ಅತಿಸಣ್ಣ ಕತೆಗಳನ್ನು ಬರೆಯುವುದು ಕಷ್ಟ. ಹೇಳಬೇಕಾದ್ದು ‘ಅಷ್ಟೊಂದು’ ಇರುತ್ತದೆ. ಅದನ್ನು ‘ಇಷ್ಟೇ’ ಮಾಡಿ ಹೇಳುವುದು ಬೆಂಕಿ ಪೆಟ್ಟಿಗೆಯೊಳಗೆ ರೇಷ್ಮೆ ಸೀರೆ ತುರುಕಿಸಿದಷ್ಟೇ ಪ್ರಯಾಸದ ಕೆಲಸ. ಕಥೆಕೂಟದ ೪೦ ಕತೆಗಾರರು ಅಂಥದ್ದೊಂದು ಸಾಹಸ ಮಾಡಿದ್ದಾರೆ.
ಕತೆಗಳನ್ನು ಹೇಳುವ ಶೈಲಿ, ಪಾತ್ರಪರಿಚಯ, ನಿರೂಪಣೆ ಆಧುನಿಕಗೊಳ್ಳುತ್ತಿದ್ದ ಹಾಗೆ ಬದಲಾಗುತ್ತಾ ಹೋಗುತ್ತದೆ. ಎರಡೂವರೆ ಗಂಟೆಯ ಸಿನಿಮಾದಲ್ಲಿ ಹೇಳಬಹುದಾದ್ದನ್ನು ಹದಿನೈದು ನಿಮಿಷಗಳ ಕಿರುಚಿತ್ರದಲ್ಲಿ ಹೇಳಲು ಸಾಧ್ಯ ಅನ್ನುವುದು ಗೊತ್ತಾಗಿದೆ. ಕ್ಲಾಸಿಕ್‌ಗಳ ಕಿರು ಆವೃತ್ತಿಗಳನ್ನು ಹದಿಹರೆಯದ ಓದುಗರು ಇಷ್ಟಪಡುತ್ತಿದ್ದಾರೆ. ಇಲ್ಲಿರುವ ಕಿರುಕತೆಗಳು ಒಂದು ಕ್ಷಣದ ಚರಿತ್ರೆಯನ್ನು ಕಟ್ಟಿಕೊಡುತ್ತವೆ. ಕೆಲವು ಕತೆಗಳು ಅನಂತವನ್ನು ಸ್ಪರ್ಶಿಸಲು ಯತ್ನಿಸಿವೆ. ತಮ್ಮ ಭಾರಕ್ಕೆ ತಾವೇ ಕುಸಿಯದೇ, ಪದಮಿತಿಯ ರೆಕ್ಕೆ ಕಟ್ಟಿಕೊಂಡು ಹಾರುತ್ತಿರುವ ಈ ಹಗುರ ಕತೆಗಳ ಸಂಕಲನ ನಿಮಗೆ ಇಷ್ಟವಾಗುತ್ತದೆ ಎಂಬುದು ನಮ್ಮ ನಂಬಿಕೆ.
- ಸಂಪಾದಕರು
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.