Your cart is empty now.
PRAYA PRAYA PRAYA: YENU THAPPU ABHIPRAYA? | ಪ್ರಾಯ ಪ್ರಾಯ ಪ್ರಾಯ: ಏನು ತಪ್ಪು ಅಭಿಪ್ರಾಯ?
ನಿಮ್ಮ ಭವಿಷ್ಯದ ಬಗ್ಗೆ ಯೋಜನೆಯಿರಲಿ. ಏಕೆಂದರೆ ಇಡೀ ನಿಮ್ಮ ಮುಂದಿನ ಬದುಕನ್ನು ನೀವು ಕಳೆಯಬೇಕಾಗಿರುವುದು ಅದರಲ್ಲೇ. ಹರೆಯದ ಜೊತೆಯಲ್ಲೇ ಹುಟ್ಟುವುದು ಸಾಹಸ. ನಿಮ್ಮಿಷ್ಟದ ಬದುಕನ್ನು ಕಟ್ಟುವ ಸಾಹಸ. ನಿಮ್ಮ ಬದುಕಿಗೆ ಅರ್ಥ ತುಂಬಬಲ್ಲ, ಉದ್ದೇಶ ಮೂಡಿಸಬಲ್ಲ ಸಾಹಸ. “ಎಲ್ಲವನ್ನು ಇನ್ನೂ... ಮಾಡಬೇಕಿದೆ ಎಂಬ ಈ ಒಂದು ಮಾತಲ್ಲಿ ಎಂತಹ ಅದ್ಭುತವಾದ ಸತ್ಯ ಅಡಗಿದೆಯಲ್ಲವೇ?
ನೀವಂದುಕೊಂಡಂತೆ ಬದುಕಲ್ಲಿ ಏನು ನಡೆಯುತ್ತಿಲ್ಲವೆ? ಚಿಂತೆ ಏಕೆ? ಈಗಲೂ ನೀವು ದಾರಿ ಬದಲಿಸಬಹುದು. “ಎಲ್ಲವನ್ನೂ ಇನ್ನೂ... ಮಾಡಬೇಕಿದೆ ನೆನಪಿರಲಿ!
ಈ ಪುಸ್ತಕ ನಿಮ್ಮ ಶುರುವಿಗಷ್ಟೆ ಪುಸ್ತಕವನ್ನು ಪರಿಕರಗಳಿಂದ ತುಂಬಿದ ಪರಿಕರ ಪೆಟ್ಟಿಗೆ ಎಂದುಕೊಳ್ಳಿ, ಮುಂದೆ ನಿಮ್ಮದೇ ಆಲೋಚನೆಗಳನ್ನು, ಯೋಜನೆಗಳನ್ನು, ಯೋಚನೆಗಳನ್ನು ಕಡೆಯಲು... ನಿಮ್ಮ ಇರುವಿಕೆಗೆ ಅರ್ಥ ತುಂಬಲು ಇಲ್ಲಿನ ಪರಿಕರಗಳು ಸಹಕಾರಿಯಾಗುತ್ತವೆ.
ನಿಮ್ಮ ಬದುಕಿಗೆ ಅರ್ಥ ಹಾಗೂ ಉದ್ದೇಶ ತುಂಬುವ ಲೇಖನಗಳು ಈ ಪುಸ್ತಕದಲ್ಲಿ ಸಂಕಲನಗೊಂಡಿವೆ.
ಇನ್ನು ಹುಡುಕಾಟ ನಿಮ್ಮದೇ...!
-ಡಾ।। ಶ್ವೇತಾ ಬಿ.ಸಿ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.