Your cart is empty now.
ತಮ್ಮ ಪ್ರಥಮ ಕೃತಿ “ಕಾಡಿನ ಸಂತ - ತೇಜಸ್ವಿ” (ಹಲವಾರು ತಿಂಗಳುಗಳ ಕಾಲ ಟಾಪ್ ಟೆನ್ ಪಟ್ಟಿಯಲ್ಲಿದ್ದ ಪುಸ್ತಕಕ್ಕೆ 2011ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ ಪಡೆದ ಧನಂಜಯ ಜೀವಾಳರ ಈ ವರೆಗಿನ ಬದುಕಿನ ಅನುಭವಗಳ ಅಕ್ಷರರೂಪ ಈಗ ಕಥಾ ಸಂಕಲನವಾಗಿ ನಮ್ಮ ಕೈಯ್ಯಲ್ಲಿದೆ.
ಬರಹ, ಛಾಯಾಗ್ರಹಣ, ಜೀವವೈವಿಧ್ಯ, ಚಿತ್ರರಚನೆ, ಚಾರಣ, ರಂಗಭೂಮಿ, ಕ್ರೀಡೆ, ಉಪನ್ಯಾಸ, ಸಂಘಟನೆ, ಕೃಷಿ, ಸಮುದಾಯದ ಸೇವೆ ಹೀಗೆ ಹತ್ತು ಹಲವು ಚಟುವಟಿ-ಕೆಗಳಲ್ಲಿ ನಿರಂತರವಾಗಿ ತೊಡಗಿಕೊಂಡಿರುವ ಜೀವಾಳರು ತಮ್ಮ ಬರಹಗಳ ವಸ್ತು ವಿಷಯ, ಭಾಷಾ ಪ್ರಯೋಗ ಹಾಗೂ ನಿರೂಪಣೆಯ ಮೂಲಕ ಓದುಗರಿಗೆ ನವಿರಾದ ಅನುಭೂತಿ ನೀಡುತ್ತಾರೆ.
ಸುತ್ತಲಿನ ಸಮಾಜವನ್ನು ತಮ್ಮದೇ ಆದ ವಿಬಿನ್ನ ದೃಷ್ಟಿಕೋನದಿಂದ ಗ್ರಹಿಸುವ, ಅವಲೋಕಿಸುವ ಹಾಗೂ ವಿಶ್ಲೇಷಿಸುವ ಲೇಖಕರು ಈ “ಗ್ರಾಮಾಯಣ” ಕೃತಿಯಲ್ಲಿ ನಮ್ಮೆಲ್ಲರ ಸುತ್ತಲಿನ ಬದುಕಿನ ಮತ್ತೊಂದು ಆಯಾಮವನ್ನು ಅನಾವರಣಗೊಳಿಸಿ ತಮ್ಮದೇ ಆದ ಸೂಕ್ಷ್ಮ - ಸ್ವಾರಸ್ಯಕರ ನಿರೂಪಣೆಯ ಮೂಲಕ ಓದುಗರನ್ನು ಹೌದಲ್ವೇ? ಎನ್ನುವಂತೆ ಆಲೋಚನೆಗೆ ಹಚ್ಚುತ್ತಾರೆ.
- ಪ್ರಕಾಶಕ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.