Free Shipping Charge on Orders above ₹400

Shop Now

Shivaji ; The Great maratha Sale -15%
Rs. 1,020.00Rs. 1,200.00
Vendor: BEETLE BOOK SHOP
Type: PRINTED BOOKS
Availability: 8 left in stock

ನಮ್ಮ ದೇಶದ ಚರಿತ್ರೆಯಲ್ಲಿ ಅನೇಕ ಸಾಮಂತರು, ಸಂಸ್ಥಾನಿಕರು, ರಾಜಮಹಾರಾಜರು, ಚಕ್ರವರ್ತಿ ಸಾಮ್ರಾಟರು ಆಗಿ ಹೋಗಿದ್ದಾರೆ. ಅವರಲ್ಲಿ ಇವತ್ತಿಗೂ ಎದ್ದು ಕಾಣುವ ಹೆಸರುಗಳೆಂದರೆ, ಅಶೋಕ, ಅಕ್ಬರ್, ಛತ್ರಪತಿ ಶಿವಾಜಿ, ನಮ್ಮ ನಾಡಿನಲ್ಲಿ ಕಿತ್ತೂರ ರಾಣಿ ಚೆನ್ನಮ್ಮ, ಮದಕರಿ ನಾಯಕ, ಟುಪ್ಪು ಸುಲ್ತಾನ, ನಾಲ್ವಡಿ ಕೃಷ್ಣರಾಜ್ ಒಡೆಯರ್ ಮುಂತಾದವರು ಮಾತ್ರ ನಮಗೆ ಇಂದಿಗೂ ಪ್ರಸ್ತುತರಾಗಿ, ಅವಿಸ್ಮರಣೀಯರಾಗಿ ತೋರುತ್ತಾರೆ. ಇವರೆಲ್ಲರ ಜಯಂತ್ಯೋತ್ಸವಗಳನ್ನು ವಿಜೃಂಭಣೆಯಿಂದ ಆಚರಿಸುತ್ತೇವೆ; ಪುಣ್ಯ ತಿಥಿಗಳಂದು ವಿಷಾದದಿಂದ ನೆನಪಿಸಿಕೊಳ್ಳುತ್ತೇವೆ. ಚರಿತ್ರೆಯಲ್ಲಿ ಆಗಿಹೋದ ನೂರಾರು, ಸಾವಿರಾರು ಆಳರಸರಲ್ಲಿ ಇವರನ್ನೇ ಏಕೆ ಅಭಿಮಾನದಿಂದ ಸ್ಮರಿಸಿಕೊಳ್ಳುತ್ತೇವೆ?
    ಯಾರ ಹುಟ್ಟು ಮತ್ತು ಸಾವಿನ ನಡುವಿನ ಅವಧಿಯಲ್ಲಿ ಅವರು ರೂಪಿಸಿಕೊಂಡ ದೃಷ್ಟಿ-ಧೋರಣೆಗಳು, ಅವುಗಳಿಗೆ ನೆಲೆಗಟ್ಟಾಗಿ ಕಾರ್ಯನಿರ್ವಹಿಸಿದ ತತ್ವ ಆದರ್ಶಗಳು, ಅವುಗಳ ಆಧಾರದ ಮೇಲೆ ಮುಂದಡಿಯಿಟ್ಟು ಅವರು ಸಾಧಿಸಿದ ಸಂಗತಿಗಳು ಕೆಲವೊಮ್ಮೆ ಅವರಿಗೆ ಎದುರಾದ ಸೋಲುಗಳು ಇಂದಿನ ನಮ್ಮ ಬದುಕಿಗೆ ಆಪ್ತವಾಗಿ ತಟ್ಟುತ್ತವೆಯೋ, ನಮ್ಮ ಸದ್ಯದ ಬದುಕಿನ ಹಾದಿ ಹಸನು ಮಾಡಿಕೊಳ್ಳುವ ಹಂಬಲ ಹುಟ್ಟಿಸುವುದಲ್ಲದೆ, ಸೂಕ್ತವಾದ ಮಾರ್ಗದರ್ಶನ ಮಾಡುತ್ತವೆಯೋ, ಅಂಥವರ ಹುಟ್ಟು, ಬದುಕು, ಸಾಧನೆ, ಹಿರಿಮೆ, ಗರಿಮೆ, ಸೋಲು-ಸಾವು-ಎಲ್ಲವೂ  ನಮಗೆ ಮಹತ್ವದವುಗಳಾಗಿ ಪರಿಣಮಿಸುತ್ತವೆ.
