Your cart is empty now.
ಅಶ್ವಮೇಧಕ್ಕೆ ಕುದುರೆ ಬಿಟ್ಟ ಮೇಲೆ ಅದನ್ನು ಹಿಡಿದು ಕಟ್ಟುವ ಕಾಲ ಬರುವಗಂಟ ಯಾರ ಸಿಟ್ಟು, ಬೇಸರಕ್ಕೆ ಕಿಮ್ಮತ್ತೆಲ್ಲಿಯದು? ಅನ್ನುವುದನ್ನೂ ಈ ಬರವಣಿಗೆ ಕಲಿಸಿದೆ.
ಹಲವು ವರ್ಷಗಳ ಕಾಲ ಇಲ್ಲಿನ ಅನುಭವ ಲೋಕವು ನನ್ನೊಳಗೆ ಆಡುತ್ತ, ಬೆಳೆಯುತ್ತ, ನನ್ನನ್ನು ಬೆಳೆಸಿದೆ. ಇಲ್ಲಿನ ಬಹುಪಾಲು ವೃತ್ತಾಂತಗಳು ನಾನು ಕೇಳಿದ್ದು, ಮತ್ತೊಂದಿಷ್ಟು ನೋಡಿದ್ದು, ಇನ್ನೂ ಇಷ್ಟು ಅನುಭವಿಸಿದ್ದು, ಸ್ವಲ್ಪ ಭಾಗ ಕಲ್ಪಿಸಿದ್ದು- ಭಾಷೆ ಇವೆಲ್ಲವನ್ನೂ ಒಟ್ಟಾಗಿಸಿ ಹೆಣೆದಿದೆ. ಒಂದು ಮರ, ಹಕ್ಕಿ, ತೋಡು, ಕೆರೆ, ಮಳೆ, ಮನೆ.. ಪ್ರತಿಯೊಂದೂ ನಿಗೂಢ. ಗಮನಿಸಿದರಷ್ಟೇ ತೆರೆದುಕೊಳ್ಳುವ ವಿಸ್ಮಯಕ್ಕೆ ಈ ಬದುಕು ಸಾಕ್ಷಿಯಾಯಿತು ಎನ್ನುವುದಷ್ಟೇ ನನ್ನ ಪಾಲಿನ ಸುಖ. ಪ್ರತಿಕ್ಷಣ ವಿಕಾಸವಾಗುತ್ತಲೇ ಹೋಗುವ ಸೃಷ್ಟಿ ಮತ್ತು ಮನುಷ್ಯ ಬದುಕು ಆಗೊಮ್ಮೆ ಈಗೊಮ್ಮೆ ಕಣ್ಸನ್ನೆಯಿಂದ ಏನನ್ನೋ ಹೊಳೆಸಿ ಮಾಯವಾಗುತ್ತ ನನ್ನನ್ನು ಪೊರೆದಿದೆ. ಇಲ್ಲಿ ಎಲ್ಲವಕ್ಕೂ ಅವುಗಳದ್ದೇ ಹುಡುಕಾಟ ಇದೆ. ಇವುಗಳ ಒಳಗೆ ಮನುಷ್ಯನೂ ಇದ್ದಾನೆ, ಅಷ್ಟೆ. ತಾನೇ ಮುಖ್ಯವೆಂಬಂತೆ ಗದ್ದಲವೆಬ್ಬಿಸದೆ ಮೌನ ಅಸ್ತಿತ್ವದಲ್ಲಿ ಕರಗಿರುವ ಸೃಷ್ಟಿಯ ಒಂದೊಂದು ಸಂಗತಿಯೂ ಆಧ್ಯಾತ್ಮಿಯೆ ಅನ್ನಿಸಿದೆ. ಮತ್ತು, ನಮ್ಮೊಳಗಿನ ಮೌನಕ್ಕೆ ಹಿಂತಿರುಗಿ ಹೋಗುವುದೇ ಎಲ್ಲ ಸೃಜನಶೀಲತೆಯ ತಿಳಿವು ಎನ್ನುವ ನನ್ನ ನಂಬಿಕೆಯನ್ನು ಈ ಬರಹ ಗಾಢಗೊಳಿಸಿದೆ.
-ಜ.ನಾ. ತೇಜಶ್ರೀ
(ಲೇಖಕರ ಮಾತುಗಳಿಂದ)
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.