Free Shipping Charge on Orders above ₹300

Shop Now

Appa kaaneyaagiddaane Sale -10%
Rs. 144.00Rs. 160.00
Vendor: BEETLE BOOK SHOP
Type: PRINTED BOOKS
Availability: 5 left in stock

ಲೇಖಕರು : ಬೇಲೂರು ರಘುನಂದನ್

ಅಹಮ್ಮಿಗೆ ಕೊಳ್ಳುವುದಷ್ಟೇ ಗೊತ್ತು, ಪ್ರೀತಿಗೆ ಕೊಡುವುದಷ್ಟೇ ಗೊತ್ತು ಮರ ಒಗೆದೆಸೆದ

ಹಣ್ಣುಗಳ ಜೊತೆಗೆ ಜಗತ್ತು ವ್ಯವಹಾರಕ್ಕೆ ಇಳಿದ ಹೊತ್ತಿನಿಂದ ಇದು ಒಳಗಿನ ಮನುಷ್ಯ

ಸಂಬಂಧದ ಜೊತೆಗಿನ ಸಂಘರ್ಷವೂ ಹೌದು. ಆರ್ದವಾಗುವ ಭಾವಗಳು ನೆಲೆಯಿಲ್ಲದಂತೆ

ಅಲೆಯುವಾಗ ಹೇಳಲೇ ಆಗದ ಸಂಗತಿಗಳಿಗೆ ತನ್ನ ಹೃದಯದಲ್ಲಿ ಕೋಣೆಗಳನ್ನು

ನಿರ್ಮಿಸಿಕೊಳ್ಳುತ್ತವೆ. ಅದಕ್ಕೆ ಅನುಭವಜನ್ಯವಾದ ಸಂಗತಿಗಳನ್ನು ದೊಡ್ಡದು ಎಂದು

ಹೇಳುವುದು ಬೇಕಾಗಿದೆ. ಒಳಗಿನ ತಲ್ಲಣಗಳು ಹೊರಗಿನ ಸಂಗತಿಗಳನ್ನು ರೂಪಿಸುತ್ತದೆ ಎನ್ನುವ

ಭ್ರಮೆಯಿಲ್ಲ, ಆದರೆ ಹೊರಗಿನ ಸಂಗತಿಗಳಿಗೆ ಒಳಗಿನ ಮನಸ್ಸು ತಲ್ಲಣಿಸುತ್ತದೆ. ಕಳೆದದ್ದು

ಯಾವುದು ಎಂದರೆ ಎದೆಯೊಳಗೆ ಎಂದೂ ಜಾರದೇ ಉಳಿಯಬಯಸುವ ಸೌಖ್ಯಭಾವ, ಮರ

ಗಿಡ, ಕಾಡು ಕೆರೆಗಳ ಜೊತೆ ಮಾತಾಡುವ ಹುಡುಗನಿಗೆ ಹಂಡೆಯ ಒಲೆಯ ಜೊತೆ

ಮಾತಾಡುದ ಹೆಣ್ಣೂಬ್ಬಳ ಜಗತ್ತು ಇದಾಗಿರುತ್ತೆ ಎನ್ನುವುದು ತಿಳಿಯುವುದು ಕಷ್ಟವೂ ಅಲ್ಲ,

ಅಪ್ರಜ್ಞಾಪೂರ್ವಕವೂ ಅಲ್ಲ. ತಾಯಿ ಎನ್ನುವ ವಾಸ್ತವವನ್ನು ಹಿಡಿಯಲೆಳೆಸುವ ರಘುನಂದನ್‌ಗೆ

ಅವಳ ಸೆರಗಿನಿಂದಳೆದ ಸಣ್ಣ ನೂಲು ತಾನು ಎನ್ನುವ ಕೃತಜ್ಞತೆಯೂ ಇದೆ. ಇದು ಈ ಸಂಕಲನದ

ಎಲ್ಲ ಕತೆಗಳ ಜೀವಸತ್ವ.

ಏಡಿ ಅಮ್ಮಯ್ಯ ಕಥೆಯ ಜೊತೆಗೆ ಸೇರಿ ಹೌಸ್ ಥರದ ಇವತ್ತಿನ ಕಥೆಯನ್ನೂ, ಗಿಡವೊಂದು

ಮರವಾದ ಕಥೆಯಲ್ಲಿ ಶಿಕ್ಷಣದ ದಿಕ್ಕುಗಳನ್ನೂ ಮುಲ್ಲಾ ಸಾಹೇಬ್ ಮತ್ತು ಪಾಂಡುರಂಗ

ಕಥೆಯಲ್ಲಿ ಧರ್ಮಯುದ್ಧಗಳನ್ನು ಮೀರಿದ ಮಾನವ ಸ್ಥಿತಿಯನ್ನು ಸಂಬಂಧಗಳ ಬಂಧಕ್ಕೆ ತಂದು

ಕೂರಿಸುತ್ತಾರೆ. ಪುರಾಣವೂ, ವಾಸ್ತವವೂ ಆಗುವ ಇಲ್ಲಿನ ಕಥೆಗಳು ಕಾಡುಹಣ್ಣುಗಳಿಂದ ನಾಡಿನ

ಹಣ್ಣಿನ ಕಡೆಗೂ ವಾಲಿದಂತೆ, ನಾಗರಿಕತೆಯ ನಯನಾಜೂಕುಗಳನ್ನು ತಿರಸ್ಕರಿಸುವ ನಿರ್ದಿಷ್ಟ

ಪಯಣವನ್ನು ದಾಖಲಿಸುತ್ತವೆ. ಇದು ರಘುನಂದನ್‌ರ ಮೊದಲ ಕಥಾ ಸಂಕಲನ. ಆದರೆ ಕಥೆ

ಹೇಳುವುದು ಇವರಿಗೆ ಮೊದಲನೆಯದಲ್ಲ. ಭಿನ್ನವಾದ ಪ್ರಕಾರದಲ್ಲಿ ಕಥೆ ಹೇಳುವ ಪ್ರಯತ್ನವನ್ನು

ಇಲ್ಲಿ ಮಾಡಿದ್ದಾರೆ. ಬೇಲೂರು ರಘುನಂದನ್ ಅವರ ಕಥನ ಜಗತ್ತು ತನ್ನದೇ ಆದ ಅನನ್ಯ

ನೆಲೆಯಲ್ಲಿ ಕನ್ನಡ ಕಥಾಲೋಕವನ್ನು ವಿಸ್ತರಿಸಿದೆ. ಈ ಕಥೆಗಳು ತಮ್ಮ ದಟ್ಟವಾದ ವಿವರಗಳಲ್ಲಿ

ಓದುಗನನ್ನು ಪರಿಣಾಮಕಾರಿಯಾಗಿ ತಲುಪುತ್ತವೆ ಎಂದರೆ ಅತಿತಯೋಕ್ತಿಯಲ್ಲ.

ಪಿ. ಚಂದ್ರಿಕಾ

Guaranteed safe checkout

Appa kaaneyaagiddaane
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading