Free Shipping Charge on Orders above ₹300

Shop Now

Allama Adhyana Loka Sale -10%
Rs. 810.00Rs. 900.00
Vendor: BEETLE BOOK SHOP
Type: PRINTED BOOKS
Availability: 8 left in stock

ವಚನ ಸಾಹಿತ್ಯದ ಶಿಖರಸೂರ್ಯ ಅಲ್ಲಮಪ್ರಭು ಬಸವಾದಿ ಪ್ರಮಥರು ಕಟ್ಟಿದ ಅನುಭವಮಂಟಪದ ಅಧ್ಯಕ್ಷರಾಗಿ, ಮೈಮ ಮೂರುತಿಯಾಗಿ ಶಿವಶರಣ ಸಮುದಾಯಕ್ಕೆ ಜ್ಞಾನಮಾರ್ಗವನ್ನು ತೋರಿದ ಶ್ರೇಷ್ಠ ತತ್ತ್ವಚಿಂತಕರಾಗಿದ್ದಾರೆ. ಸಮಕಾಲೀನ ಭಾರತೀಯ ಸಾಹಿತ್ಯದಲ್ಲಿ ಅನುಭಾವ ಮೀಮಾಂಸೆಯನ್ನು ತೆರೆದು ತೋರಿಸಿದ ಅಲ್ಲಮಪ್ರಭು ವಚನಗಳ ಜಿಜ್ಞಾಸೆ ಮಧ್ಯಕಾಲೀನ ಸಾಹಿತ್ಯದಿಂದ ಆಧುನಿಕ ಕನ್ನಡ ಸಾಹಿತ್ಯದುದ್ದಕ್ಕೂ ಎಂಟು ಶತಮಾನಗಳ ಕಾಲ ಹರಿದು ಬಂದಿದೆ. ಅಲ್ಲಮ ವಚನಗಳ ಸಂಪಾದನೆ, ಸಂಶೋಧನೆ, ವಿಮರ್ಶೆ, ವ್ಯಾಖ್ಯಾನ ಬಹುಮುಖೀನೆಲೆಯಲ್ಲಿ ನಡೆದಿದೆ.

ಶ್ರೀ ಸಿದ್ಧೇಶ್ವರ ಸ್ವಾಮೀಜಿ, ದ.ರಾ. ಬೇಂದ್ರೆ, ಎಂ.ಆರ್. ಶ್ರೀನಿವಾಸಮೂರ್ತಿ, ಪಾಂಡುರಂಗ ದೇಸಾಯಿ, ಎಲ್. ಬಸವರಾಜು, ಎಚ್. ತಿಪ್ಪೇರುದ್ರಸ್ವಾಮಿ,

