Your cart is empty now.
ಪ್ರಪಂಚದಲ್ಲಿರುವ ಜೀವಿಗಳಲ್ಲಿ ಅತ್ಯಂತ ಸಮೃದ್ಧಿಯಾಗಿರುವುವು ವೈರಸ್ಸುಗಳು. ಅಗಾಧ ಸಾಮರ್ಥ್ಯವಿರುವ ಇವುಗಳ ಜೊತೆಗೆ ಮಾನವತೆ ' ಸೆಣಸುತ್ತಿರುವ ಈ ಸಂದರ್ಭದಲ್ಲಿ ಅವು ಅತ್ಯಂತ ಭಯಾನಕವೂ ಆಗಿಬಿಟ್ಟಿವೆ. ಆದರೆ ವೈರಸ್ಸುಗಳನ್ನು ನಾವೆಷ್ಟು ಅರ್ಥ ಮಾಡಿಕೊಂಡಿದ್ದೇವೆ.?
ಜೀವಿಗಳಲ್ಲಿಯೇ ಬಹಳ ನಿಗೂಢವೆನಿಸಿರುವ ಇವನ್ನು ಕೆಲವೊಮ್ಮೆ ಜೀವಿ ಎಂದು ಪರಿಗಣಿಸಲೂ ಆಗದು. ಇವುಗಳ ಬಗೆಗಿನ ಪ್ರತಿಯೊಂದು ವಿಷಯವೂ ವಿಪರೀತವೆನ್ನಿಸುತ್ತದೆ. ವೈರಸ್ಸುಗಳ ಬಗೆಗೆ 'ಸತ್ಯವೆನ್ನಿಸುವ ಪ್ರತಿಯೊಂದಕ್ಕೂ ಅಪವಾದಗಳಿವೆ. ವೈರಸ್ಸುಗಳ ಪ್ರಪಂಚ ಎಷ್ಟೊಂದು ವೈವಿಧ್ಯಮಯ ಹಾಗೂ ಜಟಿಲವೆಂದರೆ, ಅದನ್ನು ಬೇರೆಯದೇ ಒಂದು ಜಗತ್ತು ಎನ್ನಬಹುದೇನೋ. ಅವನ್ನು ನಾವು ಜೀವಿಯಾಗಿಯೋ, ನಿರ್ಜೀವಿಯೆಂತಲೋ, ಮಾರಕ ಜೀವಿಗಳು ಎಂದೋ, ಜೀವದಾಯಿ ಎಂದೋ ಪರಿಗಣಿಸಬಹುದು. ಅದೇನೇ ಇರಲಿ, ವೈರಸ್ಸುಗಳು ಬದುಕುವ ರೀತಿಯೇ ಸುಂದರ, ಸ್ವಾರಸ್ಯಕರ ಎನ್ನುತ್ತಾರೆ ಕಾಣದ ಲೋಕ: ವೈರಸ್ಸುಗಳ ವೃತ್ತಾಂತ ಎನ್ನುವ ಈ ಪುಸ್ತಕದ ಲೇಖಕ ಪ್ರಣಯ್ ಲಾಲ್ ಯಾವುದೇ ವರ್ಗಕ್ಕೂ ಸೇರದ ಹೊತ್ತಿಗೆ ಇದು. ಇದರಲ್ಲಿ ಚರಿತ್ರೆ, ವಿಜ್ಞಾನ ಹಾಗೂ ಕಥೆಗಳ ಮೂಲಕ ವೈರಸ್ಸುಗಳನ್ನು ಮಾನವ ಚರಿತ್ರೆಯನ್ನಷ್ಟೆ ಅಲ್ಲ, ದೇಹವನ್ನು ರೂಪಿಸಿದ ಪ್ರಧಾನ ಪಾತ್ರಗಳನ್ನಾಗಿ ಚಿತ್ರಿಸಲಾಗಿದೆ. ಅಪರೂಪವೆನ್ನಿಸಿದ ಚಿತ್ರಗಳು, ಕಥೆಗಳು ಹಾಗೂ ಪ್ರಸ್ತುತವೆನ್ನಿಸುವ ವಿಜ್ಞಾನ, ವಿಷಯಗಳೊಂದಿಗೆ ಮಾನವರ ವಿಕಾಸದಲ್ಲಿ ವೈರಸ್ಸುಗಳ ಪಾತ್ರವನ್ನು ವಿವರಿಸುವ ಪ್ರಯತ್ನ ಇದು
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.