಡಗಿದವರು. ಆದರೂ ಅವರು ಸುಮಾರು 90ಕ್ಕೂ ಹೆಚ್ಚು ಪುಸ್ತಕಗಳನ್ನು ಹೊರತಂದಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಅದೇ ರೀತಿ ವೈಯಕ್ತಿಕವಾಗಿ ಶ್ರೀಯುತರ ಸ್ನೇಹಮಯೀ ನಡವಳಿಕೆ ಎಲ್ಲರಿಗೂ ಆದರ್ಶಮಯವಾದುದು. ಶ್ರೀರಾಮನಂತೆಯೇ ಸ್ಥಿತಪೂರ್ವಾಭಿಭಾಷಿತ್ವ ಅವರ ಹೆಚ್ಚುಗಾರಿಕೆ. ಎಲ್ಲ ಸಂದರ್ಭದಲ್ಲಿಯೂ ಪ್ರಸನ್ನಮುಖಮುದ್ರೆ ಅವರ ಸ್ವಭಾವ. ಹಮ್ಮು ಬಿಮ್ಮುಗಳಿಲ್ಲದ, ನಿಷ್ಕಲ್ಮಶವಾದ ಪ್ರೀತಿಯ ಮಾತು ಅವರಿಗೆ ಸಹಜಾಭಿವ್ಯಕ್ತಿ. ಆದ್ದರಿಂದಲೇ ಅವರ ಸ್ನೇಹವಲಯ ವಿಸ್ತಾರವಾದುದು.

ಪ್ರಸ್ತುತ "ಮಕ್ಕಳಿಗಾಗಿ ರಾಮಾಯಣ" ಪುಸ್ತಕವು ವಾಲ್ಮೀಕಿ ಮಹರ್ಷಿಯ ಮೂಲರಾಮಾಯಣದ ಅಷ್ಟೂ ತಿರುಳನ್ನು ಎಳೆಯರಿಗಾಗಿ ಸರಳ ಕನ್ನಡದಲ್ಲಿ ಅಚ್ಚುಕಟ್ಟಾಗಿ ನಿರೂಪಿಸಿದ್ದು, ಮುಂದಿನ ಯುವ ಪೀಳಿಗೆಗೆ ನಮ್ಮ ಸನಾತನ ಧರ್ಮ, ಆಚಾರ-ವಿಚಾರಗಳ ಪರಿಚಯಿಸಿ, ಶ್ರೀರಾಮನ ಆದರ್ಶ ಗುಣ ವ್ಯಕ್ತಿತ್ವವನ್ನು ಮೈಗೂಸುತ್ತದೆ.

- ಬಿ.ಜಿ.ಮಂಜಪ್ಪ, ಸಾಗರ

Guaranteed safe checkout

Makkaligagi Ramayana
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading