ಪಿತೃಪ್ರಧಾನತೆಯು ಇಡೀ ಪುರುಷ ಸಮುದಾಯಕ್ಕೆ ಲಾಭದಾಯಕ ಎಂಬುದು ಸ್ಪಷ್ಟವೇ ಸರಿ. ಹೆಂಗಸರಿಗಿಂತ ಅವರು ಉನ್ನತ ದರ್ಜೆಯವರು ಎಂಬ ಆಳವಾದ ಗ್ರಹಿಕೆಯೊಂದು ಇದೆ. ಹಾಗಾಗಿ ಗಂಡಸರು ಹೆಂಗಸರನ್ನು ಆಳಬೇಕು ಎನ್ನುವ ತೀರ್ಮಾನವೂ ಅಗಿಬಿಟ್ಟದೆ, ಎಲ್ಲವೂ ಗಂಡಸಿಗೆ ಲಾಭದಾಯಕವೇ. ಸರಿ, ಆದರೆ ಇದಕ್ಕಾಗಿ ಅವರು ಬೆಲೆಯನ್ನು ತೆರಬೇಕಾಗುತ್ತದೆ ಎಂಬುದನ್ನು ಗಮನಿಸಬೇಕು. ಪಿತೃಪ್ರಧಾನತೆಯೇನೋ ಪುರುಷರಿಗೆ ಇಷ್ಟೆಲ್ಲ ಅನುಕೂಲಗಳನ್ನು ಕಲ್ಪಿಸಿತು. ಆದರೆ ಇದಕ್ಕೆ ಬದಲಾಗಿ ಪಿತೃಪ್ರಧಾನ ವ್ಯವಸ್ಥೆಯು ಅಲ್ಲಾಡದಂತೆ ಗಟ್ಟಿಯಾಗಿ ನೆಲೆಗೊಳಿಸುವ ಜವಾಬ್ದಾರಿಯನ್ನು ಗಂಡಸರ ಮೇಲೆ ಹೊರಿಸಿತು. ಅವರು ಹೆಂಗಸರ ಮೇಲೆ ದಬ್ಬಾಳಿಕೆ ನಡೆಸಬೇಕು, ಅವರನ್ನು ಶೋಷಣೆ ಮಾಡಿ ದಮನಗೊಳಿಸಿ ಇಡಬೇಕು, ಅಗತ್ಯ ಬಿದ್ದರೆ ಹಿಂಸೆಯನ್ನೂ ಮಾಡಬೇಕು, ಹೇಗಾದರೂ ಸರಿ, ಪಿತೃಪ್ರಧಾನತೆಯ ಬೇರುಗಳನ್ನು ಅಲುಗದಂತೆ ಭದ್ರವಾಗಿ ಹಿಡಿದಿಟ್ಟು ಕಾಯಬೇಕು. ನಿಜ ಹೇಳಬೇಕೆಂದರೆ ಈ ಬಗೆಯ ಪಿತೃಪ್ರಧಾನತೆಗೆ ಬದ್ದರಾಗಿ ಉಳಿಯುವುದು ಬಹುಮಂದಿ ಗಂಡಸರಿಗೆ ತೀರಾ ಕಷ್ಟದಾಯಕವಾಗಿಯೇ ಕಾಣುತ್ತದೆ. ತಮ್ಮೊಂದಿಗೆ ಬದುಕುತ್ತಿರುವ ಹೆಣ್ಣು ಜೀವಗಳನ್ನು ದ್ವೇಷಿಸುತ್ತಾ, ಅದರಿಂದಲೇ ಭಯಗ್ರಸ್ತರೂ ಆಗುತ್ತಾ ತಲ್ಲಣಿಸಿ ಹೋಗುತ್ತಾರೆ. ಹೆಂಗಸರ ವಿರುದ್ದ ಈ ಮಟ್ಟಿಗೂ ದೌರ್ಜನ್ಯಗಳು ನಡೆಯಬೇಕೇ ಎಂದು ಗೊಂದಲಗಳಲ್ಲಿ ಸಿಲುಕುತ್ತಾರೆ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.