Your cart is empty now.
AAAAMERICA
Exploring America with Bharathi: A personal Travelogue
written by Bharathi B V
ಜಗತ್ತು ಒಂದು ಪುಸ್ತಕದಂತೆ
ಅಲೆಮಾರಿಗಳಲ್ಲದವರು ಆ ಪುಸ್ತಕದ ಕೆಲವು ಪುಟಗಳನ್ನು ಮಾತ್ರ ಓದುತ್ತಾರೆ' ಎನ್ನುವ ಮಾತಿದೆ. ಹೊಸ ಜಗತ್ತಿಗೆ ಕಾಲಿರಿಸಿದಾಗ ಎದುರಾಗುವ ಪುಟಗಳು ಪತ್ತೇದಾರಿ ಪುಸ್ತಕದ ಪುಟಗಳಿದ್ದಂತೆ... ಅನೂಹ್ಯ, ಅನಿರೀಕ್ಷಿತ.
'ಅಅಅಅಮೆರಿಕಾ' ಅಂಥದ್ದೊಂದು ಪ್ರಯಾಣದ ಕಥೆ. ಇದು ಅಮೆರಿಕಾ ಪ್ರವಾಸ ಕಥನವಲ್ಲ. ಕೇವಲ ಅಲ್ಲಿ ಕಳೆದ ದಿನಗಳ ಅನುಭವಗಳ ಗುಚ್ಛವಷ್ಟೇ. ಅಲ್ಲಿನ ದಿನನಿತ್ಯದ ಬದುಕಿನಲ್ಲಿ ಎದುರಾದ ವಿಷಾದದ, ನಗೆಯುಕ್ಕಿಸಿದ, ತಬ್ಬಿಬ್ಬಾಗಿಸಿದ, ಭಯ ಹುಟ್ಟಿಸಿದ, ಅನುಭವಗಳನ್ನು ವಿಸ್ತರಿಸಿದ ಒಂದಿಷ್ಟು ಬರಹಗಳಿವೆ.
ಪ್ರವಾಸಕ್ಕೆ ಹೋದಾಗ ನಮಗೆ ಆ ಊರಿನ ಬದುಕು ಪರಿಚಯವಾಗುವುದಿಲ್ಲ. ಎಲ್ಲೆಲ್ಲಿಗೆ ಹೋಗಬೇಕು ಎನ್ನುವುದು ಮೊದಲೇ ನಿರ್ಧಾರವಾಗಿರುತ್ತದೆ. ಹಾಗಾಗಿ ಹೋಗಬೇಕಾದ ಸಮಯ, ಯಾವ ಗಾಡಿಯಲ್ಲಿ ಹೋಗುವುದು, ಅಲ್ಲಿನ ವಿಷಯ ವಿವರಿಸುವ ಗೈಡ್ ಎಲ್ಲವೂ ಸೆಟ್ ಆಗಿಬಿಟ್ಟಿರುತ್ತದೆ. ಅದು ಒಂದು ರೀತಿಯಲ್ಲಿ ಲವ್ವಲ್ಲಿರುವ ಗಂಡು, ಹೆಣ್ಣಿನಂತೆ. ಭೇಟಿಯಾದಾಗ ನಮ್ಮ best ಮುಖವನ್ನಷ್ಟೇ ತೋರಿಸಿ ನಂತರ ಮನೆಗೆ ವಾಪಸ್ ಆಗುತ್ತೇವೆ.
ಆದರೆ ಒಂದು ಊರಿಗೆ ಅಥವಾ ದೇಶಕ್ಕೆ ಇರಲು' ಹೋಗುವುದು ಮದುವೆಯಾದ ನಂತರದ ಗಂಡ-ಹೆಂಡತಿಯರ ಬದುಕಿನಂತೆ, ಅಲ್ಲಿ ಲವ್ವು ಬದುಕಿನ ಒಂದು ಭಾಗವಷ್ಟೇ. ಅಡುಗೆ ಮಾಡುವುದು, ಟಾಯ್ಲೆಟ್ ತೊಳೆಯುವುದು, ಪಾತ್ರೆ ಉಜ್ಜುವುದು, ಬಟ್ಟೆ ಒಗೆಯುವುದು, ಮಾರಾಮಾರಿ ಜಗಳ, ಲೈಟ್ ಬಿಲ್ಲು, ದಿನಸಿ ಲಿಸ್ಟು, ನಮ್ಮಪ್ಪನ ಬಗ್ಗೆ ಮಾತಾಡಬೇಡ ಅನ್ನುವ ಅವಳು, ನಮ್ಮಮ್ಮನ ಅಡಿಗೆಯೇ ಬೆಸ್ಟು ಅನ್ನುವ ಅವನು... ಇಂಥವೇ ಹೆಚ್ಚು ಇರುತ್ತವೆ!
ಅಅಅಅಅಮೆರಿಕಾ' ಇಂಥದ್ದೊಂದು ಪುಸ್ತಕ!
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.