Your cart is empty now.
ಕತೆ ಕೇಳೋದು ಅಂದ್ರೆ ಯಾರಿಗೆ ತಾನೆ ಇಷ್ಟ ಇರಲ್ಲ? ಎಲ್ಲರಿಗೂ ಇಷ್ಟಾನೆ. ಕತೆ ಹೇಳೋರು ಬೇಕಲ್ಲ? ವಿಪರ್ಯಾಸ ಏನಂದ್ರೆ; ನಡುಮನೆಗೆ ಟಿ.ವಿ. ಅನ್ನುವ ಮಾಯಾಪೆಟ್ಟಿಗೆ ಬಂದ ಮೇಲೆ, ಮನೆ ಅಂಗಳದಲ್ಲಿ ಚಾಪೆ ಹಾಸಿಕೊಂಡು ಮೊಮ್ಮಕ್ಕಳಿಗೆ ಕತೆ ಹೇಳುತ್ತಿದ್ದ ಅಜ್ಜ-ಅಜ್ಜಿಯರೇ ನಾಪತ್ತೆಯಾದರು.
ಕೈಗೆ ಸ್ಟೀನ್ ಟಚ್ ಮೊಬೈಲ್ ಬಂದ ಮೇಲಂತು ಕತೆ ಹೇಳುವುದಕ್ಕಾಗಲಿ, ಕೇಳುವುದಕ್ಕಾಗಲಿ ಸಮಯಾನೆ ಸಾಲದಾಗಿದೆ. ಸೋಶಿಯಲ್ ಮೀಡಿಯಾಳ ಅಬ್ಬರದಲ್ಲಿ ನಮ್ಮ ಸೃಜನಶೀಲತೆಯನ್ನ ನಾವೇ ಕಳಕೊಳ್ತಾ ಇದೀವಿ. ಅದರಲ್ಲೂ ಕೊರೋನಾ ಕಾಲಘಟ್ಟದಲ್ಲಿ ಯಾರ ಮೇಲೆ ಯಾವ ಪರಿಣಾಮ ಬೀರಿತೊ ಗೊತ್ತಿಲ್ಲ. ಆದರೆ ವಿದ್ಯಾರ್ಥಿಗಳ ಕಲಿಕೆ ಮೇಲೆ ತುಂಬಾ ಪರಿಣಾಮ ಬೀರಿತು. ಆ ವಿದ್ಯಾರ್ಥಿ ಸಮೂಹವನ್ನ ಈಗಲೂ ಸಹ ಮೊಬೈಲ್ ನೋಡುವ ಚಟದಿಂದ ಹೊರತರಲಾಗಿಲ್ಲ. ಅವರ ಏಕಾಗ್ರತೆ ಕುಂಠಿತಗೊಂಡಿದೆ. ಕಲಿಕೆಯಲ್ಲಿ ನಿರಾಸಕ್ತಿ ಮೂಡಿದೆ. ಒಬ್ಬ ಶಿಕ್ಷಕನಾಗಿ ಇದೆಲ್ಲವನ್ನು ಹತ್ತಿರದಿಂದ ನೋಡಿದ ನಾನು, ಮಕ್ಕಳಲ್ಲಿ ಆಸಕ್ತಿ ಮೂಡಿಸಲು ಒಂದು ಪಾಠ ಮತ್ತು ಪದ್ಯ ಮುಗಿದ ಮೇಲೆ ನಿಮಗೊಂದು ಕತೆ ಹೇಳೀನಿ ಎಂದಾಗ ಮಕ್ಕಳ ಮುಖ ಚಿತ್ರವೇ ಬದಲಾಗಿ ಖುಷಿಯಿಂದ ಅರಳುತ್ತಿತ್ತು. ಪಾರ ಪದ್ಯ ಮುಗಿದ ಮೇಲೆ ನಾನು ಮರೆತರು ಮಕ್ಕಳೆ ನೆನಪಿಸುತ್ತಾರೆ. ಕತೆ ಹೇಳಬೇಕೆಂದು ಒತ್ತಾಯಿಸುತ್ತಾರೆ. ನಾನು ಕತೆ ಹೇಳಲು ಶುರು ಮಾಡಿದಾಗ, ಮಕ್ಕಳ ಮುಖದಲ್ಲೊಂದು ನಗು ಮೂಡಿರುತ್ತದೆ. ಕಣ್ಣಲ್ಲೊಂದು ಕಾಂತಿ ತುಂಬಿರುತ್ತದೆ. ಕತೆಯನ್ನ ತುಂಬಾ ಶ್ರದ್ಧೆಯಿಂದ, ಆಸಕ್ತಿಯಿಂದ ಕೇಳುತ್ತಾರೆ. ಆ ಮೂಲಕ ಅವರ ಏಕಾಗ್ರತೆಯನ್ನ ಹೆಚ್ಚಿಸುವ ಒಂದು ಸಣ್ಣ ಪ್ರಯತ್ನ ಮಾಡುತಿದ್ದೇನೆ. ಆಗ ನನ್ನ ನೆರವಿಗೆ ಬರೋದು ನಾನು ಬಾಲ್ಯದಲ್ಲಿ ಕಲಿತ ಜನಪದ ಕತೆಗಳು.
(ಪ್ರಸ್ತಾವನೆಯಿಂದ)
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.