Your cart is empty now.
ಪ್ರತಿಯೊಬ್ಬರ ಬದುಕಿನಲ್ಲೂ ಬದಲಾಗಬೇಕೆಂಬ ಬಯಕೆ ಆಗಾಗ ಕಾಣಿಸಿಕೊಳ್ಳುತ್ತದೆ. ಯಾವುದಾದರು ವಿಶೇಷ ಘಟನೆ ಸಂಭವಿಸಿದಾಗ ಬದಲಾವಣೆಗೆ ಪ್ರೇರಣೆ ದೊರೆಯುತ್ತದೆ. ಸಂತೋಷವನ್ನು ಉಂಟುಮಾಡುವ ಘಟನೆಗಳಿಗಿಂತ ದುಃಖ ತರುವ ಘಟನೆಗಳಿಂದ ಬದಲಾಗುವ ಪ್ರಸಂಗಗಳೇ ಹೆಚ್ಚು. ಆದರೆ ಬಹಳಷ್ಟು ಸಂದರ್ಭಗಳಲ್ಲಿ ಈ ಪ್ರೇರಣೆ ಹೆಚ್ಚು ದಿನ ಉಳಿಯುವುದಿಲ್ಲ. ಘಟನೆ ನಡೆದ ಒಂದೆರಡು ದಿನಗಳಲ್ಲಿ ಅದನ್ನು ಮರೆತು ಬಿಡುತ್ತೇವೆ. ಬದಲಾವಣೆಯ ಪ್ರಯತ್ನ ಮುಂದೂಡಲ್ಪಡುತ್ತದೆ. ಹೀಗಾಗಬಾರದು. ಬದಲಾವಣೆ ಈ ಜಗದ ನಿಯಮ. ಬದುಕಿನದ್ದುಕ್ಕೂ ನಾವು ಬದಲಾಗುವುದಕ್ಕೆ ಸಿದ್ಧರಾಗಿರಬೇಕು. ಆಗ ಮಾತ್ರ ಬದುಕಿಗೊಂದು ಅರ್ಥ ಇರುತ್ತದೆ.
ಬದಲಾಗಬೇಕಾದರೆ ಅನೇಕ ಅಡಚಣೆಗಳು ಎದುರಾಗುತ್ತದೆ. ಉದಾಹರಣೆಗೆ ಈಗಿನ ಸುರಕ್ಷಿತ ಜೀವನ ಪದ್ಧತಿಯನ್ನು ಬಿಡುವುದಕ್ಕೆ ಮನಸ್ಸು ಒಪ್ಪುವುದಿಲ್ಲ. ಅನೇಕ ವರ್ಷಗಳಿಂದ ಹೇಗೆ ನಡೆದುಕೊಂಡು ಬಂದಿದ್ದೇವೋ ಅದನ್ನೇ ಮುಂದುವರಿಸಲು ಮನಸ್ಸು ಹವಣಿಸುತ್ತದೆ. ಹೊಸ ಅನುಭವ ಪಡೆಯುವುದಕ್ಕೆ ಭಯಪಡುತ್ತೇವೆ. ಇದಕ್ಕೆಲ್ಲ ಮೂಲ ಕಾರಣ ನಮ್ಮಲ್ಲಿ ಆಳವಾಗಿ ಬೇರು ಬಿಟ್ಟಿರುವ ರೂಢಿ. ಈ ರೂಢಿ ಬದಲಿಸಿದರೆ ಬದಲಾವಣೆ ಸುಲಭವಾಗುತ್ತದೆ. ರೂಢಿ ಮತ್ತು ಬದಲಾವಣೆ ಒಂದೇ ನಾಣ್ಯದ ಎರಡು ಮುಖಗಳದ್ದಿಂತೆ. ಬಹಳಷ್ಟು ರೂಢಿಗಳು ನಮಗೆ ಅರಿವಿಲ್ಲದೆ ನಮ್ಮಲ್ಲಿ ಬಂದು ಸೇರಿಕೊಳ್ಳುತ್ತದೆ. ಆದ್ದರಿಂದ ರೂಢಿ ಹೇಗೆ ಸೃಷ್ಟಿಗೊಳ್ಳುತ್ತದೆ, ಅದಕ್ಕೆ ಕಾರಣಗಳು ಯಾವುವು, ಅದರಿಂದ ಬಿಡುಗಡೆ ಪಡೆಯುವುದು ಹೇಗೆ ಇತ್ಯಾದಿ ಅರ್ಥಮಾಡಿಕೊಂಡರೆ ಬದಲಾವಣೆ ಸಾಧ್ಯ.
• We deliver the books you order at beetlebookshop within 3-4 working days via india speed post .
Return of any defective / damage item should be done within 7 days from the date of the receipt of the shipment to our working office.