Your cart is empty now.
ಕರ್ನಾಟಕದ ರಾಜಮನೆತನಗಳ ಬಗ್ಗೆ ವಿದೇಶಿ ಯಾತ್ರಿಕರ ಉಲ್ಲೇಖಗಳು
ಟಾಲೆಮಿ : 2ನೇ ಶತಮಾನದಲ್ಲಿ ಟಾಲೆಮಿಯು ಬರೆದಿರುವ ಜಿಯೋಗ್ರಫಿ ಪುಸ್ತಕದಲ್ಲಿ ಕರ್ನಾಟಕದ ಬನವಾಸಿ, ಬಾದಾಮಿ, ಕಲಕೇರಿ, ಇಂಡಿ ಮುಂತಾದ ಸ್ಥಳಗಳನ್ನು ಉಲ್ಲೇಖಿಸಲಾಗಿದೆ.
ಹೂಯೆನ್ ತ್ಸಾಂಗ್ : ಬಾದಾಮಿ ಚಾಲುಕ್ಯರ ಅರಸನಾದ ಇಮ್ಮಡಿ ಪುಲಿಕೇಶಿ ಕಾಲದಲ್ಲಿ ಕರ್ನಾಟಕ ಸೇರಿದಂತೆ ಭಾರತದ ಅನೇಕ ಭಾಗಗಳಿಗೆ ಭೇಟಿ ನೀಡಿದ್ದ ಪ್ರಮುಖ ಚೀನಿಯಾತ್ರಿಕನಾಗಿದ್ದಾನೆ. ಹರ್ಷವರ್ಧನನೊಂದಿಗಿನ ಪುಲಿಕೇಶಿಯ ಸಂಬಂಧದ ಕುರಿತು ಹಾಗೂ ಕನ್ನಡಿಗರ ಸಾಮರ್ಥ್ಯ ಮತ್ತು ಗುಣಗಾನದ ಬಗೆಗಿನ ಇವನ ಉಲ್ಲೇಖಗಳು ಪ್ರಮುಖ ಆಧಾರಗಳಾಗಿವೆ.
ತಬರಿ : ಅರಬ್ ಬರಹಗಾರ ತಬರಿಯು ಪರ್ಷಿಯನ್ ರಾಯಭಾರಿಗಳು ಪುಲಿಕೇಶಿಯ ಆಸ್ಥಾನಕ್ಕೆ ಭೇಟಿ ನೀಡಿದ್ದರ ಕುರಿತು ಹಾಗೂ ಚಾಲುಕ್ಯರು ಮತ್ತು ಪರ್ಷಿಯನ್ನರ ನಡುವಿನ ರಾಜತಾಂತ್ರಿಕ ವಿನಿಮಯದ ಬಗ್ಗೆ ಉಲ್ಲೇಖ ನೀಡಿದ್ದಾನೆ.
ಸುಲೈಮಾನ್ : ಅರಬ್ ಬರಹಗಾರ ಸುಲೈಮಾನ್ ಕ್ರಿ
ಕ್ರಿ ಶ 851 ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದನು. ರಾಷ್ಟ್ರಕೂಟ ದೊರೆಗಳನ್ನು ಕುರಿತು, ಆಗಿನ ಸಮಕಾಲೀನ ಪ್ರಪಂಚದ ನಾಲ್ಕು ಶ್ರೇಷ್ಠ ಸಾಮ್ರಾಜ್ಯಗಳಲ್ಲಿ ರಾಷ್ಟ್ರಕೂಟರ ಸಾಮ್ರಾಜ್ಯವೂ ಒಂದು (ಇತರ ಮೂರು ಆರೇಬಿಯಾ, ಚೀನಾ ಮತ್ತು ರೋಮ್) ಎಂದು ಹೇಳಿದ್ದಾನೆ.
