Your cart is empty now.
ಈ ಕಾದಂಬರಿಗೆ ರಕ್ತಮಾಂಸಗಳಾಗಿರುವ ರೈತರ ಮೊಂಡುತನ, ಮೂರ್ಖತನ, ಮೂಢನಂಬಿಕೆಗಳು, ಆಳುವ ವರ್ಗಕ್ಕೆ ಸಲಾಮು ಹೊಡೆಯುವುದು, ಲೋಕಕ್ಕೇನಾದರೆ ಏನು ತನ್ನ ಹೊಟ್ಟೆ ತುಂಬಿದರೆ ಸಾಕೆನ್ನುವಂತಹ ಸ್ವಾರ್ಥಪೂರಿತ ದೃಷ್ಟಿಕೋನ, ಕೃತಘ್ನತೆ, ಕುತಂತ್ರ, ಮೋಸ, ದಗಾ ಇತ್ಯಾದಿ ಭಯಂಕರ ಗುಣಗಳನ್ನು, ಅವರ ಕಠೋರ ಶ್ರಮ, ಕಡುದಾರಿದ್ರಗಳ ಹಿನ್ನೆಲೆಯ ಬೆಳಕಲ್ಲಿ ಅರ್ಥ ಮಾಡಿಕೊಳ್ಳಬೇಕು. ಕಷ್ಟಪಟ್ಟರೂ ಫಲವಿಲ್ಲದ ಕಠೋರ ಪರಿಸ್ಥಿತಿಯಲ್ಲಿ ಜಡ್ಡುಗಟ್ಟಿದ ಬದುಕುಗಳವು. ಪ್ರಕೃತಿ ಮತ್ತು ಪ್ರಭುತ್ವ- ಎರಡರಿಂದಲೂ ಪ್ರೀತಿ ಮತ್ತು ಮಾರ್ದವತೆಗಳು ಅಪಹರಣಗೊಂಡಿರುವುದರಿಂದ ಕಲ್ಲಿನಂತಾದ ಜೀವನಗಳು ಅವರವು. ಹತ್ತೊಂಬತ್ತನೇ ಶತಮಾನದ ಶ್ರೇಷ್ಠ ಫ್ರೆಂಚ್ ಕಾದಂಬರಿಕಾರ ಎಮಿಲ್ ಜೋಲಾನ ಕಾದಂಬರಿಗಳೆಲ್ಲದರಲ್ಲಿ ಇದು ಶ್ರೇಷ್ಠ ಮಟ್ಟದ ಕಾದಂಬರಿ ಎಂಬ ಹೆಗ್ಗಳಿಕೆ ಪಡೆದಿದೆ. ಇದರಲ್ಲಿ ಬರುವ ವಿವರಗಳು, ವರ್ಣನೆ, ಹೆಸರುಗಳು ಬೇರೆ ಒಂದು ದೇಶಕ್ಕೆ ಸೇರಿದವುಗಳಾಗಿರಬಹುದು. ಆದರೆ ನಮ್ಮ ಗ್ರಾಮೀಣ ಜನರ ಬದುಕಿನ ಒಳವಿವರಗಳ ಜೊತೆ ಈ ಅನುಭವ ಲೋಕ ಬೇಕಾದಷ್ಟು ಸಾಮ್ಯತೆ ಹೊಂದಿದೆ. ಇಂದು ಇಡೀ ಕೃಷಿ ವ್ಯವಸ್ಥೆಯೇ ಒಂದು ತೀವ್ರ ಬಿಕ್ಕಟ್ಟಿನಲ್ಲಿದೆ.
ಗ್ರಾಮೀಣ ಜನರ ಬದುಕು ಹಲವು ಬಗೆಯ ಒತ್ತಡಕ್ಕೊಳಗಾಗಿ ತಿರುವು ಬಿಂದುವಿಗೆ ಬಂದು ನಿಂತಿದೆ. ಅದು ಅನುಭವಿಸುತ್ತಿರುವ ಸಂಕಷ್ಟಗಳ ಸ್ವರೂಪ ಭಿನ್ನವಿರಬಹುದು. ಆದರೆ 19ನೇ ಶತಮಾನದ ಫ್ರೆಂಚ್ ರೈತಾಪಿ ಬದುಕು ಇಪ್ಪತ್ತೊಂದನೆ ಶತಮಾನದ ನಮ್ಮ ರೈತಾಪಿ ಬದುಕಿನ ತಳಮಳಗಳಿಗೂ ಹಲವು ಕೋನಗಳಲ್ಲಿ ಕನ್ನಡಿಯಂತಿದೆ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.