Your cart is empty now.
ಇತಿಹಾಸವನ್ನು ಯಥಾವತ್ತಾಗಿ ದಾಖಲಿಸುವುದು ಪ್ರಜ್ಞಾವಂತ ನಾಗರಿಕನ ಲಕ್ಷಣ. ಸಮಾಜೋಧಾರ್ಮಿಕ ಚಳುವಳಿಯೊಂದರ ರಾಜಕೀಯ ಮಾನ್ಯತೆಗಾಗಿ ಶತಶತಮಾನಗಳಿಂದ ನಡೆದ ಚಳುವಳಿಯ ಮುಂದುವರಿದ ಭಾಗವಾಗಿ ೨೦೧೭-೧೮ರ ಲಿಂಗಾಯತ ಚಳುವಳಿ ವಿಪ್ಲವವಾಗಿ ಮಾರ್ಪಟ್ಟು, ಮನುಕುಲದಲ್ಲಿ ವೈಚಾರಿಕತೆಯನ್ನು ಬಡಿದೆಬ್ಬಿಸಿ, ಯಶಸ್ಸು ಕಾಣುತ್ತಿರುವ ಹೋರಾಟದ ಏಳುಬೀಳುಗಳ ವಿವಿಧ ಮಜಲುಗಳನ್ನು ಓದುಗನ ಕಣ್ಣಿಗೆ ಕಟ್ಟಿದಂತೆ ಅಕ್ಷರಗಳ ಚಿತ್ರ ಚಿತ್ರಿಸುವ ಮಾಂತ್ರಿಕತೆಯ ಕಲೆ ಜಿ. ಬಿ. ಪಾಟೀಲರಿಗೆ ಸಿದ್ದಿಸಿದೆ. ಮುಂಬರುವ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ಅಲ್ಪಸಂಖ್ಯಾತ ಧರ್ಮ ಮಾನ್ಯತೆ ಪಡೆಯುವ ಹೊಸ್ತಿಲಲ್ಲಿರುವ ಈ ಜನಾಂದೋಲನದ ಇತಿಹಾಸ ದಾಖಲಿಸುವ ಈ ಕೃತಿಗೆ ಅಭಿನಂದನೆ ಸಲ್ಲಿಸುವುದು ಜಾಗತಿಕ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷನಾದ ನನ್ನ ಕರ್ತವ್ಯವೆಂದು ಭಾವಿಸಿದ್ದೇನೆ. ಕರ್ನಾಟಕ ಸರ್ಕಾರವು ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಧರ್ಮದ ಮಾನ್ಯತೆ ನೀಡಿ, ಅದನ್ನು ಕೇಂದ್ರ ಸರ್ಕಾರದ ಒಪ್ಪಿಗೆಗಾಗಿ ಕೇಂದ್ರಕ್ಕೆ ರವಾನಿಸಿದೆ. ಸುಮಾರು ಆರು ವರ್ಷಗಳ ನಂತರ 'ಹಿಸ್ಟಾರಿಕಲ್ ಡಾಕ್ಯುಮೆಂಟರಿ' ರೂಪದಲ್ಲಿ ಈ ಗ್ರಂಥವನ್ನು ಪ್ರಕಟಿಸುತ್ತಿರುವುದು ಜಿ. ಬಿ. ಪಾಟೀಲರ ಸಾಧನೆಯ ಸಿಂಹಾವಲೋಕನದ ಬಗೆ ಹಾಗೂ ಮುಂದಿನ ಸಾಧನೆಯ ದಿಕ್ಕೂಚಿ. ಲೇಖನದ ಈ ಕೈಂಕರ್ಯ ಲಿಂಗಾಯತರಿಗೆ ಮಾತ್ರವಲ್ಲದೆ ಸರ್ವರಿಗೂ ಮಾರ್ಗದರ್ಶಿ ದೀವಿಗೆ. ಅವರನ್ನು ಬಲ್ಲ ನನಗೆ ಈ ಕಾರ್ಯ ಸಾಧನೆ ಸಂತೋಷವನ್ನುಂಟು ಮಾಡಿದೆ ಎನ್ನುತ್ತ ಶುಭಹಾರೈಸುವೆ.
- ಬಸವರಾಜ ಹೊರಟ್ಟಿ ( ಸಭಾಪತಿ, ಕರ್ನಾಟಕ ವಿಧಾನ ಪರಿಷತ್ತು )
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.