ಅಲ್-ಮಸೂದಿ : 10 ನೇ ಶತಮಾನದಲ್ಲಿ ಭಾರತಕ್ಕೆ ಬಂದ ಇನ್ನೊಬ್ಬ ಅರಬ್ ಪ್ರವಾಸಿ ಆಲ್-ಮಸೂದಿ ರಾಷ್ಟ್ರಕೂಟರನ್ನು ಮತ್ತು ಅವರ ರಾಜಧಾನಿ ಮಂಕಿರ್ ಅಂದರೆ ಮಳಖೇಡ (ಮಾನ್ಯಖೇಟಾ) ಕುರಿತು ವಿವರಗಳನ್ನು ನೀಡಿದ್ದಾನೆ.
ಇಬ್ಬ ಬತೂತ : ಮಹಮ್ಮದ್ ಬಿನ್-ತುಘಲಕ್‌ನ ಕಾಲದಲ್ಲಿ ಇವನು ಭಾರತದಲ್ಲಿ ಪ್ರವಾಸ ಕೈಗೊಂಡಿದ್ದನು. ದೇವಗಿರಿ ಮತ್ತು ಹೊಯ್ಸಳ ಸಾಮ್ರಾಜ್ಯಗಳಿಗೆ ಅಲ್ಲಾವುದ್ದೀನ್‌ನ ದಂಡಯಾತ್ರೆಯಂತಹ ದಕ್ಷಿಣ ಭಾರತದ ಇತಿಹಾಸದ ಘಟನೆಗಳನ್ನು ಕುಮ್ಮಟದ ಕಂಪಿಲನ ವೀರತ್ವವನ್ನು ಮತ್ತು ಹೊಯ್ಸಳ ದೊರೆ ಮೂರನೇ ಬಲ್ಲಾಳನ ಅಂತ್ಯವನ್ನು ಕುರಿತು ಉಲ್ಲೇಖಿಸಿದ್ದಾನೆ.
ವಿಜಯನಗರಕ್ಕೆ ಭೇಟಿ ನೀಡಿದ್ದ ವಿದೇಶಿಗರಾದ ನಿಕೋಲೊ ಕೊಂಟಿ, ಅಬ್ದುಲ್ ರಜಾಕ್, ಡುರೆಟ್ ಬಾರ್ಬೋಸಾ, ಡೊಮಿಂಗೋ ಪಯಾಸ್, ಫರ್ನಾವೊ ನೂನಿಜ್‌ರ ಉಲ್ಲೇಖಗಳು ಮತ್ತು ಬರಹಗಳು ವಿಜಯನಗರ ಸಾಮ್ರಾಜ್ಯ ಮತ್ತು ರಾಜರ ಬಗ್ಗೆ ಐತಿಹಾಸಿಕ ಆಧಾರಗಳನ್ನು ಒದಗಿಸಿವೆ.
ನಿಕಿಟಿನ್ : ನಿಕಿಟಿನ್ ಎಂಬ ರಷ್ಯಾದ ಪ್ರವಾಸಿಗನು(1470-74) ಬಹಮನ್ ಷಾಹಿ ರಾಜ್ಯಕ್ಕೆ ಭೇಟಿ ನೀಡಿದ್ದನು. ಬೀವರ್ ಮತ್ತು ಬಹಮನಿ ಆಡಳಿತಗಾರ ಮಹ್ಮದ್ ಗವಾನ್ ಬಗ್ಗೆ ಉತ್ತಮ ವಿವರಣೆಯನ್ನು ನೀಡಿದ್ದಾನೆ.
ಸೀಜರ್ ಫೆಡ್ರಸಿ : ಇಟಲಿಯ ಪ್ರವಾಸಿಗನಾದ ಸೀಜರ್ ಫೆಡ್ರಸಿ(ಫೆಡರಿಕ್) 1567ರಲ್ಲಿ ತಾನು ಕಂಡಂತಹ ಪಾಳುಬಿದ್ದ ವಿಜಯನಗರ ಸಾಮ್ರಾಜ್ಯದ ನಗರದ ವಿವರಣೆ ಮತ್ತು ಅದಕ್ಕೆ ಕಾರಣಗಳನ್ನು ಸಹ ನೀಡಿದ್ದಾನೆ.
