Your cart is empty now.
ಪುಸ್ತಕದ ಬಗ್ಗೆ: ಕ್ರೈಂ ಡೈರಿ (ಸಮಗ್ರ ಕೈಂ ಕಥೆಗಳು : ಭಾಗ-1): ಕೌತುಕಮಯ ನೈಜ ಘಟನೆಗಳು
ಈ ಪುಸ್ತಕದಲ್ಲಿರುವ 'ಕಥೆ'ಗಳೆಲ್ಲ ನಮ್ಮ ನಿಮ್ಮ ನಡುವೆ ನಡೆದಿರುವ ನೈಜ ಅಪರಾಧ ಪ್ರಕರಣಗಳು. ಭಾರತದ ಮೂಲೆ ಮೂಲೆಗಳಲ್ಲಿ ದಾಖಲಾದ ವಿವಿಧ ಬಗೆಯ
ಅತಿ ಆಸಕ್ತಿದಾಯಕ,
ಅತಿ ಕುತೂಹಲಕಾರಿ,
ಅತಿ ಭೀಕರ,
ಅತಿ ವಿರಳ ಅಪರಾಧ ಪ್ರಕರಣಗಳನ್ನು ಹೆಕ್ಕಿ ತೆಗೆದಿರುವ ನಿವೃತ್ತ ಪೊಲೀಸ್ ಅಧಿಕಾರಿ ಡಾ. ಡಿ. ವಿ. ಗುರುಪ್ರಸಾದ್, ಅವುಗಳನ್ನು ತಮ್ಮ ಸರಳ ಸುಂದರ ಶೈಲಿಯಲ್ಲಿ ನಿರೂಪಿಸಿದ್ದಾರೆ. ಇವುಗಳನ್ನು ಓದುತ್ತಿದ್ದಂತೆ ನಮ್ಮ ಮನದಲ್ಲಿ ಭಯ, ಆಶ್ಚರ್ಯ, ದುಃಖ, ನೋವು, ತೃಪ್ತಿ, ಸಮಾಧಾನ ಹಾಗೂ ಕುತೂಹಲಗಳು ಮೂಡುತ್ತವೆ. ಸಧ್ಯ, ಇಂತಹ ಘಟನೆಗಳು ನಮಗೆ ಎದುರಾಗಲಿಲ್ಲವಲ್ಲ ಎಂದು ನಿಟ್ಟುಸಿರನ್ನೂ ಬಿಡುವಂತೆ ಮಾಡುತ್ತವೆ. ಒಮ್ಮೆ ಓದಲು ಆರಂಭಿಸಿದರೆ ಮುಗಿಯುವ ತನಕ ಸೂಜಿಗಲ್ಲಿನಂತೆ ನಮ್ಮನ್ನು ಹಿಡಿದಿಟ್ಟುಕೊಳ್ಳುವ ಪುಸ್ತಕವಿದು.
ನಾವು ಅಪರಾಧಗಳಿಗೆ ತುತ್ತಾಗದಿರಲು ಏನು ಮಾಡಬೇಕು, ಮಾಡಬಾರದು ಎಂದು ತಿಳಿಸುವ 'ಕ್ರೈಂಡೈರಿ'ಯು ವಿಜಯವಾಣಿ ಪತ್ರಿಕೆಯಲ್ಲಿ 6 ವರ್ಷಗಳು ಮೂಡಿಬಂದ ?ಆ ಕ್ಷಣ" ಅಂಕಣದ ಗುಚ್ಛ.
ನ್ಯಾಯ ವಿತರಣಾ ವ್ಯವಸ್ಥೆಯಲ್ಲಿ ಇರುವವರಷ್ಟೇ ಅಲ್ಲದೆ, ಕ್ರಿಮಿನಾಲಜಿ ಮತ್ತು ಸಮಾಜಶಾಸ್ತ್ರದ ವಿದ್ಯಾರ್ಥಿಗಳು, ಸಂಶೋಧಕರು, ಅಷ್ಟೇ ಏಕೆ, ಪ್ರತಿಯೊಬ್ಬರೂ ಓದಲೇಬೇಕಾದ ಈ ಪುಸ್ತಕವು ನಮ್ಮ ಮನೆಯಲ್ಲಿ ಇಟ್ಟುಕೊಳ್ಳಬೇಕಾದ ಒಂದು ಆಕರ ಗ್ರಂಥವಾಗಿದೆ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.