    ಅಂಥ ಮಹಾವ್ಯಕ್ತಿಗಳಲ್ಲಿ ಛತ್ರಪತಿ ಶಿವಾಜೀ ಮಹಾರಾಜರೂ ಕೂಡ ಒಬ್ಬರಾಗಿದ್ದಾರೆ. ಶಿವಾಜೀ ಒಬ್ಬ ಶ್ರೇಷ್ಠ ರಾಜನಾಗಿದ್ದ ಎಂಬುವುದಕ್ಕೆ ಈ ಬೃಹತ್ ಕಾದಂಬರಿಯ ಉದ್ದಕ್ಕೂ ಅನೇಕ ಘಟನಾಪೂರ್ವ ನಿದರ್ಶನಗಳು ಕಾಣಸಿಗುತ್ತವೆ. ನಮ್ಮ ನೆರೆಯ ರಾಜ್ಯ ಮಹಾರಾಷ್ಟ್ರದ ಬಹುಭಾಗವನ್ನು ಸಮರ್ಥವಾಗಿ ಆಳಿದ ಶಿವಾಜಿಗೂ ಕರ್ನಾಟಕಕ್ಕೂ ಅವಿನಾಭಾವ ಸಂಬಂಧವಿತ್ತು. ಔರಂಗ್ ಜೇಬ್‌ನಂಥ ಬಲಿಷ್ಠ ಸಾಮ್ರಾಟನನ್ನು ಎದುರು ಹಾಕಿಕೊಂಡು ತನ್ನ ಸ್ವಸಾಮರ್ಥ್ಯ ಹಾಗೂ ದಕ್ಷ ಆಡಳಿತದ ಮೂಲಕ ತನ್ನದೇಯಾದ ಸ್ವತಂತ್ರ ರಾಜ್ಯವನ್ನು ಸ್ಥಾಪಿಸಿ, ತನ್ನ ಪಟ್ಟಾಭಿಷೇಕವನ್ನು ಅನೇಕ ಅಡೆ-ತಡೆಗಳನ್ನು ಎದುರಿಸಿ ಸಂಭ್ರಮದಿಂದ ನೆರವೇರಿಸಿಕೊಂಡಿದ್ದ ಧೀರ, ಛತ್ರಪತಿ, ಮಹಾರಾಷ್ಟ್ರದ ನೆಲದಲ್ಲಿ, ಅನುಪಮ ನೃಪನಾಗಿ ರಾಜ್ಯಭಾರ ನಡೆಸಿದ್ದ ವಿರಳ ಭೂಪಾಲಕ. ಅವನೊಂದಿಗೆ ಹೋಲಿಸಬಹುದಾದ ಇನ್ನಿತರ ಆಡಳಿತಗಾರರನ್ನು ಕಾಣಲು ನಾವು ಕರ್ನಾಟಕಕ್ಕೇ ಬರಬೇಕಾಗುತ್ತದೆ; ಬಲಾಢ್ಯ ಬ್ರಿಟಿಷರ ವಿರುದ್ಧ ಸೆಣಸುತ್ತ ಸೆರೆಯಾದ ಕಿತ್ತೂರ ರಾಣಿ ಚೆನ್ನಮ್ಮ; ಅದೇ ಅಜೇಯ ಬ್ರಿಟಿಷರ ವಿರುದ್ಧ ಮೂರು ಸಲ ಹೋರಾಡಿ ಸೋಲಿಸಿ, ಹಿಮ್ಮೆಟ್ಟಿಸಿದ್ದರೂ ನಾಲ್ಕನೇ ಸಲದ ಯುದ್ಧದಲ್ಲಿ ಹೋರಾಡುತ್ತ, ರಣರಂಗದಲ್ಲಿಯೇ ಅಸುನೀಗಿದ್ದ ಸುಲ್ತಾನ ಟಿಪ್ಪು!
