Your cart is empty now.
ಒಂದು ಕಾಲಘಟ್ಟದ ಐತಿಹಾಸಿಕ ಘಟನೆಗಳು, ಸಾಂಸ್ಕೃತಿಕ ಸಂಗತಿಗಳು, ಅಂಥ ಘಟನೆಗಳಿಗೆ ಲೇಖಕರ ಪ್ರತಿಕ್ರಿಯೆಗಳು ಮತ್ತು ಬರೆಯುವ ಕಾಲದಲ್ಲಿ ಉಂಟಾದ ಪಲ್ಲಟಗಳ ತೌಲನಿಕ ಚಿಂತನೆಗಳೂ ಆತ್ಮಕಥನದಲ್ಲಿ ಮುಖ್ಯವಾಗುತ್ತವೆ. ಈ ರೀತಿಯ ದಾಖಲೆಗಳು ಮುಂದಿನ ತಲೆಮಾರಿನ ಓದುಗರಿಗೆ ಒಂದು ಕೊಡುಗೆಯಾಗುತ್ತವೆ. ಹೇಳುವ ರೀತಿಯಲ್ಲಿ ಅಥವಾ ರಚನಾ ತಂತ್ರಗಳಲ್ಲಿ ಲೇಖಕರಿಂದ ಲೇಖಕರಿಗೆ ವ್ಯತ್ಯಾಸವಾಗುತ್ತ ಹೋಗಬಹುದು. ಆದರೆ ಮೂಲತತ್ವ ಎಲ್ಲದಕ್ಕೂ ಒಂದೇ.
ಯಶಸ್ಸಿನ ಹಾದಿಯಲ್ಲಿ ಎದುರಿಸಿದ ಕಷ್ಟಗಳಿರಬಹುದು, ಪಡೆದ ಯಶಸ್ಸಿನ ಫಲವಾಗಿ ಸವಿದ ಸಂತೋಷದ ಕ್ಷಣಗಳಿರಬಹುದು. ಏನಿದ್ದರೂ ಹೇಳುವ ವಿಷಯಗಳು ಓದುಗರಿಗೆ ಸ್ಫೂರ್ತಿದಾಯಕವಾಗಿರಬೇಕು, ಮುಂದಿನ ತಲೆಮಾರಿನ ಮಂದಿಗೆ ಪ್ರೇರಣೆ ನೀಡುವಂತಿರಬೇಕು ಅನ್ನುವುದರಲ್ಲಿ ಎರಡು ಮಾತಿಲ್ಲ, ಆತ್ಮಕಥನದಲ್ಲಿ ಕಲ್ಪನೆಯ ಕಟ್ಟು ಕಥೆಗಳಿಗೆ ಅವಕಾಶವಿಲ್ಲ. ವಾಸ್ತವದಲ್ಲಿ ಏನು ನಡೆಯಿತು ಅನ್ನುವುದಷ್ಟೇ ಇಲ್ಲಿ ಮುಖ್ಯ.
ಉದ್ಯೋಗ, ಗೃಹಕೃತ್ಯ, ಸಂಸಾರ ನಿರ್ವಹಣೆಯ ಹೊಣೆಗಳ ನಡುವೆಯೂ ಬರಹಗಾರ್ತಿಯಾಗಿ ಓರ್ವ ಮಹಿಳೆ ಯಶಸ್ವಿಯಾಗಬಲ್ಲಳು ಎಂಬುದಕ್ಕೆ 'ಅಂತರಂಗದ ಸ್ವಗತ' ಕೃತಿಯೇ ಸಾಕ್ಷಿ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.