Your cart is empty now.
ಲೇಖಕರು: ವಸುಂಧರ, Vasundhara
ಅನುವಾದಕರು: ರಾಜೇಶ್ವರಿ ಕೆ ವಿ, Rajeshwari K v
******
ಚಂದಮಾಮ ಕಥೆಗಳು - (ಭಾಗ 1, 2, 3 ಮತ್ತು 4) ಮೂಲ ತೆಲುಗು : ವಸುಂದರ ಕನ್ನಡಕ್ಕೆ: ರಾಜೇಶ್ವರಿ ಕೆ ವಿ ಮಕ್ಕಳಿಗೆ ಕಥೆಗಳೆಂದರೆ ಪಂಚಪ್ರಾಣ. ಅಂತಹ ಮಕ್ಕಳ ಕಥೆಗಳು ಹೇಗಿರಬೇಕೆಂದರೆ..... ಮಕ್ಕಳು ಓದುವ ಕಥೆಗಳಲ್ಲಿ ಜ್ಞಾನ, ವಿಜ್ಞಾನ, ವಿನೋದ, ಉತ್ಸಾಹ, ಉಲ್ಲಾಸ, ನೀತಿ ಇವುಗಳಿದ್ದರೆ ಅವು ಮಕ್ಕಳ ಮಾನಸಿಕ ಬೆಳವಣಿಗೆಗೆ ಬಹಳ ಸಹಾಯವಾಗುತ್ತವೆ. ಇಂತಹ ಕಥೆಗಳನ್ನು ಕಟ್ಟಿಕೊಡುವುದರಲ್ಲಿ ಮುಂದಿರುವುದು ಹೆಸರಾಂತ ಮಕ್ಕಳ ಪತ್ರಿಕೆ 'ಚಂದಮಾನು". ಚಂದಮಾಮ ಕಥೆಗಳನ್ನು ಓದುವುದರಿಂದ ಮಕ್ಕಳಿಗೆ ಪ್ರಪಂಚದ ಪರಿಚಯವಾಗುತ್ತದೆ. ನಮ್ಮ ಸಂಪ್ರದಾಯದ ಹಿರಿಮೆ ತಿಳಿಯುತ್ತದೆ. ಅವರಲ್ಲಿ ನೀತಿ, ನಿಯಮಗಳನ್ನು ಒಳ್ಳೆಯ ಶಿಕ್ಷಣವನ್ನು ತರುತ್ತದೆ. ಅವರಲ್ಲಿ ಉತ್ಸಾಹ ಉಲ್ಲಾಸ,ಆನಂದ ಮೂಡಿಸುತ್ತವೆ. ಒಟ್ಟಿನಲ್ಲಿ ಹೇಳಬೇಕೆಂದರೆ ಚಂದಮಾಮ ಕಥೆಗಳೆಂದರೆ ಮಕ್ಕಳಿಗೆ ಬಹಳ ಇಷ್ಟ. ೧೯೪೭ರಲ್ಲಿ ಪ್ರಾರಂಭವಾದ ಚಂದಮಾಮ ೬೬ ವರ್ಷಗಳು ಪ್ರಕಟವಾಗಿ ೨೦೧೩ರಲ್ಲಿ ನಿಂತು ಹೋಯಿತು. ಆ ಕಥೆಗಳನ್ನು ಮಕ್ಕಳಿಗೆ ಆಷ್ಟೇ ಅಂದವಾಗಿ, ಚಿತ್ರಗಳೊಂದಿಗೆ ಮತ್ತೆ ಪ್ರಕಟಿಸಲು ಹೇಮಂತ ಸಾಹಿತ್ಯ ಟೊಂಕಕಟ್ಟಿ ನಿಂತಿದೆ. ಅವರ ಪ್ರಯತ್ನದ ಫಲವೇ ಈ ಪುಸ್ತಕ ಚಂದಮಾಮ ಕಥೆಗಳು ಭಾಗ 1, 2, 3 ಮತ್ತು 4.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.