    ಈ ಕಾದಂಬರಿ ಸಾದರಪಡಿಸಿರುವಂತೆ ಶಿವಾಜೀ ಒಬ್ಬ ಮಹಾಪ್ರಜಾಪ್ರಿಯ ರಾಜನಾಗಿದ್ದನು. ತನ್ನ ರಾಜ್ಯದ ಸರ್ವಧರ್ಮದವರನ್ನೂ ಸಮಭಾವದಿಂದ ಕಾಣುತ್ತಿದ್ದ ಶ್ರೇಷ್ಟ ಧರ್ಮಾತ್ಮನಾಗಿದ್ದನು. ಬಾಲ್ಯದಿಂದಲೂ ತನ್ನ ಮಾತಾಜೀ ಜೀಜಾಬಾಯಿಯವರ ನಿರ್ದೇಶನದಲ್ಲಿಯೇ ಬೆಳೆದು ದೊಡ್ಡವನಾಗಿದ್ದ ಶಿವಾಜಿಗೆ ಮಹಿಳೆಯರ ಬಗೆಗಿದ್ದ ಗೌರವಾದರಗಳು ಬೇಮಿಸಾಲ್ ಆಗಿದ್ದವು.
    ಒಬ್ಬ ಧರ್ಮಾತೀತ ಸೆಕ್ಯೂಲರ್ ಶೂರ ರಾಜನನ್ನು ಇಂದು ಒಬ್ಬ ಧರ್ಮಾಂಧನಂತೆ ಚಿತ್ರಿಸುತ್ತ ಹಿಂದೂ ಹೃದಯ ಸಾಮ್ರಾಟನೆಂದು ಬಹುಪರಾಕ್ ಹಾಕಿ ಹಾಡಿ ಹೊಗಳುತ್ತಿರುವವರ ಹೊಲಸು ಹುನ್ನಾರಗಳನ್ನು ನಾವಿಂದು ಅರ್ಥಮಾಡಿ-ಕೊಳ್ಳಬೇಕಾಗಿದೆ. ಅವನೊಬ್ಬ ರಾಜನಾಗಿದ್ದ ಅಷ್ಟೇ, ಉತ್ತಮ ರಾಜನಾಗಿದ್ದ, ಪ್ರತ್ಯುತ್ತಮ ರಾಜನಾಗಿದ್ದ. ಧರ್ಮಾಂಧತೆಯನ್ನು ಮೀರಿದ, ಸಂಕುಚಿತ ಮತಾಭಿಮಾನದ ಗಡಿಯಾಚೆಗೆ ವಿಹರಿಸುತ್ತಿದ್ದ ಶ್ರೇಷ್ಠ ರಾಜನಾಗಿದ್ದ. ಅವನ ಅನೇಕ ಆತ್ಮೀಯರು, ಆಪ್ತರು ಮುಸಲ್ಮಾನರಾಗಿದ್ದರು. ಅವನ ದಂಡು ಹಾಗೂ ದಂಡಾಧೀಶರಲ್ಲಿ ಅನೇಕ ಮುಸ್ಲೀಮರಿದ್ದರು. ಮುಸ್ಲಿಮ್ ರಾಜರ ಸಂಚಿನಿಂದ ಬಚಾಯಿಸಿ, ಶಿವಾಜಿಯ ಜೀವ ಉಳಿಸಿದ ಪ್ರಮುಖರೆಲ್ಲ ಮುಸ್ಲೀಮರೇ ಆಗಿದ್ದರು. ಪೋರ್ಚುಗೀಸರು ಮತ್ತು ಬ್ರಿಟಿಷರ ವಿರುದ್ಧ ತನ್ನ ಬಲವರ್ಧಿಸಿಕೊಳ್ಳುವ ಶಿವಾಜಿ ಬಹು ಜಾಣ್ಮೆಯಿಂದ ಒಂದು ಬಲಿಷ್ಠವಾದ ನೌಕಾಪಡೆಯನ್ನೂ ಕೂಡ ಕಟ್ಟಿದ್ದನು. ನಂಬಿವಿರಾ? ಆ ನೌಕಾಪಡೆಯ ಚೀಫ್ ಎಡ್ಮಿರಲ್ ಒಬ್ಬ ಮುಸಲ್ಮಾನನಾಗಿದ್ದನು. ತನ್ನ ತೋಪ್‌ಖಾನೆಗಳ ಜವಾಬ್ದಾರಿಯನ್ನು