ರಾಲ್ಫ್ ಫಿಚ್ : ಇಂಗ್ಲೆಂಡಿನ ರಾಲ್ಫ್ ಫಿಚ್ ಎಂಬುವನು ಬೆಳಗಾವಿ ಮತ್ತು ವಿಜಯಪುರಕ್ಕೆ ಭೇಟಿ ನೀಡಿದ್ದನು (1583). ಇವನು ಈ ಎರಡೂ ಸ್ಥಳಗಳಲ್ಲಿನ ವ್ಯಾಪಾರ ಮತ್ತು ವಿಜಯಪುರ ನ್ಯಾಯಾಲಯದ ಬಗ್ಗೆ ಉಲ್ಲೇಖ ನೀಡಿದ್ದಾನೆ.
ಲಿನ್ ಶೋಟನ್: 1583 ಮತ್ತು 1588ರ ನಡುವೆ ಭಾರತಕ್ಕೆ ಭೇಟಿ ನೀಡಿದ ಡಚ್ ದೇಶದ ಲಿನ್‌ಶೋಟನ್ ಪಶ್ಚಿಮ ಕರಾವಳಿಯ ವ್ಯಾಪಾರದ ಬಗ್ಗೆ ಹಾಗೂ ಕರ್ನಾಟಕ ಮತ್ತು ಗೋವಾದಲ್ಲಿನ ಸಾಮಾಜಿಕ ಪರಿಸ್ಥಿತಿಗಳ ಬಗ್ಗೆ ವಿವರ ನೀಡಿದ್ದಾನೆ.
ಹೆನ್ರಿಕ್ ವಾನ್ ಪೋಸರ್: ಜರ್ಮನಿಯ ಹೆನ್ರಿಕ್ ವಾನ್ ಪೋಸರ್ 1622 ರಲ್ಲಿ ಎರಡನೇ ಇಬ್ರಾಹಿಂ ಆಳ್ವಿಕೆಯ ದಿನಗಳಲ್ಲಿ ವಿಜಯಪುರಕ್ಕೆ ಭೇಟಿ ನೀಡಿದ್ದನು. ಇವನು ಎರಡನೇ ಇಬ್ರಾಹಿಂ ಆಡಳಿತದ ಬಗ್ಗೆ ವಿವರಗಳನ್ನು ನೀಡಿದ್ದಾನೆ.
ಮಾಂಡೆỆ: 1639ರಲ್ಲಿ ಮೊಹಮ್ಮದ್ ದ್ ಆದಿಲ್ ಷಾನ ಕಾಲದಲ್ಲಿ ವಿಜಯಪುರಕ್ಕೆ ಬಂದಿದ್ದ ಮಾಂಡಪ್ಲೊ ಜರ್ಮನ್ ಸಂದರ್ಶಕನಾಗಿದ್ದು, ಇವನು ರಾಯಭಾಗ ಮತ್ತು ವಿಜಯಪುರದಂತಹ ಅನೇಕ ಸ್ಥಳಗಳಲ್ಲಿನ ವ್ಯಾಪಾರದ ಬಗ್ಗೆ ವಿವರಗಳನ್ನು ನೀಡಿದ್ದಾನೆ.
ಪಿಯೆಟ್ರೊ ಡೆಲ್ಲಾ ವಲ್ಲೆ: 1623ರಲ್ಲಿ ಪಿಯೆಟ್ರೊ ಡೆಲ್ಲಾ ವಲ್ಲೆ ಕೆಳದಿ ಸಾಮ್ರಾಜ್ಯದಲ್ಲಿ ಪ್ರವಾಸ ಮಾಡಿ ವೆಂಕಟಪ್ಪ ನಾಯಕನ ಆಸ್ಥಾನಕ್ಕೆ ಭೇಟಿ ನೀಡಿದ್ದನು. ಆ ಕಾಲದ ಜನಜೀವನ ಮತ್ತು ಸಮಾಜದ ಬಗ್ಗೆ ಅವಲೋಕನ ಮಾಡಿರುವ ಇವನು ವಿಜಯನಗರ ಸಾಮ್ರಾಜ್ಯ ನಂತರದ ಕರ್ನಾಟಕ ಇತಿಹಾಸದ ಅಧ್ಯಯನಕ್ಕೆ ಆಸಕ್ತಿದಾಯಕ ಸಂಗತಿಗಳನ್ನು ಒದಗಿಸಿದ್ದಾನೆ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.