ಪಿ. ಸತ್ಯವತಿ ಅವರು ತೆಲುಗು ಭಾಷೆಯ ಪ್ರಸಿದ್ದ ಕತೆಗಾರ್ತಿಯರಲ್ಲಿ
ಒಬ್ಬರು. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಹಳ್ಳಿಯೊಂದರಲ್ಲಿ ಜನಿಸಿ,
ಇಂಗ್ಲಿಷ್ ಅಧ್ಯಾಪನದ ಮೂಲಕ ಲೋಕವನ್ನು ಗ್ರಹಿಸಿದವರು. ತಮ್ಮ
ಅನನ್ಯವಾದ ಒಳನೋಟ ಮತ್ತು ತಣ್ಣಗಿನ ನಿರೂಪಣಾ ಶೈಆಗಳಿಂದ
ಸತ್ಯವತಿ ಅವರು ತೆಲುಗು ಕಥಾಲೋಕವನ್ನು ಸ್ತ್ರೀ ಸಂವೇದನೆಯ
ಮೂಲಕ ಏಸ್ತಲಿಸಿದವರು.
ಹೆಣ್ಣಿನ ಬದುಕಿನ ಘನತೆ ಮತ್ತು ಅಸ್ತಿತ್ವದ ಶೋಧವನ್ನು ತಮ್ಮ
ನಿರೂಪಣೆಗಳಲ್ಲಿ ನಿರಂತರವಾಗಿ ಪರೀಕ್ಷಿಸುತ್ತಾ ಬಂದವರು. ಸ್ತ್ರೀವಾದ
ಆಶಯಗಳಿಗೆ ಕಲಾತ್ಮಕವಾದ ಕಥಾಶಿಲ್ಪವನ್ನು ನಿರ್ಮಾಣ ಮಾಡಿದ್ದು
ಸತ್ಯವತಿ ಅವರ ಹೆಗ್ಗಆಕೆಯಾಗಿದೆ.
ಸಮಾಜದ ಹಲವು ಸ್ತರಗಳಲ್ಲಿ ಬೆರೆತು ಹೋಗಿರುವ ಹೆಣ್ಣಿನ ಅಧೀನತೆಯ
ನೆಲೆಗಳು, ದಮನದ ಸೂಕ್ಷ್ಮ ಇರವುಗಳನ್ನು ಸಿಕ್ಕು ಬಿಡಿಸಿದಂತೆ ತಮ್ಮ
ಕತೆಗಳಲ್ಲಿ ಸತ್ಯವತಿಯವರು ಅಸರ್ಟೀವ್ ಆದ ರೀತಿಯಲ್ಲಿ
ನಿರೂಪಿಸಿದ್ದಾರೆ. ಸತ್ಯವತಿ ಅವರ ಕತೆಗಳಲ್ಲಿ ಹೆಣ್ಣು ಬದುಕಿನ ಹೊಸ
ಚಲನೆಗಳು ಸ್ತ್ರೀ ಬದುಕನ್ನು ಆಶಾವಾದದಿಂದ ನೋಡುವಂತೆ
ಒತ್ತಾಯಿಸುತ್ತವೆ. ಸತ್ಯವತಿ ಅವರ ಆಯ್ದ ಪ್ರಾತಿನಿಧಿಕ ಕತೆಗಳನ್ನು
ಅಜಯ್ ವರ್ಮಾ ಅಲ್ಲೂರಿ ಕನ್ನಡಕ್ಕೆ ಅನುವಾದ ಮಾಡುವ ಮೂಲಕ
ಕನ್ನಡ ಓದುಗರಿಗೆ ಉಪಕಾರ ಮಾಡಿದ್ದಾರೆ. ಈ
ಪ್ರಕಟಿಸುತ್ತಿರುವ ಅಹರ್ನಿಶಿ ಪ್ರಕಾಶನಕ್ಕೆ ಅಭಿನಂದನೆಗಳು.
ಹೊತ್ತಿಗೆಯನ್ನು
-ಕೆ. ವೈ. ನಾರಾಯಣಸ್ವಾಮಿ