ಎಂ. ಚಿದಾನಂದಮೂರ್ತಿ, ಎಂ.ಎಂ. ಕಲಬುರ್ಗಿ,

ಎಸ್.ಎಂ. ವೃಷಭೇಂದ್ರಸ್ವಾಮಿ, ಜಯಶ್ರೀ ದಂಡೆ, ಸಿಸ್ಟರ್‌ ವಾಯ್‌ಲೆಟ್, ಕೀರ್ತಿನಾಥ ಕುರ್ತುಕೋಟಿ, ಜಿ.ಎಸ್. ಶಿವರುದ್ರಪ್ಪ, ಪ್ರಭುಶಂಕರ, ಅ.ನ.ಕೃ. ಚೆನ್ನಣ್ಣ ವಾಲೀಕಾರ, ಓ.ಎಲ್. ನಾಗಭೂಷಣಸ್ವಾಮಿ, ಗಿರಡ್ಡಿ ಗೋವಿಂದರಾಜ, ಬುದ್ದಣ್ಣ ಹಿಂಗಮಿರೆ, ಡಿ.ಆರ್. ನಾಗರಾಜ, ಎನ್.ಜಿ. ಮಹಾದೇವಪ್ಪ, ಬಸವರಾಜ ಕುಡಿ, ನಾ. ಮೊಗಸಾಲೆ, ವಿ. ಚಂದ್ರಶೇಖರ ನಂಗಲಿ, ಎಸ್. ನಟರಾಜ ಬೂದಾಳು, ಶ್ರೀ ಅನ್ನದಾನೀಶ್ವರ ಮಹಾಸ್ವಾಮಿಗಳು, ಬಸವರಾಜ ಸಬರದ, ಶ್ರೀಪಾದಶೆಟ್ಟಿ, ಟಿ.ಎ.ಎನ್. ಖಂಡಿಗೆ, ಪಿ.ಎ. ನಾರಾಯಣ, ಜಿ.ಎಸ್. ಆಮೂರ, ನರಹಳ್ಳಿ ಬಾಲಸುಬ್ರಹ್ಮಣ್ಯ, ಬಿ. ಜನಾರ್ದನ ಭಟ್, ಜಿ.ಎಂ. ಹೆಗಡೆ, ರಾಜಶೇಖರ ಹಳೆಮನೆ, ಕೆ.ಇ. ರಾಧಾಕೃಷ್ಣ, ಜ್ಯೋತಿಶಂಕರ, ಸರ್ಫರಾಜ ಚಂದ್ರಗುತ್ತಿ, ವಿದುಷಿ ಶ್ಯಾಮಲಾ ಪ್ರಕಾಶ, ವೀಣಾಬನ್ನಂಜೆ ಇವರೆಲ್ಲರೂ ಬರೆದ ಐವತ್ತೊಂದು ವಿಮರ್ಶಾಲೇಖನಗಳು 'ಅಲ್ಲಮ ಅಧ್ಯಯನಲೋಕ'ದಲ್ಲಿವೆ. ಸಂಶೋಧನ ವಿಮರ್ಶೆ, ವಚನ ನಿರ್ವಚನ ಸೈದ್ಧಾಂತಿಕ ವಿಮರ್ಶೆ, ಪ್ರಾಯೋಗಿಕ ವಿಮರ್ಶೆ, ತೌಲನಿಕ ವಿಮರ್ಶೆಯ ಅಲ್ಲಮ ವಿಮರ್ಶೆಯ ಆಯ್ದ ಉತ್ಕೃಷ್ಟ ಬರಹಗಳು ಈ ಗ್ರಂಥದಲ್ಲಿವೆ. ಕನ್ನಡದ ನವೋದಯ, ಪ್ರಗತಿಶೀಲ, ನವ್ಯ, ದಲಿತ ಬಂಡಾಯ ಸಾಹಿತ್ಯ ಸಂದರ್ಭದಲ್ಲಿ ಅಲ್ಲಮ ವಚನಗಳ ಸಂಶೋಧನೆ, ವಿಮರ್ಶೆ, ಅಧ್ಯಯನಗಳು ನಿರಂತರವಾಗಿ ನಡೆದಿರುವುದು ಆಧುನಿಕ ಕನ್ನಡ ಸಾಹಿತ್ಯದ ವಿಶಿಷ್ಟತೆಯಾಗಿದೆ. ಇಪ್ಪತ್ತನೆಯ ಶತಮಾನದ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಅಲ್ಲಮ ವಚನಗಳ ಅನುಸಂಧಾನಕ್ಕೆ ತಮ್ಮ ವಿದ್ವತ್ತನ್ನು ಕ್ರಿಯಾಭಿಮುಖಗೊಳಿಸಿದ

ಕನ್ನಡದ ಕವಿಲೇಖಕ ವಿಮರ್ಶಕರ ಚಿಂತನಧಾರೆಯನ್ನು 'ಅಲ್ಲಮ ಅಧ್ಯಯನಲೋಕ' ಸಹೃದಯಲೋಕಕ್ಕೆ ನೀಡುತ್ತದೆ.

Guaranteed safe checkout

Allama Adhyana Loka
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading