Your cart is empty now.
ಟಾಲ್ಸ್ಟಾಯ್ ವಿಚಾರಧಾರೆಗಳಿಂದ ಪ್ರಭಾವಿತರಾದ ಗಾಂಧೀಜಿ ಅವರಾಗಲೀ, ಕನ್ನಡದ ಹಿರಿಯ ಲೇಖಕರುಗಳಾಗಲೀ ಓದಿದ್ದು ಪ್ರಾಯಶಃ ಟಾಲ್ಸ್ಟಾಯ್ ಅವರ ಅನುವಾದಿತ ಕೃತಿಗಳನ್ನು ಕರ್ನಾಟಕದ ಬಹುಪಾಲು ಓದುಗರು ಕೂಡ ಕನ್ನಡದಲ್ಲಿ ಅನುವಾದವಾಗಿರುವ ಟಾಲ್ಸ್ಟಾಯ್ ಅವರನ್ನೇ ಓದಿರುತ್ತಾರೆ. ಅನುವಾದದಲ್ಲಿಯೂ ಲೇಖಕನೊಬ್ಬನ ಕೃತಿಗಳು ಅನ್ಯ ಕಾಲದೇಶಗಳ ಸಮಾಜಗಳ ಮೇಲೆ, ಓದುಗರ ಮೇಲೆ ತೀವ್ರ ಪರಿಣಾಮ ಬೀರಬಲ್ಲವು ಎನ್ನುವುದು ಸೋಜಿಗದ ಸಂಗತಿಯೇ ಸರಿ.
ಕನ್ನಡ ಅನುವಾದದಲ್ಲಿ ಲಭ್ಯವಿರುವ ಟಾಲ್ಸ್ಟಾಯ್ ಅವರ ಕೃತಿಗಳ ಆಧಾರದ ಮೇಲೆ ಪ್ರದೀಪ ಆರ್ ಎನ್ ಅವರು "ಟಾಲ್ಸ್ಟಾಯ್ ಸಾಹಿತ್ಯದ ನೆಲೆಗಳು" ಎಂಬ ಈ ಅಧ್ಯಯನವನ್ನು ನಡೆಸಿದ್ದಾರೆ. ಇದೊಂದು ಅನುವಾದ ಸಾಹಿತ್ಯದ ಅಧ್ಯಯನವಲ್ಲ; ಬದಲಿಗೆ, ಅನುವಾದಗಳ ಆಧಾರದ ಮೇಲೆ ನಡೆಸಿದ ಸಾಹಿತಿ ಮತ್ತು ಆತನ ಸಾಹಿತ್ಯದ ಒಟ್ಟಾರೆ ಅಧ್ಯಯನ ಆಗಿರುವುದು ನನಗೆ ವಿಶೇಷವಾಗಿ ಕಂಡಿದೆ. ಯಾಕೆಂದರೆ, ತನ್ಮೂಲಕ ಧ್ವನಿತವಾಗುತ್ತಿರುವ ಅಂಶವೆಂದರೆ, ಕನ್ನಡದಲ್ಲಿ ಲಭ್ಯವಿರುವ ಟಾಲ್ಸ್ಟಾಯ್ ಕೃತಿಗಳೇ ಅಧ್ಯಯನದ ಮೂಲವಾಗಬಹುದು ಎನ್ನುವುದು. ಅಥವಾ, ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ, ಅನುವಾದಿತ ಕೃತಿಗಳನ್ನು ಮೂಲಕೃತಿಗಳಾಗಿ ನೋಡುವುದು ಸಾಧ್ಯ ಎಂಬ ಅಂಶ. ಈಗಾಗಲೇ ಅನುವಾದ ಅಧ್ಯಯನಶಾಸ್ತ್ರದ ಹಲವು ಪ್ರಮುಖಭಾರತೀಯ ಮತ್ತು ಪಾಶ್ಚಾತ್ಯ ವಿದ್ವಾಂಸರು ಅನುವಾದಿತ ಕೃತಿಯನ್ನು ಮೂಲಕೃತಿಯಾಗಿ ನೋಡಬೇಕಿರುವ ಅಗತ್ಯದ ಬಗೆಗೆ ಚರ್ಚಿಸಿರುವ ಹಿನ್ನೆಲೆಯಲ್ಲಿ ನನಗಿದು ಮಹತ್ವದ ಅಂಶವಾಗಿ ಗೋಚರಿಸಿತು.
# ಪ್ರೊ. ಕಮಲಾಕರ ಕಡವೆ
ಅಹಮದ್ನಗರ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.