Your cart is empty now.
ಬಿಸಿಲು-ಮಳೆಗಳನ್ನು ಕಾಣದ ಸುಕುಮಾರಿ ನೀನು. ಪಾದರಕ್ಷೆಯೂ ಇಲ್ಲದೇ ಆ ಅಡವಿಯಲ್ಲಿ ಅಷ್ಟೊಂದು ಕ್ರೋಶಗಳ ದೂರವನ್ನು ಹೇಗೆ ನಡೆದುಕೊಂಡು ಬಂದೆ?” ಎಂದು ಕೇಳಿದಳು ತ್ರಿಜಟೆ.
ಸೀತೆ ನಾಚಿಕೆಯಿಂದ ತಲೆ ತಗ್ಗಿಸಿಕೊಂಡಳು. ಅದರಲ್ಲಿ ನಾಚಿಕೆ ಪಡುವಂತಹ ವಿಷಯವೇನಿದೆಯೆಂದು ಆ ರಾಕ್ಷಸಿಗೆ ಅರ್ಥವಾಗಲಿಲ್ಲ. ಪ್ರಶ್ನೆ ಮತ್ತಷ್ಟು ಬಿಗಿಯೆನಿಸಿತು. ಆದರೂ ಹೇಳಲಿಲ್ಲ.
“ನನಗೆ ಗೊತ್ತಿದೆ. ಮಗಳು ಕಷ್ಟಪಡುತ್ತಿದ್ದರೆ ಯಾವ ತಾಯಿ ತಾನೆ ನೋಡಿಕೊಂಡು ಸುಮ್ಮನಿರುತ್ತಾಳೆ. ಕಾಲಿಗೆ ಮುಳ್ಳು ಚುಚ್ಚಿಕೊಳ್ಳದಂತೆ ಹಸುರಿನ ರತ್ನಗಂಬಳಿಯನ್ನೇ ಹಾಸುವುದಿಲ್ಲವೇ?”
ಸೀತೆ ಆಶ್ಚರ್ಯಪಟ್ಟಳು. ಅವಳಿಗೆ ಆ ಆಲೋಚನೆಯೇ ಬಂದಿರಲಿಲ್ಲ. ಆದರೆ ಅದು ನಿಜವೇ. ಅಡವಿಯಲ್ಲಿ ಗ್ರೀಷ್ಮಹೇಮಂತಗಳ ಅಬ್ಬರವನ್ನು ಸ್ವಲ್ಪ ಕಡಿಮೆ ಮಾಡಲು ಇಂದ್ರನನ್ನು ಕೇಳಿಕೊಂಡಿದ್ದಳು ವಿಶ್ವಂಭರೆ. ಕಾಶ್ಯಪಿಯ ಮಾತನ್ನು ಇಲ್ಲವೆನ್ನುವ ಧೈರ್ಯ ಇಂದ್ರನಿಗೆಲ್ಲಿಯದು? ಸ್ವಲ್ಪ, ನೋಡಿದರೂ ನೋಡದಂತೆ ಇದ್ದು ಬಿಡು”, ಎಂದು ಕಾಲಧರ್ಮಕ್ಕೆ ಹೇಳಿದನು. ಅದರಿಂದ ಕಾಲವೇ ನಿಂತಿತ್ತು.
ಋತುಗಳು ಧರ್ಮ ತಪ್ಪಿದವು ಎಂದು ಋಷಿಗಳು ಕಂಗಾಲಾಗಿ ದಿವ್ಯದೃಷ್ಟಿಯಿಂದ ನೋಡಿದರೆ... ಏನಾಗಿದೆ? ಅಲ್ಲಿರುವ ವೃಕ್ಷಗಳೂ ವನಸಂತತಿಗಳೂ ವಸಂತವೂ ಅವನಿಜಾತೆಯನ್ನು ನೋಡುತ್ತಾ ತಮ್ಮ ಕೆಲಸವನ್ನು ಬಿಟ್ಟು ಅಲ್ಲಿಯೇ ನಿಂತುಬಿಟ್ಟಿವೆಯಂತೆ.
.....ಹೀಗೆಂದುಕೊಂಡಳು ತ್ರಿಜಟೆ. ಆದರೆ ನಿಜವಾದ ವಿಷಯ ಅದಲ್ಲ.
(ಅನುಬಂಧದಲ್ಲಿ ಯಂಡಮೂರಿ ವೀರೇಂದ್ರನಾಥ್ ಅವರ “ಕೈಕಾದೇವಿಯ ನಾಲ್ಕನೇ ಕೋರಿಕೆ” ಹಾಗೂ ಐದು ಕಥೆಗಳು)
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.