Your cart is empty now.
ಲೇಖಕರು: ಗಣೇಶಯ್ಯ ಕೆ ಎನ್, Ganeshaiah K N
ಅರಿವು ಗೆದ್ದಷ್ಟೂ ಅದು ಅಜ್ಞಾತದ ಮುಂದೆ ಮಂಡಿಯೂರುತ್ತದೆ. ಕಾರಣ ಅಜ್ಞಾತದ ಕತ್ತಲು ಬಗೆದಷ್ಟೂ ದಟ್ಟವೂ ಅನಂತವೂ ಆಗುತ್ತದೆ. ನಮ್ಮ ಚಿತ್ರದ ಸುತ್ತ ಆವರಿಸಿಕೊಂಡಿರುವ ಅಜ್ಞಾತದ ಕತ್ತಲಿನೆಡೆಗೆ ಬೆಳಕು ಚೆಲ್ಲುವ ಒಂದೇ ದಾರಿ ಎಂದರೆ, ನಮ್ಮ ಚಿತ್ತವನ್ನು ಚಿತ್ತದಿಂದಲೇ ಅರಿಯಲು ಪ್ರಯತ್ನಿಸುವುದು. ಆಗ ಮೂಡುವ ಮಂದಬೆಳಕಲ್ಲಿ ಜೀವ ಜಗತ್ತಿನ ಅದ್ಭುತಗಳು ಮಬ್ಬು ಮಬ್ಬಾಗಿ ಕಾಣತೊಡಗುತ್ತವೆ. ನಾವು ಕೇವಲ ನಾವಲ್ಲ ಎಂಬ ಅಚ್ಚರಿ, ಅಸೂಯೆ, ದ್ವೇಷ ಮುಂತಾದವು ನಮ್ಮನ್ನು ಗೆದ್ದುಕೊಂಡಿರುವ ಪರಿ, ರಾವಣನಂತಹ ಶತ್ರುಗಳೇ ನಮ್ಮ ರಕ್ಷಕರಾಗಿರುವ ವೈಚಿತ್ರ್ಯ... ಮುಂತಾದವುಗಳ ಅಸ್ಪಷ್ಟ ಪರಿಚಯವಾಗತೊಡಗುತ್ತದೆ. ನಮ್ಮ ಚಿತ್ತದ ಅಜ್ಞಾತದತ್ತ ಒಂದು ಹೆಜ್ಜೆ ನಡೆಯುವುದೇ ಇಲ್ಲಿನ ಲೇಖನಗಳ ಉದ್ದೇಶ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.