Free Shipping Charge on Orders above ₹300

Shop Now

Nudi Kandaya ( Articles Written by Dr. Hulikunte Murthy) Sale -10%
Rs. 225.00Rs. 250.00
Vendor: BEETLE BOOK SHOP
Type: PRINTED BOOKS
Availability: 10 left in stock

ನುಡಿ ಕಂಡಾಯ'ದ 'ನಡೆ ಬಂಡಾಯವನ್ನು ನೇರವಾಗಿ ನಮ್ಮೆದೆಯ ನೆಲಕ್ಕೆ ಅಕ್ಷರದ ನೇಗಿಲ ಮೂಲಕ ಬರಹವೆಂಬ ಬೀಜಗಳ ಬಿತ್ತುತ್ತಾ ಚಿಂತನೆಯ ಬೆಳೆಯ ಎಳೆಗಳು ಮೂಡುವಂತೆ ಮಾಡುವ ಈ ಪುಸ್ತಕ ನಿಜಕ್ಕೂ ಸಂಗ್ರಹ ಯೋಗ್ಯ. ಸಮಕಾಲೀನ ಸಂಕಟಗಳಿಗೆ ಸ್ಪಂದಿಸುವ ಯುವ ಮನಸ್ಕೊಂದರ ಒಡಲಾಳದ ಬೆರಗು-ಬೇಗುದಿಗಳನ್ನು ಬಿಡಿ ಬರಹಗಳ ಮೂಲಕ ಬಿಚ್ಚಿಟ್ಟ ಹುಲಿಕುಂಟೆ ಮೂರ್ತಿಯವರು ನಾವು ಯೋಚಿಸಿ ಉಪೇಕ್ಷಿಸಿದ್ದನ್ನು ಶ್ರಮ-ಶ್ರದ್ದೆಯಿಂದ ಹೆಣೆದಿಟ್ಟಿದ್ದಾರೆ. ಮೊಬೈಲ್ ಪರದೆಯ ಮೇಲೆ ಬೆರಳ ತುದಿಗಳಿಂದಲೇ ಸಾವಿರಾರು ಸುದ್ದಿಗಳನ್ನು ಸುಮ್ಮನೇ ಸೇರಿಸುತ್ತಾ ಹೋಗುವ ಈ ದರಿದ್ರ- ದಿಕ್ಕೆಟ್ಟ ದಿನಮಾನಗಳಲ್ಲಿ ದಿವಿನಾಗಿ ಕೂತು ದನಿ ಇಲ್ಲದವರ ದುಮ್ಮಾನಗಳನ್ನು ದಾಖಲಿಸಿದ್ದಾರೆ. ಪ್ರಸ್ತುತ ಸನ್ನಿವೇಶಗಳೊಂದಿಗೆ ಮುಖಾಮುಖಿಯಾಗುತ್ತಾ ಮುಖೇಡಿತನವಿಲ್ಲದೆ ಮನದಾಳದ ಸಂದಿಗ್ಧತೆಗಳನ್ನು ಸಾದರಪಡಿಸುವ ಅವರ ಅದು ಅನುಸಂಧಾನ ಈ ಲೇಖನಗಳಲ್ಲಿ ಅವಿರ್ಭವಿಸಿದೆ.

ಕಲ್ಲುಬಂಡೆಯ ಕಿಂಡಿಯೊಳಗೆ ಕುಡಿಯೊಡೆದ ಕಿರು ಗಿಡಗಳಂತೆ ಕಾತರ ಹುಟ್ಟಿಸುವ, ಕಾಳಜಿಯುಕ್ಕಿಸುವ ಮತ್ತು ಕರುಳ ಕಿಚ್ಚೆಬ್ಬಿಸುವ ಬರಹಗಳನ್ನು ಕಕ್ಕುಲಾತಿಯಿಂದ ಕಣ್ಣಕೊಟ್ಟ ಈ ಹೊತ್ತಿಗೆಯು ಹುಲಿಕುಂಟೆಯವರ ಹೋರಾಟದ ಮನಸ್ಥಿತಿಯ ಒತ್ತರಿಕೆಯಾಗಿ ಒಡಮೂಡಿದೆ ಹಾಗೂ ಓದುವವರ ಒಡಲನ್ನು ಒದ್ದೆಯಾಗಿಸುತ್ತದೆ ಮತ್ತು ಒದ್ದಾಡಿಸುತ್ತದೆ.

ಕೆ.ಎನ್. ವಿಜಯ್ ಕುಮಾರ್

Guaranteed safe checkout

Nudi Kandaya ( Articles Written by Dr. Hulikunte Murthy)
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading