Your cart is empty now.
1, ಬದುಕು ಬದಲಿಸಬಹುದು ಭಾಗ - 1 ಈ ಸಂಕಲನದ ಒಂದೊಂದೇ ಲೇಖನ ಓದುತ್ತ ಹೋದಂತೆ ಬದುಕಿನ ಹಲವು ಮುಖಗಳ ಪರಿಚಯವಾಗುತ್ತದೆ. ನೋವು ನಲಿವಿನ, ನಿಟ್ಟುಸಿರಿನ ತುಣುಕುಗಳು ಸೇರಿಯೇ ಈ ಬದುಕು ನಡೆಯುತ್ತದೆ ಎಂಬುದನ್ನು, ಸೋಲನ್ನು, ನೋವನ್ನು, ನಿರಾಶೆಯನ್ನು, ಕೆಲವೊಮ್ಮೆ ತನ್ನ ತಪ್ಪಿಲ್ಲದಿದ್ದರೂ ಒದಗಿ ಬರುವ ಅಪಮಾನವನ್ನು ಹೇಗೆ ಎದುರಿಸಬೇಕೆಂಬುದನ್ನು, ಮುಗ್ಗುರಿಸಿ ಬಿದ್ದರೂ ಎದ್ದು ಕೊಡವಿ ನಡೆಯುವ ತಾಕತ್ತನ್ನು ಸತ್ತು ಮುಗಿಯದೆ ಇದ್ದು ಬದುಕುವ ದಿಟ್ಟತನವನ್ನೂ, ಮತ್ತೆ ಮತ್ತೆ ಪ್ರಾರಂಭಿಸಬಲ್ಲ ಛಲವನ್ನು ಓದುಗರ ತಲೆಗೂ ಹೊಗಿಸುವ ಲೇಖನಗಳಿವು. 2, ಸಾವೇ, ಬರುವುದಿದ್ದರೆ ನಾಳೆ ಬಾ (ಬದುಕು ಬದಲಿಸಬಹುದು ಭಾಗ - 2) ಬದುಕು ಪ್ರೀತಿಯ ಈ ಸಂಕಲನ : "ಆರೋಗ್ಯಕ್ಕಾಗಿ ನಾವು ಎಷ್ಟೆಲ್ಲ ಪರದಾಡುತ್ತೇವೆ, ಎಷ್ಟು ದೂರಕ್ಕೆ ಹುಡಿಕಿ ಹೋಗುತ್ತೇವೆ. ಗುಣವಾಗುವ ಪ್ರಕ್ರಿಯೆ ನಮ್ಮೊಳಗೆ, ನಾಮ್ಮಲ್ಲಿಯೇ ಇದೆ" ಎಂಬ ಆತ್ಮವಿಶ್ವಾಸವನ್ನು ತುಂಬುತ್ತದೆ. 3, ಸೋಲೆಂಬುದು ಅಲ್ಪವಿರಾಮ, ಬದುಕು ಬದಲಿಸಬಹುದು ಭಾಗ - 3 ಬದುಕು ಪ್ರೀತಿಯ ಈ ಸಂಕಲನ ಹೇಳುತ್ತದೆ: ಸೋಲೆಂಬುದು ಏನಿದ್ದರೂ ಅಲ್ಪವಿರಾಮವಷ್ಟೆ. ಬದುಕು ಕಾದಿದೆ ಸೋಲಿನಾಚೆಗೂ, ನೂರು ಬಣ್ಣಗಳಲ್ಲಿ. ನಮ್ಮ ಬದುಕಿನ ನಿಘಟಿನಿಂದ "ಸೋಲು" ಪದವನ್ನು ಹೊರಗೆ ಎಸೆಯೋಣ. ಯಾವುದೂ ಸೋಲಿಲ್ಲ. ಎಲ್ಲವೂ ಸವಾಲು. ಸಂತಸ ನನ್ನೆದೆಯ ಹಾಡು ಹಕ್ಕಿ (ಬದುಕು ಬದಲಿಸಬಹುದು ಭಾಗ 4) ಬದುಕು ಪ್ರೀತಿಯ ಈ ಸಂಕಲನ : ಮನಸ್ಸು ಖಿನ್ನವಾದಾಗ, ಬದುಕು ಹೋರಾಟವಾದಾಗ, ಈ ಕ್ಷಣದ ಸಮಸ್ಯೆಗಳು ಬೆಟ್ಟವಾಗಿ, ಏರಲಾರದೆ ಏದುಸಿರು ಇಟ್ಟಾಗ, ಸ್ಫೂರ್ತಿಯ ಸೆಳೆಯಾಗಬಲ್ಲ ಲೇಖನಗಳು ಇಲ್ಲವೆ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.