ಮುಸ್ಲೀಮರಿಗೆ ವಹಿಸಿಕೊಟ್ಟಿದ್ದ ಶಿವಾಜೀ ನಿಜಾರ್ಥದಲ್ಲಿ, ಒಬ್ಬ ಪ್ರಜಾವತ್ಸಲ ರಾಜನಾಗಿದ್ದನೆ ವಿನಾ, ಪರಧರ್ಮದವರ ಬಗೆಗಿನ ಸಂಶಯ ಪಿಶಾಚಿಗೆ ತನ್ನ ತಲೆಯಲ್ಲಿ ಸ್ಥಳ ಕೊಟ್ಟಿರಲಿಲ್ಲ. ಅಂತೆಯೇ ಅವನ ನಂಬಿಕೆಗೆ ನಿಷ್ಟರಾಗಿದ್ದ ಯಾವೊಬ್ಬ ಮುಸ್ಲಿಮ್ ಸೈನಿಕನೂ, ದಂಡಾಧೀಶನೂ ಶಿವಾಜಿಗೆ ದ್ರೋಹ ಬಗೆದಿರಲಿಲ್ಲ. ದ್ರೋಹ ಬಗೆದವರಲ್ಲಿ ಹೆಚ್ಚಿನ ಸಂಖ್ಯೆಯ ಜನರು ಅವನ ಸಂಬಂಧಿ ಆಪ್ತೇಷ್ಟರೇ ಆಗಿದ್ದರು. ಶಿವಾಜಿಯ ಬದುಕಿನುದ್ದಕ್ಕೂ ಅವನ ಜೀವ ಹಿಂಡಿ ಹಿಪ್ಪೆ ಮಾಡಿದವರು, ಅವಕಾಶ ಸಿಕ್ಕಾಗಲೆಲ್ಲ ಅವಮಾನಿಸಿ ಕುಗ್ಗಿಸಲು ಯತ್ನಿಸಿದ ಕುತ್ಸಿತಮತಿಗಳು ವೈದಿಕ ಪುರೋಹಿತರೇ ಆಗಿದ್ದರು. ಶಿವಾಜಿಯ ಪಟ್ಟಾಭಿಷೇಕಕ್ಕೆ ನೂರೆಂಟು ವಿಘ್ನಗಳನ್ನು ಒಡ್ಡಿದ ಪುಣೆಯ ಪುರೋಹಿತಶಾಹಿಯ ಅಂದಿನ ಪುಣೆಯ ಪುರೋಹಿತಶಾಹಿಯ ಇಂದಿನ ವಾರಸುದಾರರೇ ಚರಿತ್ರೆಯನ್ನು ತಿರುಚಿ ಶಿವಾಜಿಯನ್ನು ಒಬ್ಬ ಹಿಂದೂ ರಾಜನೆಂದು ಬಿಂಬಿಸಲು ಹೆಣಗುತ್ತಿದ್ದಾರೆ.
    ಈ ಕಹಿ ಸತ್ಯ ಮಹಾರಾಷ್ಟ್ರದ ಮರಾಠಾ ಮಹಾಜನಗಳಾದಿಯಾಗಿ ಸಕಲ ಹಿಂದುಳಿದ ದಲಿತ-ದಮನಿತ, ಅಲ್ಪ ಸಂಖ್ಯಾತರಿಗೆ ಮನದಟ್ಟಾಗಿದೆ. ಆದ್ದರಿಂದಲೇ ಇಡೀ ಭಾರತದ ಜನತೆ ಈಗ ಶಿವಾಜೀ ಮಹಾರಾಜನನ್ನು ಅಶೋಕ, ಅಕ್ಬರ್, ಟಿಪ್ಪು ಸುಲ್ತಾನನ ಸಾಲಿನಲ್ಲಿ ಬಹು ಹೆಮ್ಮೆಯಿಂದ ಗುರುತಿಸಿ ಗೌರವಿಸುತ್ತಿದ್ದಾರೆ.

Guaranteed safe checkout

Shivaji ; The Great maratha
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading