Your cart is empty now.
ತುಂಬಾಡಿ ರಾಮಯ್ಯ ಅಂದರೆ ಮಣೆಗಾರ ನೆನಪಿಗೆ ಬರುತ್ತದೆ. ಅದು ಅವರ ಆತ್ಮಕಥನ; ದಲಿತ ಲೋಕದ ಮಗ್ಗುಲುಗಳನ್ನು ತೋರಿಸಿದ ವಿಶಿಷ್ಟ ಬರಹ. ಮುತ್ತಿನ ಜೋಳ, ಓದೋರಂಗ ಕೃತಿಗಳ ಮೂಲಕ ಇನ್ನಷ್ಟು ದಲಿತ ಲೋಕದ ಒಳಕೋಣೆಗಳನ್ನು ತೆರೆದು ತೋರಿಸಿದರು. ಮೊಟ್ಟ ಮೊದಲ ಕೃತಿಯಿ೦ದಲೂ ಅವರು ಕಾಪಾಡಿಕೊಂಡು ಬಂದಿರುವ ಸಂಯಮ ಮತ್ತು ವಿನೀತ ನಿರೂಪಣೆಗೆ ತಮ್ಮ ನೆಲದ ನುಡಿಯನ್ನು ದುಡಿಸಿಕೊಂಡಿದ್ದಾರೆ. ಈ ಗುಣಗಳು ಅವರ ವ್ಯಕ್ತಿತ್ವದಲ್ಲಿಯೇ ಅಂತರ್ಗತವಾಗಿರುವುದನ್ನು ಅವರನ್ನು ಬಲ್ಲ ಎಲ್ಲರ ಅನುಭವಕ್ಕೂ ಬಾರದಿರದು.
ಪ್ರಸ್ತುತ ಕೃತಿಯಲ್ಲೂ ತಮ್ಮ ವಿಶಿಷ್ಟ ಲಕ್ಷಣಗಳಾವನ್ನೂ ಬಿಡದೆ ಮತ್ತಷ್ಟು ಹೊಳಪುಗೊಳಿಸಿದ್ದಾರೆ. ಒಂದು ಪ್ರದೇಶದ ವಸಾಹತುಶಾಹಿ ದಿನಮಾನಗಳ ಮೆಲುಕಿನ ಜೊತೆ ಜೊತೆಗೇ ಭೌಗೋಳಿಕ ವಿವರ, ಹಲವು ಜನಜಾತಿಗಳ ಬದುಕು, ಜಾತಿ ವ್ಯವಸ್ಥೆ, ಆಡಳಿತ ವ್ಯವಸ್ಥೆ, ಶಿಕ್ಷಣ, ಮತಾಂತರದ ಸುಳಿವುಗಳು, ಪ್ರೇಮ ಕಾಮಗಳು ಮತ್ತು ನಮನಮೂನಿ ಮನುಷ್ಯ ಸಂಬಂಧಗಳು ಮುಂತಾದ ಹಲವು ಆಯಾಮಗಳನ್ನು ಶೋಧಿಸಿರುವ ತುಂಬಾಡಿಯವರ ಬರವಣಿಗೆಯಲ್ಲಿ ತಮ್ಮದೇ ಆದ ಒಂದು ಅಸ್ಮಿತೆಯನ್ನು ಶೋಧಿಸುತ್ತಾ, ಮೈಗೂಡಿಸಿಕೊಳ್ಳಲು ಈಸುತ್ತಿರು ವವರಂತೆ ಕಾಣುತ್ತಾರೆ.
-ಅಗ್ರಹಾರ ಕೃಷ್ಣಮೂರ್ತಿ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.