ಬದಲಾಗುತ್ತಿರುವ ದಿನಮಾನಗಳಲ್ಲಿ ಬಿಜಿಎಂ ಅವರು ಇಲ್ಲದಿರುವ ಶೂನ್ಯ ಎಲ್ಲರನ್ನೂ ಕಾಡುತ್ತಿದೆ. ರಾಜಕೀಯವಾಗಿ ವೈಜ್ಞಾನಿಕವಾಗಿ ಸಾಮಾಜಿಕವಾಗಿ ಅವರಿಲ್ಲದ ಒಂದು ವರ್ಷದಲ್ಲಿ ಅನೇಕ ಬದಲಾವಣೆಗಳಾಗಿವೆ. ಅವರು ಬಯಸಿದ್ದ ರಾಜಕೀಯ ಪಲ್ಲಟವಾಗಿದೆ. ಫ್ಯಾಸಿಸಂಗೆ ಹಿನ್ನಡೆಯಾಗಿದೆ. ಭಾಗ್ಯಗಳ ಮಹಾಪೂರವೇ ಹರಿದಿದೆ. ಚಂದ್ರಯಾಣವೂ ಯಶಸ್ಸನ್ನು ಕಂಡಿದೆ. ನನ್ನ ಅರಿವಿನ ಪ್ರವಾದಿಯಂತಹ ಕೃತಿ ಗೌರಿಬಿದನೂರಿನ ಮಣ್ಣಿನಲ್ಲಿ ಅರಳಿದೆ. ಇಂಡಿಯಾ ಭಾರತವಾಗಿದೆ. ವಿಶ್ವಗುರುವಾಗಿ ಬಿಂಬಿಸಿಕೊಳ್ಳುತ್ತಿದೆ. ಆದರೆ ಬಿಜಿಎಂ ಬಿಟ್ಟುಹೋದ ಕೆಲಸಗಳೆಲ್ಲವೂ ಅಲ್ಲೇ ಇವೆ. ಅವರ ಸ್ಥಾನ ತುಂಬುವ ಇನ್ನೊಬ್ಬ ಬಿಜಿಎಂ ಸಂಭವಿಸಲೇ ಇಲ್ಲ. ಅವರ ಲೇಖನಿಯಲ್ಲಿ ಮೂಡುತ್ತಿದ್ದ ತೀಕ್ಷ್ಯ ಬರಹಗಳು ಮೂಡಲೇ ಇಲ್ಲ. ಮಾತು ಮೌನವಾಗಿದೆ. ಇಂತಹ ಸಂದರ್ಭದಲ್ಲಿ ಪ್ರೊ.ಬಿಜಿಎಂ ಸಾಮಾಜಿಕ ಸಾಂಸ್ಕೃತಿಕ ಪರಿವರ್ತನಾ ಸಂಸ್ಥೆಯು ಬಿಜಿಎಂ ಅವರ ಆಯ್ದ ಇಪ್ಪತ್ತು ಟಿಪ್ಪಣಿ, ಮುನ್ನುಡಿಗಳನ್ನು ಪ್ರಕಟಿಸುವ ಕಾರ್ಯಕ್ಕೆ ಮುಂದಾಗಿದೆ. ಇದು ಬಿಜಿಎಂ ಬಳಗದಲ್ಲಿ ಅವರ ಕೃತಿಗಳನ್ನು ನಿರೀಕ್ಷಿಸುತ್ತಿದ್ದ ಹುರುಪನ್ನು ಕಟ್ಟಿಕೊಡುವುದರಲ್ಲಿ ಅಗಲುವ ಮುನ್ನ ಪ್ರಕಟಿಸಬೇಕೆಂದು ಪುಸ್ತಕವು ಪುಸ್ತಕವು ಅವರೇ ಅವರೇ ಹೇಳುತ್ತಿದ್ದಂತೆ
ಓದುಗರಲ್ಲಿ ಹೊಸ ಹುರುಪನ್ನು ಕಟ್ಟಿಕೊಡುವಲ್ಲಿ ಸಂದೇಹವಿಲ್ಲ. ಇವೆಲ್ಲವೂ ಅವರು ಅಗುಲುವ ಮುನ್ನ ಪ್ರಕಟಿಸಬೇಕೆಂದು ಸಿದ್ಧಪಡಿಸಿದ್ದವುಗಳೇ ಆಗಿವೆ.
ಈ ಪುಸ್ತಕವು ಅವರೇ ಹೇಳುತ್ತಿದ್ದಂತೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮುನ್ನೆಲೆಗೆ ತರುವ ಸಂವಾದಕ್ಕೆ ಸಹಕಾರಿಯಾಗುತ್ತದೆ ಎನ್ನುವ ಭರವಸೆ ನಮಗಿದೆ.
- ಡಾ. ರಮೇಶಚಂದ್ರ ದತ್ತ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.