Your cart is empty now.
ಮಹಿಳಾ ಕಲಾವಿದೆಯರು, ಹೊಸ ಚಿಂತನೆಗಳು, ಪ್ರಗತಿಪರ ವಿಚಾರಗಳು, ಮುಂತಾದವುಗಳ ಹಿನ್ನಲೆಯಲ್ಲಿ ಯಕ್ಷಗಾನವನ್ನು ಅದರ ಚೌಕಟ್ಟಿನಲ್ಲಿಯೇ ಬಳಸಿಕೊಳ್ಳುವುದಕ್ಕೆ ಕೃತಿಯಂತಹ ಸಮರ್ಥರ ಅಗತ್ಯವಿತ್ತು. ಸ್ವತಹ ವಿಚಾರವಂತೆ, ವಿದ್ಯಾವಂತೆ, ಪ್ರಸಂಗ ರಚಿಸಬಲ್ಲವಳು, ಭಾಗವತಿಕೆ ಬಲ್ಲವಳೂ ಆಗಿರುವ ಕೃತಿಗೆ ಯಕ್ಷಗಾನದ ಆಕೃತಿ ಕೆಡದಂತೆ, ಸ್ವರೂಪ ಸೌಂದರ್ಯ ವರ್ಧಿಸುವಂತೆ ಹೊಸ ಸ್ಪರ್ಶ ನೀಡುವ ಶಕ್ತಿಯಿದೆ. ಈ ಲೇಖನಗಳು ಅದರದ್ದೇ ಒಂದು ಭಾಗವಾಗಿದೆ. ಪುಸ್ತಕವಾಗಿ ಬರುತ್ತಿರುವಾಗ ಶುಭ ಹಾರೈಕೆಗಳು. ವಿಜಯ ನಳಿನಿ ರಮೇಶ್
ಪ್ರಾದೇಶಿಕ ಕಲೆಯೊಂದು ಸಾರ್ವಕಾಲಿಕ ಆವರಣವನ್ನು ಪಡೆದುಕೊಳ್ಳುವ ಸಂದರ್ಭದಲ್ಲಿ ಅದು ಭಾರತದ ಅಭಿಜಾತ ಕಲೆಗಳೊಡನೆ ಸಾಧಿಸಿಕೊಳ್ಳುವ ಸಂಬಂಧಗಳ ಬಗ್ಗೆಯೂ ಕೃತಿಯವರು ಮಹತ್ವದ ಮಾತುಗಳನ್ನು ಈ ಪುಸ್ತಕದಲ್ಲಿ ಹೇಳಿದ್ದಾರೆ. ಯಕ್ಷಗಾನದ ಪ್ರಿಯರು ಧ್ಯಾನಿಸಿ ಓದಬೇಕಾದ ಕೃತಿಯಿದು. ಪುರುಷೋತ್ತಮ ಬಿಳಿಮಲೆ
ಕಾಲಾಂತರದ ರೂಢಿಯಲ್ಲಿ ಕಲೆಯ ವ್ಯಾಕರಣ ನುಣುಪುಗೊಂಡು ನಿತ್ಯಕ್ಕಿಂತ ಬೇರೆಯದು ಅನ್ನಿಸತೊಡಗಿದಾಗ, ಅದರ ನಿತ್ಯ ಸಹಜತೆಯ ಕರುಳ ಬಳ್ಳಿಯನ್ನು ಒಡೆದು ಕಾಣಿಸುವ ಮೀಮಾಂಸೆಯ ಕಾಯಕವನ್ನು ಇಲ್ಲಿಯ ಬರಹಗಳು ಸೋದಾಹರಣವಾಗಿ ಮಾಡಿವೆ. ಮೀಮಾಂಸೆಯು ಒದಗಿರುವ ಭಾಷೆಯನ್ನು ಒಡೆದು. ಹೊಸ ಪರಿಕಲ್ಪನೆಗಳನ್ನು ಆರಿಸುವುದಕ್ಕೆ ಮರುಕಟ್ಟುವ ಕೆಲಸವನ್ನೂ ಮಾಡಬೇಕಾಗುತ್ತದೆ. ಇವು ಯಕ್ಷಗಾನದಂತಹ ದೃಶ್ಯಕಲೆಯ ಕುರಿತು ಕಲಾಪವಾಗಿ ಉಳಿಯದೇ, ಕಲೆಯಲ್ಲಿ ಅಡಕವಾಗಿರುವ ಸಾಮಾಜಿಕ ರೂಪು ರೇಖೆಗಳ ಲಕ್ಷಣಗಳನ್ನು ಅರಿಸುವ ಸಾಮಥ್ಯವನ್ನು ಪಡೆದಿವೆ.
ಕೆ ಫಣಿರಾಜ್
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.