ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ ನೋಡಾ ಎನ್ನುತ್ತಲೇ ಕದಳಿ ಹೊಕ್ಕು ಬಂದೆ ಎನ್ನುವ ಪ್ರವಾಸ ಪ್ರಿಯ ರಹಮತ್ ತರೀಕೆರೆಯವರ ಶ್ರೀಶೈಲದ ಪ್ರವಾಸವೇ ಇಲ್ಲಿನ ಮೊಟ್ಟ ಮೊದಲ ಲೇಖನ. ಮುಂದೆ ಇವರು ಸುತ್ತಿದ್ದು ವಿವಿಧ ದಿಕ್ಕುಗಳನ್ನು. ಇವರ ಆಸಕ್ತಿಯ ಬೆಟ್ಟ-ಕಾಡು-ಹಳ್ಳಿಗಳನ್ನು ಬಾವುಲರ ಬಂಗಾಲ, ನವಾಬರ ಲಖನೋ, ಹಿಮಾಲಯದ ಮಲಾನಾ, ಲಕ್ಷದ್ವೀಪಗಳು, ತೇಜಸ್ವಿಯವರ ಕಾಫಿ ತೋಟ, ಇವರ ಸುತ್ತಾಟದ ಕೆಲವು ತಾಣಗಳು. ಕೇವಲ ಮೋಜಿಗಾಗಿ ಸುತ್ತುವ ಲಕ್ಸುರಿ ಪ್ರವಾಸಿಗರಿಗಿಂತ ಭಿನ್ನವಾಗಿ ಸಂಚರಿಸುವ ಇವರು ಕಾಲ್ನಡಿಗೆಯಾದರೂ ಸರಿ, ಹೋಗಬೇಕಾದ ಕಡೆ ಕಷ್ಟಗಳೆಷ್ಟೇ ಬಂದರೂ ಬೆನ್ನು ತಿರುಗಿಸದೆ ಪಯಣ ಪೂರ್ಣಗೊಳಿಸುವ ಛಲಗಾರ. ಪ್ರವಾಸ ಕಾಲದಲ್ಲಿ ಸ್ಥಳಗಳನ್ನಷ್ಟೇ ನೋಡಿಕೊಂಡು ಬರುವವರಲ್ಲ. ಮೊದಲು ಮಾತನಾಡುವುದು ಸಾಮಾನ್ಯ ಜನರ ಜೊತೆ. ಹುಡುಕುವುದು ಎಲೆಮರೆಯಲ್ಲಿರುವ ಬರಹಗಾರ, ಕಲಾವಿದರನ್ನು. ಅವರ ಮಾತುಗಳಲ್ಲೇ ಹೇಳುವುದಾದರೆ ಹೋದಲ್ಲೆಲ್ಲ ಜನರ ತಲೆಯನ್ನು ಸಾಕಷ್ಟು ತಿಂದು ನಮಗೆ ಬೇಕಾದ ಎಲ್ಲ ಮಾಹಿತಿ ಸಂಗ್ರಹಿಸಿ ತಮ್ಮ ತಲೆಯಲ್ಲಿ ತುಂಬಿಕೊಂಡು ವಾಪಸು ಬಂದಾಗ ಒಂದು ಲೇಖನವೋ ಪುಸ್ತಕವೋ ನಮಗೆ ದಕ್ಕುತ್ತದೆ. ಹಾಗಾಗಿ ಈ ಕೃತಿಯಲ್ಲಿ ವ್ಯಕ್ತಿ ಚಿತ್ರಣ, ಪ್ರಕೃತಿಯ ಸೌಂದರ್ಯದ ಸೊಗಸು, ರೋಚಕ ಅನುಭವ ಹೇರಳವಾಗಿ ವರ್ಣಿತವಾಗಿವೆ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.