Free Shipping Charge on Orders above ₹400

Shop Now

Sheru Hoodike : Kali ,Thili ,Nali Sale -10%
Rs. 90.00Rs. 100.00
Vendor: BEETLE BOOK SHOP
Type: PRINTED BOOKS
Availability: 8 left in stock

ಕೆ.ಜಿ. ಕೃಪಾಲ್ ಸುಮಾರು ನಾಲ್ಕು ದಶಕಕ್ಕಿಂತ ಹಿಂದೆ ಜಾಗತಿಕ ಹಣಕಾಸು ವಹಿವಾಟು ಹಾಗೂ ಪ್ರಾದೇಶಿಕ ಹಣಕಾಸು ವಹಿವಾಟುಗಳ ಕುರಿತು ಕನ್ನಡತನದಲ್ಲಿ ಅತ್ಯಂತ ಸರಳ ಭಾಷೆಯಲ್ಲಿ ಜನಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಆರ್ಥಿಕ ಸಾಕ್ಷರತೆಯನ್ನು ಕನ್ನಡ ನೆಲದಲ್ಲಿ ಪಸರಿಸಿದವರು. ಸಾಂಪ್ರದಾಯಿಕ ಚಿಂತನೆಗಳನ್ನು ಆಧುನಿಕರಣದ ಕಾಲಘಟ್ಟದಲ್ಲಿ ಸಕಾಲಿಕಗೊಳಿಸುವುದರ ಜೊತೆಗೆ ಭೂತ, ವರ್ತಮಾನ ಹಾಗೂ ಭವಿಷ್ಯದ ದೃಷ್ಟಿಕೋನದಲ್ಲಿ ಅಧ್ಯಯನವನ್ನು ನಡೆಸಿ ಅದರ ಸಾರವನ್ನು ಜನರ ಮುಂದಿಡುವ ಕೆಲಸ ಮಾಡುತ್ತಾ ಬಂದಿದ್ದಾರೆ. ಬದಲಾಗುತ್ತಿರುವ ಕಾಲಮಾನದಲ್ಲಿ ಎದುರಾಗುತ್ತಿರುವ ಆಹ್ವಾನಕ್ಕೆ ತಕ್ಕಂತೆ ತನ್ನ ಗತಿಯನ್ನು ಬದಲಾಯಿಸಿಕೊಳ್ಳುತ್ತಾ ಬಂದಿರುವ ಆರ್ಥಿಕ ವಲಯದ ವೇಗದ ಜೊತೆ ನಿರಂತರವಾಗಿ ಓಡುತ್ತಾ, ದೇಶ ವಿದೇಶಗಳ ವಿದ್ಯಮಾನಗಳನ್ನು ಕ್ಷಣಕ್ಷಣಕ್ಕೂ ಗ್ರಹಿಸುತ್ತಾ, ಕಾಲದಿಂದ ಕಾಲಕ್ಕೆ ಹೊಸ ತಿಳುವಳಿಕೆಗಳನ್ನು ತಮ್ಮ ತೆಕ್ಕೆಗೆ ಜೋಡಿಸಿಕೊಳ್ಳುತ್ತಾ, ಹಣಕಾಸು ನಿರ್ವಹಣೆ ಅದರಲ್ಲೂ ವಿಶೇಷವಾಗಿಷೇರುಪೇಟೆ ವ್ಯವಹಾರಗಳ ಕುರಿತು ಕನ್ನಡದಲ್ಲಿ ಮಾಹಿತಿಗಳನ್ನು ಒದಗಿಸುವ ನಡೆದಾಡುವ ಜ್ಞಾನಕೋಶವೆಂದೇ ಅವರನ್ನು ಕರೆಯಬಹುದಾಗಿದೆ.

ಉಳಿತಾಯ, ಹೂಡಿಕೆ, ಸಾಲ, ಹಣಕಾಸು ನಿರ್ವಹಣೆ, ಆಸ್ತಿ ಹೀಗೆ ಎಲ್ಲಾ ಶಾಖೆಗಳಲ್ಲಿಯೂ ಹುದುಗಿರುವ ಸಾಧ್ಯತೆಗಳನ್ನು ಜೇನುಹುಳವು ಹೂವುಗಳಿಂದ ಮಕರಂದವನ್ನು ಹೀರಿಜೇನಾಗಿ ಪರಿವರ್ತಿಸಿ ನಮಗೆ ನೀಡುವಂತೆ, ಸಹಸ್ರಾರು ಪುಷ್ಪಗಳ ಮಕರಂದವನ್ನು ಸಂಗ್ರಹಿಸಿ ಸೂಕ್ತ ಮಾಹಿತಿಗಳನ್ನು ಕನ್ನಡದ ಜನರಿಗೆ ಉಣ ಬಡಿಸುತ್ತಾ ಬಂದಿದ್ದಾರೆ. ಅನೇಕ ಮಾರ್ಗದರ್ಶಕ ಸೂತ್ರಗಳು ಈ ಪ್ರಕ್ರಿಯೆಯಲ್ಲಿ ಸಿದ್ಧವಾಗಿದೆ. ಇವೆಲ್ಲವೂ ಕೇವಲ ಸೂತ್ರವಾಗಿ ಉಳಿಯದೆ ಆರ್ಥಿಕ ವಿದ್ವತ್ ಕ್ಷೇತ್ರದ ಪರಿಧಿಯನ್ನು ವಿಸ್ತರಿಸಿಕೊಳ್ಳುತ್ತಾ ಅಧ್ಯಯನದ ದೃಷ್ಟಿಯಿಂದಲೂ ಸಂಗ್ರಹಿಸಿ ಇಡಬಹುದಾದ ಅನೇಕ ಲೇಖನಗಳ ಭಂಡಾರವೇ ಕನ್ನಡದ ಅರ್ಥಸಾಹಿತ್ಯ ಕ್ಷೇತ್ರಕ್ಕೆ ದೊರಕುವಂತಾಗಿದೆ.

-ಶರತ್ ಎಂ.ಎಸ್.

Guaranteed safe checkout

Sheru Hoodike : Kali ,Thili ,Nali
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading